ತರೌಬ(ಟ್ರಿನಿಡಾಡ್): ಸ್ಫೋಟಕ ಬ್ಯಾಟ್ಸ್ಮನ್ ಆ್ಯಂಡ್ರೆ ರಸೆಲ್ ಒಳಗೊಂಡ ಜಮೈಕಾ ತಲವಾಸ್ ತಂಡ ಕೇವಲ 118 ರನ್ಗಳ ಗುರಿ ಮುಟ್ಟಲಾಗದೆ 14 ರನ್ಗಳ ಸೋಲುಕಂಡಿದೆ. ಆಶ್ಚರ್ಯವೆಂದರೆ ರಸೆಲ್ ಈ ಪಂದ್ಯದಲ್ಲಿ ಏಕಾಂಗಿಯಾಗಿ ಅರ್ಧಶತಕ ಬಾರಿಸಿದರೂ ಜಮೈಕಾ ತಂಡ ಸೋಲುಕಂಡಿದೆ.
ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ 5 ನೇ ಪಂದ್ಯದಲ್ಲಿ ಗಯಾನ ಅಮೇಜಾನ್ ವಾರಿಯರ್ಸ್ ತಂಡದ ವಿರುದ್ದ ಜಮೈಕಾ ತಂಡ 118 ರನ್ಗಳ ಗುರಿಪಡೆದಿತ್ತು. ಆದರೆ 20 ಓವರ್ಗಳಲ್ಲಿ ಕೇವಲ 104 ರನ್ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿದೆ. ಈ ಮೂಲಕ ಸಿಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಗುರಿ ನೀಡಿ ಡಿಫೆಂಡ್ ಮಾಡಿಕೊಂಡ ದಾಖಲೆಗೆ ಗಯಾನ ತಂಡ ಪಾತ್ರವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಗಯಾನ ತಂಡ ಮುಜೀಬ್ ಉರ್ ರಹಮಾನ್ (3 ವಿಕೆಟ್) ಹಾಗೂ ಕಾರ್ಲೋಸ್ ಬ್ರಾತ್ವೇಟ್(3) ಹಾಗೂ
ಸಂದೀಪ್ ಲೆಮಿಚ್ಚಾನೆ ( ಬೌಲಿಂಗ್ (2) ದಾಳಿಗೆ ತತ್ತರಿಸಿ 19.1 ಓವರ್ಗಳಲ್ಲಿ ಕೇವಲ 118 ರನ್ಗಳಿಗೆ ಆಲೌಟ್ ಆಗಿತ್ತು. ಬ್ರೆಂಡನ್ ಕಿಂಗ್ 29, ಚಂದ್ರಪಾಲ್ ಹೇಮರಾಜ್ 21 ಹಾಗೂ ರಾಸ್ ಟೇಲರ್ 21 ರನ್ಗಳಿಸಿದರು.
ಸುಲಭ ಗುರಿ ಬೆನ್ನತ್ತಿದ ಜಮೈಕಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೇವಲ 4 ರನ್ಗಳಾಗುವಷ್ಟರಲ್ಲಿ ವಾಲ್ಟನ್(0), ಗ್ಲೇನ್ ಫಿಲಿಪ್ಸ್(0) ಹಾಗೂ ಎನ್ ಬೊನರ್(4) ವಿಕೆಟ್ ಕಳೆದುಕೊಂಡಿತು. ನಂತರ ಆಸಿಫ್ ಅಲಿ ಹಾಗೂ ನಾಯಕ ರೋವ್ಮನ್ ಪೋವೆಲ್(23) 30 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಆದರೆ ಮತ್ತೆ ಗಯಾನ ಕಟ್ಟುನಿಟ್ಟಿನ ಬೌಲಿಂಗ್ ದಾಳಿಗೆ ತತ್ತರಿಸಿದ ಜಮೈಕಾ 59 ರನ್ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು.
ಆದರೆ ಆ್ಯಂಡ್ರೆ ರಸೆಲ್ ಏಕಾಂಗಿ ಹೋರಾಟ ನಡೆಸಿದರು. ಅವರು ಕೇವಲ 35 ಎಸೆತಗಳಲ್ಲಿ4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ಗಳಿಸಿದರಾದರೂ ತಂಡವನ್ನು ಗೆಲುವಿನ ಗಡಿ ದಾಟಿಸುವಲ್ಲಿ ವಿಫಲರಾದರು.
20 ಓವರ್ಗಳಲ್ಲಿ ಜಮೈಕಾ 7 ವಿಕೆಟ್ ಕಳೆದುಕೊಂಡು 104 ರನ್ಗಳಿಸಿತು. ಗಯಾನ ಪರ ಕ್ರಿಸ್ ಗ್ರೀನ್ 3 ಓವರ್ಗಳಲ್ಲಿ 10 ರನ್ ನೀಡಿ 2 ವಿಕೆಟ್, ಇಮ್ರಾನ್ ತಾಹೀರ್ 26ಕ್ಕೆ 1, ಕೀಮೋ ಪಾಲ್ 33ಕ್ಕೆ 1 , ನವೀನ್ ಉಲ್ ಹಕ್ 22ಕ್ಕೆ 1 ಅಶ್ಮೆದ್ ನೆದ್ 10ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.