ETV Bharat / sports

ಇಂದು ದಾದಾ ಹುಟ್ಟುಹಬ್ಬ: ಕ್ರಿಕೆಟರ್​ನಿಂದ ಬಿಸಿಸಿಐ ಅಧ್ಯಕ್ಷ ಪಟ್ಟದವರೆಗಿನ ಗಂಗೂಲಿ ಜರ್ನಿ ಹೀಗಿದೆ - ಭಾರತ ತಂಡದ ನಾಯಕ ಸೌರವ್ ಗಂಗೂಲಿ

ಸೌರವ್ ಗಂಗೂಲಿ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಜೀವನದ ಪ್ರಾರಂಭದಿಂದ, ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಸಂಪೂರ್ಣ ಜೀವನಕಥೆ ಇಲ್ಲಿದೆ.

sourav
sourav
author img

By

Published : Jul 8, 2020, 8:48 AM IST

ಹೈದರಾಬಾದ್: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಗಂಗೂಲಿ 2000 ದಿಂದ 2004ರವರೆಗೆ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರನ್ನು ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಗಂಗೂಲಿ ಅವರ ಕ್ರಿಕೆಟ್ ಜೀವನದ ಪ್ರಾರಂಭದಿಂದ, ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಸಂಪೂರ್ಣ ಜೀವನಕಥೆ ಇಲ್ಲಿದೆ.

ಹಿರಿಯ ಸಹೋದರನಿಂದ ಕ್ರಿಕೆಟ್ ಆಡಲು ಪ್ರೇರಣೆ:

ಸೌರವ್ ಅವರ ಹಿರಿಯ ಸಹೋದರ ಸ್ನೇಹಶಿಶ್ ಬಾಲ್ಯದಿಂದಲೂ ಕ್ರಿಕೆಟ್ ಆಡಲು ಬಯಸಿದ್ದರು. ಸೌರವ್ ತಮ್ಮ ಹಿರಿಯ ಸಹೋದರನ ರೀತಿಯಲ್ಲಿ ತಾವೂ ಕೂಡಾ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಬಾಲ್ಯದಲ್ಲಿ ದಾದಾ ಶಾಲಾ ತಂಡದಲ್ಲಿ ಆಯ್ಕೆಯಾದರು. ಬಳಿಕ ರಾಜ್ಯ ತಂಡಕ್ಕಾಗಿಯೂ ಆಡಿದರು. ಭಾರತೀಯ ತಂಡಕ್ಕಾಗಿ ಆಡುವ ಮನಸ್ಸು ಮಾಡಿದ ದಾದಾ 1992ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣ ಮಾಡಿದರು.

ಮೊದಲ ಬಾರಿಗೆ ಭಾರತೀಯ ತಂಡದ ಜರ್ಸಿ ಧರಿಸುವ ಅವಕಾಶ:

1992ರಲ್ಲಿ ಗಂಗೂಲಿಗೆ ಮೊದಲ ಬಾರಿಗೆ ಭಾರತೀಯ ತಂಡದ ಜರ್ಸಿ ಧರಿಸುವ ಅವಕಾಶ ಸಿಕ್ಕಿತು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಆಯ್ಕೆಯಾಗಿದ್ದರು. ಈ ಸರಣಿಯಲ್ಲಿ ಅವರಿಗೆ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತ್ತು, ಆದರೆ, ಪಂದ್ಯದಲ್ಲಿ ಅವರು ಕೇವಲ ಮೂರು ರನ್ ಗಳಿಸಲು ಸಾಧ್ಯವಾಯಿತು. ಈ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು.

