ETV Bharat / sports

ಬ್ರಾಡ್ಮನ್​ಗೆ 111ನೇ ಜನ್ಮದಿನ... 71 ವರ್ಷಗಳಿಂದ ಮುರಿಯಲಾಗದ 'ಡಾನ್'ರ 6 ವಿಶ್ವದಾಖಲೆಗಳು - don brsdman

ಆಗಸ್ಟ್​ 27, 1908 ರಲ್ಲಿ ನ್ಯೂ ಸೌತ್​ವೇಲ್ಸ್​ನ ಕೂಟಮುಂಡ್ರದಲ್ಲಿ ಜನಿಸಿದ ಬ್ರಾಡ್ಮನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. 1928 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಬ್ರಾಡ್ಮನ್​ 1948 ರಲ್ಲಿ ನಿವೃತ್ತಿ ಹೊಂದಿದ್ದರು. ಈ ವೇಳೆ ಆಸ್ಟ್ರೇಲಿಯಾ ಪರ 52 ಟೆಸ್ಟ್​ ಪಂದ್ಯಳನ್ನಾಡಿದ್ದು ಇದರಲ್ಲಿ 2 ತ್ರಿಶತಕ, 29 ಶತಕ, ಹಾಗೂ 13 ಅರ್ಧಶತಕ ಸಿಡಿಸಿದ್ದಾರೆ. ಇವರ ಹೆಸರಿನಲ್ಲಿ 12 ದ್ವಿಶತಕವೂ ಕೂಡ ಸೇರಿವೆ.

sir-don-bradman
author img

By

Published : Aug 27, 2019, 12:38 PM IST

ಮುಂಬೈ: ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಠ ಬ್ಯಾಟ್ಸ್​ಮನ್​ ಎಂದೇ ಇಂದಿಗೂ ಕರೆಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ಸರ್​ ಡಾನ್​ ಬ್ರಾಡ್ಮನ್​ಗೆ 111ನೇ ಜನಮದಿನ. ಅವರು ಇಂದು ಕ್ರಿಕೆಟ್​ ಜಗತ್ತಿನಲ್ಲಿಲ್ಲದಿದ್ದರೂ ಅವರ ದಾಖಲೆಗಳೂ, ಕ್ರಿಕೆಟ್​ಗೆ ನೀಡಿದ ಕೊಡುಗೆ ಇನ್ನು ಚಿರವಾಗಿದೆ.

ಆಗಸ್ಟ್​ 27, 1908 ರಲ್ಲಿ ನ್ಯೂ ಸೌತ್​ವೇಲ್ಸ್​ನ ಕೂಟಮುಂಡ್ರದಲ್ಲಿ ಜನಿಸಿದ ಬ್ರಾಡ್ಮನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. 1928 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟ ಬ್ರಾಡ್ಮನ್​ 1948 ರಲ್ಲಿ ನಿವೃತ್ತಿ ಹೊಂದಿದ್ದರು. ಈ ವೇಳೆ ಆಸ್ಟ್ರೇಲಿಯಾ ಪರ 52 ಟೆಸ್ಟ್​ ಪಂದ್ಯಳನ್ನಾಡಿದ್ದು, ಇದರಲ್ಲಿ 2 ತ್ರಿಶತಕ, 29 ಶತಕ, ಹಾಗೂ 13 ಅರ್ಧಶತಕ ಸಿಡಿಸಿದ್ದಾರೆ. ಇವರ ಹೆಸರಿನಲ್ಲಿ 12 ದ್ವಿಶತಕವೂ ಕೂಡ ಸೇರಿದೆ.

Happy 111th Birthday bradman
ಸರ್​ ಡಾನ್ ಬ್ರಾಡ್ಮನ್​​

ಬ್ರಾಡ್ಮನ್​ ಕ್ರಿಕೆಟ್​ ತ್ಯಜಿಸಿ 71 ವರ್ಷವಾದರೂ ಅವರ ಹೆಸರಿನಲ್ಲಿರುವ 5 ದಾಖಲೆಗಳು ಇಂದಿಗೂ ಯಾರಿಂದಲೂ ಬ್ರೇಕ್​ ಮಾಡಲಾಗಿಲ್ಲ. ಅವುಗಳ ಇಲ್ಲಿದೆ.

1. ಅತಿ ಹೆಚ್ಚು ದ್ವಿಶತಕ

ಬ್ರಾಡ್ಮನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 29 ಸೆಂಚುರಿ ಸಿಡಿಸಿದ್ದು, ಅದರಲ್ಲಿ (12) ಹನ್ನೆರಡನ್ನು ದ್ವಿಶತಕಗಳಾಗಿ ಪರಿವರ್ತಿಸಿದ್ದಾರೆ. ಈ ದಾಖಲೆ ಇನ್ನು ಅವರ ಹೆಸರಿನಲ್ಲಿಯೇ ಇದೆ. ಇವರನ್ನು ಬಿಟ್ಟರೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಮಾತ್ರ (11) ದ್ವಿಶತಕಗಳಲ್ಲಿ10ರ ಗಡಿದಾಟಿದ 2ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

Happy 111th Birthday bradman
ಸರ್​ ಡಾನ್ ಬ್ರಾಡ್ಮನ್​​

2. ವೇಗವಾಗಿ 7ನೇ ಶತಕದಿಂದ 29ನೇ ಶತಕ

ಬ್ರಾಡ್ಮನ್​ ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 7ನೇ ಶತಕ ದಾಖಲಿಸಿದ್ದರು. ನಂತರ ಅಲ್ಲಿಂದ ಹಿಂದೆ ತಿರುಗದ ಅವರು, 29ನೇ ಶತಕದ ವರೆಗೂ ಈ ದಾಖಲೆ ಅವರ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಆ ದಾಖಲೆ ಕೂಡ ಯಾರಿಂದಲೂ ಮುರಿಯಲೂ ಸಾಧ್ಯವಾಗಿಲ್ಲ, ಮುಂದೆಯೂ ಸಾಧ್ಯವಾಗುವುದೂ ಇಲ್ಲ ಎನಿಸುತ್ತಿದೆ.

