ETV Bharat / sports

ಭಾರತದ ಪರ ಧೋನಿ ಆಟ ಮುಗಿದಿದೆ: ಮತ್ತೆ ನೀಲಿ ಜರ್ಸಿ ಧರಿಸುವುದು ಡೌಟ್​ ಎಂದ ಭಜ್ಜಿ!

ಟೀಂ ಇಂಡಿಯಾ ಪರ ಮತ್ತೊಮ್ಮೆ ಧೋನಿ ಜರ್ಸಿ ತೊಡುವುದು ಅನುಮಾನ ಎಂದು ಹರ್ಭಜನ್​ ಸಿಂಗ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

Harbhajan Singh
Harbhajan Singh
author img

By

Published : Jun 2, 2020, 4:11 AM IST

ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ ನಿವೃತ್ತಿ ಬಗ್ಗೆ ಈ ಹಿಂದಿನಿಂದಲೂ ಅನೇಕ ರೀತಿಯ ಮಾತು ಕೇಳಿ ಬರುತ್ತಿದ್ದು, ಇದೀಗ ಹರ್ಭಜನ್​ ಸಿಂಗ್​ ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಅವರು ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಖಂಡಿತವಾಗಿ ಆಡಲಿದ್ದಾರೆ. ಆದರೆ ಮತ್ತೊಮ್ಮೆ ಟೀಂ ಇಂಡಿಯಾ ಪರ ಆಡುವುದು ಅನುಮಾನ. ಈಗಾಗಲೇ ಅವರು ಭಾರತದ ಪರ ತಮ್ಮ ಆಟ ಮುಗಿಸಿದ್ದು, ಮತ್ತೊಮ್ಮೆ ನೀಲಿ ಜರ್ಸಿ ಧರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

MS Dhoni
ಎಂಎಸ್​​ ಧೋನಿ

2019ರ ಐಸಿಸಿ ವಿಶ್ವಕಪ್​​ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಸೋಲು ಕಂಡ ಬಳಿಕ ಧೋನಿ ಟೀಂ ಇಂಡಿಯಾ ಪರ ಕ್ರಿಕೆಟ್​ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಅನೇಕ ಸಲ ಕೇಳಿ ಬಂದಿವೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಟಿ-20 ವಿಶ್ವಕಪ್​​ನಲ್ಲಿ ಸ್ಥಾನ ಪಡೆದುಕೊಳ್ಳುವುದು ನಿರ್ಧಾರಗೊಳ್ಳಲಿದೆ ಎಂದಿದ್ದರು. ಆದರೆ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಐಪಿಎಲ್​ ಮುಂದೂಡಿಕೆಯಾಗಿದೆ. ಮಹೇಂದ್ರ ಸಿಂಗ್​ ಧೋನಿ ಹಾಗೂ ಹರ್ಭಜನ್​ ಸಿಂಗ್​ ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಭಾಗವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.