HappyBirthdayDada
ಸೌರವ್ ಗಂಗೂಲಿ ಹುಟ್ಟುಹಬ್ಬ

ತಂಡಕ್ಕೆ ಮರಳಿದ ದಾದಾ:

ಭಾರತ ತಂಡದಲ್ಲಿ ಮತ್ತೆ ಆಡಲು ದಾದಾ ನಾಲ್ಕು ವರ್ಷ ಕಾಯಬೇಕಾಯಿತು. ನಾಲ್ಕು ವರ್ಷಗಳ ಕಾಲ ಸತತ ಪ್ರಯತ್ನದ ಬಳಿಕ, 1996ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಚೊಚ್ಚಲ ಪಂದ್ಯವನ್ನಾಡಿ, ತಮ್ಮ ಮೊದಲ ಎರಡು ಟೆಸ್ಟ್‌ಗಳಲ್ಲಿ ಎರಡು ಶತಕಗಳನ್ನು ಗಳಿಸಿದರು.

ಏಕದಿನ ನಾಯಕತ್ವಕ್ಕೆ ಮರಳಿದ ಸಚಿನ್:

ನಾಲ್ಕು ವರ್ಷಗಳ ಕಾಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಗಂಗೂಲಿಗೆ 1996ರಲ್ಲಿ ಟೈಟಾನ್ ಕಪ್ ಸಮಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂದಿನ ನಾಯಕ ಸಚಿನ್ ತೆಂಡೂಲ್ಕರ್ ಅವಕಾಶ ನೀಡಿದರು. ಪಂದ್ಯದಲ್ಲಿ ಸಚಿನ್ ಅವರೊಂದಿಗೆ ಓಪನಿಂಗ್ ಮಾಡಿದ ಗಂಗೂಲಿ 54 ರನ್ ಗಳಿಸಿದರು. ಸಚಿನ್ ಮತ್ತು ಗಂಗೂಲಿ ಜೋಡಿ ವಿಶ್ವದ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲೊಂದು ಎಂಬುದು ಗಮನಾರ್ಹ

ಜಗಮೋಹನ್ ದಾಲ್ಮಿಯಾಗೆ ಹತ್ತಿರವಾಗಿದ್ದ ಗಂಗೂಲಿ:

ಜಗಮೋಹನ್ ದಾಲ್ಮಿಯಾ ಅವರ ಕಾರಣದಂದಲೇ ಸೌರವ್ ಗಂಗೂಲಿ ಕ್ರಿಕೆಟ್‌ಗೆ ಮರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆಗ ದಾಲ್ಮಿಯಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.

HappyBirthdayDada
ಸೌರವ್ ಗಂಗೂಲಿ ಹುಟ್ಟುಹಬ್ಬ

ಭಾರತ ತಂಡದ ನಾಯಕ ಸೌರವ್:

ಗಂಗೂಲಿಯನ್ನು ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕರನ್ನಾಗಿ ಮಾಡಲಾಯಿತು. ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಗಂಗೂಲಿ ಹಾಗೂ ದಾಲ್ಮಿಯಾ ಸಂಪರ್ಕವೂ ಚರ್ಚೆಗೆ ಬಂದಿತ್ತು. ಸೌರವ್ ಗಂಗೂಲಿಯನ್ನು ನಾಯಕನಾಗಿ ಆಯ್ಕೆ ಮಾಡುವಲ್ಲಿ ಅಂದಿನ ಬಿಸಿಸಿಐ ಅಧ್ಯಕ್ಷ ದಾಲ್ಮಿಯಾ ಅವರ ದೊಡ್ಡ ಕೈವಾಡವಿದೆ ಎಂಬ ಸುದ್ದಿ ದೊಡ್ಡ ಸದ್ದು ಮಾಡಿತ್ತು.

ಆದರೆ, ಗಂಗೂಲಿ ನಾಯಕನಾದ ಕೂಡಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ದಾದಾ ಭಾರತೀಯ ಇತಿಹಾಸದ ಶ್ರೇಷ್ಠ ನಾಯಕರಾದರು. ಅವರ ನಾಯಕತ್ವದಲ್ಲಿ, 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವು ಶ್ರೀಲಂಕಾದೊಂದಿಗೆ ಜಂಟಿ ವಿಜೇತ ತಂಡವಾಗಿತ್ತು. ನಂತರ ಅವರು 2002ದಲ್ಲಿ ನಡೆದ ನ್ಯಾಟ್‌ವೆಸ್ಟ್ ಸರಣಿಯಲ್ಲಿ ಭಾರತೀಯ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 2003ರ ವಿಶ್ವಕಪ್‌ನಲ್ಲಿ ಭಾರತೀಯ ತಂಡ ಫೈನಲ್‌ಗೆ ತಲುಪಿತು.

