ನವದೆಹಲಿ: ಐಪಿಎಲ್ ಟೂರ್ನಿಗೂ ಮೊದಲೆ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ವಿವಿಧ ತಂಡಗಳ ನಾಯಕರ ಜೊತೆ ಐಪಿಎಲ್ ಟೂರ್ನಿಯಲ್ಲಿ ಮಂಕಡ್ ರನ್ಔಟ್ ಮಾಡಬಾರದೆಂದು ಚರ್ಚಿಸಲಾಗಿತ್ತೆಂದು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ನಿನ್ನೆ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜಾಸ್ ಬಟ್ಲರ್ ಅವರನ್ನು 'ಮಂಕಡ್' ಮೂಲಕ ರನೌಟ್ ಮಾಡಿದ್ದರು. ನಂತರದ ಸುದ್ದಿಗೋಷ್ಠಿಯಲ್ಲಿ ಮಂಕಡ್ಅನ್ನು ಕ್ರಿಕೆಟ್ ನಿಯಮದಲ್ಲಿ ಸೇರಿಸಲಾಗಿದೆ. ಇದರಲ್ಲಿ ಕ್ರೀಡಾಸ್ಪೂರ್ತಿ ಮಾತೇ ಬರುವುದಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.
If I remember in one of the meetings of captains & match referee where I was also present as chairman it had been decided that if non striking batsman steps out bowler as a courtesy will not run him out @IPL @BCCI
— Rajeev Shukla (@ShuklaRajiv) March 25, 2019 " class="align-text-top noRightClick twitterSection" data="
">If I remember in one of the meetings of captains & match referee where I was also present as chairman it had been decided that if non striking batsman steps out bowler as a courtesy will not run him out @IPL @BCCI
— Rajeev Shukla (@ShuklaRajiv) March 25, 2019If I remember in one of the meetings of captains & match referee where I was also present as chairman it had been decided that if non striking batsman steps out bowler as a courtesy will not run him out @IPL @BCCI
— Rajeev Shukla (@ShuklaRajiv) March 25, 2019
ಅಶ್ವಿನ್ರ ಮಂಕಡ್ಗೆ ಕ್ರಿಕೆಟ್ ವಲಯದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೆ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಈ ಕುರಿತು ಸ್ಪಷ್ಟನೆ ನೀಡಿದ್ದು, ಐಪಿಎಲ್ ಟೂರ್ನಿಯ ಆರಂಭಕ್ಕೂ ಮೊದಲೇ ಮಹೇಂದ್ರ ಸಿಂಗ್ ಧೋನಿ, ಕೊಹ್ಲಿ ಸೇರಿದಂತೆ ವಿವಿಧ ತಂಡಗಳ ನಾಯಕರೊಂದಿಗಿನ ಸಭೆಯಲ್ಲಿ ಮಂಕಡ್ಗೆ ಐಪಿಎಲ್ನಲ್ಲಿ ಯಾವುದೇ ಮಾನ್ಯತೆ ಇಲ್ಲಎಂದು ಚರ್ಚಿಸಲಾಗಿತ್ತು ಎಂದು ಹೇಳುವ ಮೂಲಕ ಅಶ್ವಿನ್ಗೆ ಶಾಕ್ ನೀಡಿದ್ದಾರೆ.
ಬಿಸಿಸಿಐ ಹೇಳಿಕೆ ಏನು?
ಮಂಕಡ್ ಎಂಬುದು ಕ್ರಿಕೆಟ್ನಲ್ಲಿ ಬ್ಯಾಟ್ಸಮನ್ಗಳನ್ನು ಔಟ್ ಮಾಡಲು ಕ್ರಿಕೆಟ್ ಕೌಶಲ್ಯಗಳನ್ನು ಉಪಯೋಗಿಸಬೇಕೆ ಹೊರೆತು ವಾಮಮಾರ್ಗದ ಮೂಲಕ ಎದುರಾಳಿಯನ್ನು ಔಟ್ ಮಾಡುವ ಕೌಶಲ್ಯಗಳಿಂದಲ್ಲ. ಕ್ರಿಕೆಟ್ ಎಂಬುದು ಜಂಟಲ್ಮ್ಯಾನ್ ಗೇಮ್. ಇದರಲ್ಲಿ ಈ ರೀತಿಯ ಅಗೌರವಯುತ ನಡವಳಿಕೆ ಸರಿಯಲ್ಲ ಎಂದಿರುವ ಅವರು ಕ್ರಿಕೆಟ್ ಲಾ ತಿಳಿದುಕೊಂಡಿರುವ ಅಶ್ವಿನ್ ಸ್ಪಿರಿಟ್ ಆಫ್ ಗೇಮ್ ಬಗ್ಗೆಯೂ ಅಲೋಚಿಸಬೇಕೆಂದು ತಿಳಿಸಿದ್ದಾರೆ.
ಮತ್ತೊಬ್ಬ ಅಧಿಕಾರಿ ಈ ಕುರಿತು ಮಾತನಾಡಿದ್ದು ಅಶ್ವಿನ್ ಬಟ್ಲರ್ ಅವರನ್ನು ರನ್ಔಟ್ ಮಾಡಿದ್ದು ಬೆನ್ನಿಗೆ ಚೂರಿ ಹಾಕಿದಂತೆ. ಈ ರೀತಿ ಗೆಲುವು ಸಾಧಿಸುವುದು ಉತ್ತಮ ಕ್ರಮವಲ್ಲ ಎಂದಿದ್ದಾರೆ.
ಅದೇ ರೀತಿ ಪಂದ್ಯದ ನಂತರ ಬಟ್ಲರ್, ಎದುರಾಳಿ ಆಟಗಾರರ ಕೈಕುಲುಕುವ ವೇಳೆ ಅಶ್ವಿನ್ರನ್ನು ಬಿಟ್ಟು ಉಳಿದ ಆಟಗಾರರ ಕೈಕುಲುಕಿದ್ದು ಕೂಡ ಕ್ರೀಡಾ ಸ್ಪೂರ್ತಿ ಮರೆತಂತೆ ಎಂದು ಸಹಾ ಬಿಸಿಸಿಐ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.