ದುಬೈ: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಾಣುವ ಮೂಲಕ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಇದರ ಮಧ್ಯೆ ಕೂಡ ಶ್ರೇಯಸ್ ಅಯ್ಯರ್ ಪಡೆ ಹೊಸ ದಾಖಲೆ ನಿರ್ಮಾಣ ಮಾಡಿರುವುದು ಮಾತ್ರ ಸುಳ್ಳಲ್ಲ.
ಕಳೆದ 13 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೊದಲ ಸಲ ಫೈನಲ್ ತಲುಪಿದ್ದು, ಈ ಮೂಲಕ ಯಾವತ್ತೂ ನಿರ್ಮಾಣ ಮಾಡದಂತಹ ದಾಖಲೆ ತನ್ನ ಹೆಸರಿಗೆ ಬರೆಯಿಸಿಕೊಂಡಿದೆ. ಪಂದ್ಯ ಮುಕ್ತಾಯಗೊಂಡ ಬಳಿಕ ಇದೇ ವಿಷಯವಾಗಿ ಮಾತನಾಡಿರುವ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ಐಪಿಎಲ್ ಇತಿಹಾಸದಲ್ಲಿ ಮೊದಲ ಸಲ ಫೈನಲ್ ತಲುಪಿರುವುದು ನಿಜಕ್ಕೂ ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ.
ಇದೊಂದು ಅದ್ಭುತ ಜರ್ನಿ. ನನ್ನ ತಂಡದ ಪ್ಲೇಯರ್ಸ್ ಬಗ್ಗೆ ಹೆಮ್ಮೆ ಇದೆ. ಫೈನಲ್ ತಲುಪಿರುವುದು ಸಣ್ಣ ಸಾಧನೆ ಅಲ್ಲ. ಇದೊಂದು ದೊಡ್ಡ ಸಾಧನೆಯಾಗಿದ್ದು, ಪ್ರಶಸ್ತಿ ಗೆದ್ದಿರುವುದಕ್ಕಿಂತಲೂ ದೊಡ್ಡದು ಎಂದಿದ್ದಾರೆ. ಮುಂದಿನ ಟೂರ್ನಿಯಲ್ಲಿ ಮತ್ತಷ್ಟು ಬಲಿಷ್ಠರಾಗಿ ಮೈದಾನಕ್ಕಿಳಿಯಲಿದ್ದೇವೆ ಎಂಬ ಅಭಿಪ್ರಾಯ ಹೊರಹಾಕಿರುವ ಶ್ರೇಯಸ್, ಇದೇ ವೇಳೆ ತಂಡಕ್ಕೆ ಸಪೋರ್ಟ್ ಮಾಡಿರುವ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
-
💙 A season to remember 💙
— Delhi Capitals (Tweeting from 🇦🇪) (@DelhiCapitals) November 10, 2020 " class="align-text-top noRightClick twitterSection" data="
Dilli, #WeRoarTogether in victory and in defeat. A big thank you to all you fans for your constant support and love 💫#YehHaiNayiDilli pic.twitter.com/Dq4ubR2wbG
">💙 A season to remember 💙
— Delhi Capitals (Tweeting from 🇦🇪) (@DelhiCapitals) November 10, 2020
Dilli, #WeRoarTogether in victory and in defeat. A big thank you to all you fans for your constant support and love 💫#YehHaiNayiDilli pic.twitter.com/Dq4ubR2wbG💙 A season to remember 💙
— Delhi Capitals (Tweeting from 🇦🇪) (@DelhiCapitals) November 10, 2020
Dilli, #WeRoarTogether in victory and in defeat. A big thank you to all you fans for your constant support and love 💫#YehHaiNayiDilli pic.twitter.com/Dq4ubR2wbG
ತಂಡದ ಕೋಚ್ ಪಾಂಟಿಂಗ್ ನಮ್ಮೊಂದಿಗೆ ಅದ್ಭುತ ಕೆಲಸ ಮಾಡಿದ್ದಾರೆ. ಅವರು ನಿಜಕ್ಕೂ ಆತ್ಮವಿಶ್ವಾಸದಿಂದ ಕೂಡಿರುವ ಕೋಚ್. ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ತಂಡದ ಆಟಗಾರರಲ್ಲಿ ಪ್ರೇರಣೆ ತುಂಬುವ ಕೆಲಸ ಅವರಿಗೆ ಚೆನ್ನಾಗಿ ಕರಗತವಾಗಿದೆ ಎಂದಿದ್ದಾರೆ.