3. 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಹೆಚ್ಚು ರನ್​ಗಳಿಸಿದ ದಾಖಲೆ:

5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಬ್ರಾಡ್ಮನ್​ 974 ರನ್​ಗಳಿಸಿದ ದಾಖಲೆ ಹೊಂದಿದ್ದಾರೆ. 1930 ರ ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಬ್ರಾಡ್ಮನ್​ ಈ ದಾಖಲೆ ಬರೆದಿದ್ದಾರೆ. ಈ ದಾಖಲೆ 89 ವರ್ಷಗಳಾದರೂ ಅವರ ಹೆಸರಿನಲ್ಲಿಯೇ ಇದೆ. ಇವರನ್ನು ಬಿಟ್ಟರೆ ಇಂಗ್ಲೆಂಡ್​ನ ವ್ಯಾಲಿ ಹಮ್ಮಂಡ್ 905 ರನ್​ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

4. ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಹೆಚ್ಚು ರನ್​:

ವಿಶ್ವಕ್ರಿಕೆಟ್​ನ ಪ್ರಸಿದ್ಧ ಟೆಸ್ಟ್​ ಸರಣಿಯಾದ ಆ್ಯಶಸ್​ ಟೆಸ್ಟ್​ ಸರಣಿಗಳಲ್ಲಿ ಬ್ರಾಡ್ಮನ್ 89 ಸರಾಸರಿಯಲ್ಲಿ 37 ಪಂದ್ಯಗಳನ್ನಾಡಿದ್ದು 5028 ರನ್​ಗಳಿಸಿದ್ದಾರೆ. ​

Happy 111th Birthday bradman
ಸರ್​ ಡಾನ್ ಬ್ರಾಡ್ಮನ್​​
5. ವೇಗವಾಗಿ 2000 ದಿಂದ 6000 ರನ್​:

ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 2000 ದಿಂದ 6000 ಗಡಿದಾಟಿದ ದಾಖಲೆ ಇನ್ನು ಬ್ರಾಡ್ಮನ್​ ಹೆಸರಿನಲ್ಲಿಯೇ ಇದೆ. ವೇಗವಾಗಿ 7000 ರನ್​ ದಾಖಲೆಗೆ 4 ರನ್​ ಅಗತ್ಯವಿದ್ದಾಗ ಬ್ರಾಡ್ಮನ್​ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದರು.

6. ಅತಿ ಹೆಚ್ಚು ಬ್ಯಾಟಿಂಗ್​ ಸರಾಸರಿ:

ವಿಶ್ವ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂದಿಗೂ ಹೆಚ್ಚು ಮಾತನಾಡಿಕೊಳ್ಳುವ ವಿಶ್ವದಾಖಲೆಯೆಂದರೆ ಅದು ಬ್ರಾಡ್ಮನ್ ಬ್ಯಾಟಿಂಗ್ ಸರಾಸರಿ. ಅವರು 99.94 ರ ಸರಾಸರಿ ಕಾಯ್ದುಕೊಂಡಿದ್ದಾರೆ. ಇದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರದಂತೆ ಟೆಸ್ಟ್​ ಕ್ರಿಕೆಟ್​ ಇರುವವರೆಗೂ ಈ ದಾಖಲೆಯನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಇದು ಅಕ್ಷರಶಃ ಸತ್ಯ ಏಕೆಂದರೆ ಇವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಸ್ಟಿವ್​ ಸ್ಮಿತ್​ 63.24 ಸರಾಸರಿ ಹೊಂದಿದ್ದಾರೆ. ಇದನ್ನು ನೋಡಿದರೆ ಬ್ರಾಡ್ಮನ್​ ದಾಖಲೆಗೆ ಮುರಿಯುವುದಿರಲಿ ಹತ್ತಿರ ಬರುವ ಬ್ಯಾಟ್ಸ್​ಮನ್​ ಇನ್ನು ಕ್ರಿಕೆಟ್​ನಲ್ಲಿ ಕಾಣಸಿಗುವುದಿಲ್ಲ.​

ಒಟ್ಟಾರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಡಾನ್ ಬ್ರಾಡ್ಮನ್​ ಹೆಸರು ಇಂದಿಗೂ ಅಜರಾಮರವಾಗಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ, ಲಕ್ಷಾಂತರ ಕ್ರಿಕೆಟಿಗರಿಗೆ ಇವರು ಸ್ಫೂರ್ತಿಯಾಗಿದ್ದ ಬ್ರಾಡ್ಮನ್​ ಫೆಬ್ರವರಿ 25 2001 ರಂದು ನಿಧನರಾಗಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.