HappyBirthdayDada
ಸೌರವ್ ಗಂಗೂಲಿ ಹುಟ್ಟುಹಬ್ಬ

ಗ್ರೆಗ್ ಚಾಪೆಲ್ ವಿವಾದ:

2005ರ ಜಿಂಬಾಬ್ವೆ ಪ್ರವಾಸದಲ್ಲಿ ಅಂದಿನ ಭಾರತೀಯ ತಂಡದ ತರಬೇತುದಾರ ಗ್ರೆಗ್ ಚಾಪೆಲ್ ಮತ್ತು ಗಂಗೂಲಿ ನಡುವೆ ವಿವಾದವೊಂದು ಭುಗಿಲೆದ್ದಿತು. ಬುಲವಾಯೊ ಟೆಸ್ಟ್ ಸಮಯದಲ್ಲಿ ಈ ವಿವಾದ ನಡೆದಿದ್ದು, ನಂತರ ಗಂಗೂಲಿಯನ್ನು ನಾಯಕತ್ವದಿಂದ ದೂರವಿಡಲಾಯಿತು. ಚಾಪೆಲ್ ಬಿಸಿಸಿಐಗೆ ಇಮೇಲ್ ಬರೆದಿದ್ದು ಅದು ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಗಂಗೂಲಿಯ ಕ್ರಿಕೆಟ್ ವೃತ್ತಿಜೀವನದ ದೊಡ್ಡ ವಿವಾದ ಇದಾಗಿದೆ.

HappyBirthdayDada
ಸೌರವ್ ಗಂಗೂಲಿ ಹುಟ್ಟುಹಬ್ಬ

ನಿವೃತ್ತಿ ಹೊಂದುವ ನಿರ್ಧಾರ:

2008ರಲ್ಲಿ, ಗಂಗೂಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 85 ರನ್ ಗಳಿಸಿದರು. ಬಳಿಕ ಅವರು ನಿವೃತ್ತಿ ಹೊಂದಿದರು.

ಬಿಸಿಸಿಐ ಅಧ್ಯಕ್ಷರಾದ ಎರಡನೇ ಭಾರತೀಯ ನಾಯಕ ಗಂಗೂಲಿ:

2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಆಯ್ಕೆಯಾದರು. ಭಾರತೀಯ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ನಾಯಕತ್ವದೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಿದ ಗಂಗೂಲಿ ಬಿಸಿಸಿಐನಲ್ಲಿ ಉನ್ನತ ಸ್ಥಾನವನ್ನು ಪಡೆದ ಎರಡನೇ ಭಾರತೀಯ ನಾಯಕ. ಬಿಸಿಸಿಐ ಅಧ್ಯಕ್ಷರಾದ ಮೊದಲ ಭಾರತೀಯ ನಾಯಕ ವಿಜಯನಗ್ರಾಮ್. ಅವರು 1936ರ ಇಂಗ್ಲೆಂಡ್ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ್ದರು. ಅವರು 1954ರಲ್ಲಿ ಬಿಸಿಸಿಐನ ಅಧ್ಯಕ್ಷರಾಗಿದ್ದರು.

ಸಿಎಬಿ ಅಧ್ಯಕ್ಷ:

2015ರಲ್ಲಿ ದಾಲ್ಮಿಯಾ ಸಾವಿನ ನಂತರ ಗಂಗೂಲಿ ಸಿಎಬಿಯ ಉಸ್ತುವಾರಿ ವಹಿಸಿಕೊಂಡರು. 2015ರಿಂದ 2019ರವರೆಗೆ ಅವರು ಸಿಎಬಿ ಅಧ್ಯಕ್ಷರಾಗಿದ್ದರು. ಈಗ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.