ಲಂಡನ್ : ವಿಶ್ವಕಪ್‌ನ ಈ ಸಾರಿ ಆಸ್ಟ್ರೇಲಿಯಾ ಗೆಲ್ಲೋದಕ್ಕೆ ಆಗಲ್ಲ. ಹಾಗಾದ್ರೇ ಯಾರು ಈ ಸಾರಿಯ ವರ್ಲ್ಡ್‌ಕಪ್‌ನ ಫೈನಲ್‌ನಲ್ಲಿ ಸೆಣೆಸಾಡ್ತಾರೆ ಅನ್ನೋದನ್ನ ಇಂಗ್ಲೆಂಡ್‌ನ ಮಾಜಿ ಆಪ್ ಸ್ಪಿನ್ ಬೌಲರ್ ಗ್ರ್ಯಾಮ್ ಸ್ವಾನ್ ಹೇಳ್ತಾರೆ ಕೇಳಿ.
ಗ್ರ್ಯಾಮ್ ಸ್ವಾನ್‌ಗೆ ತವರು ಇಂಗ್ಲೆಂಡ್ ಮೇಲೆಯೇ ಒಲವು..
ಟೀಂ ಇಂಡಿಯಾ ಎಲ್ಲ ಹಂತದಲ್ಲೂ ಪರ್ಫೆಕ್ಟಾಗಿದೆಯಂತೆ!
ಪಾಕ್ ವಿರುದ್ಧ ಸರ್ವತೋಮುಖ ಅಮೋಘ ಆಟ ಪ್ರದರ್ಶಿಸಿದ ಟೀಂ ಇಂಡಿಯಾ ಎಲ್ಲ ವಿಧದಲ್ಲೂ ಫೈನಲ್‌ಗೆ ಪ್ರವೇಶಿಸುವ ಅರ್ಹತೆ ಹೊಂದಿದೆ. ಆದರೂ ಇಂಗ್ಲೆಂಡ್ ಮಾತ್ರ ಫೈನಲ್‌ಗೆ ಲಗ್ಗೆ ಹಾಕಲಿದೆ. 'ಆಸೀಸ್ ವಿರುದ್ಧದ ಇವತ್ತಿನ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ನಾನು ಸಪೋರ್ಟ್ ಮಾಡುವೆ. ಲಂಕಾ ವಿರುದ್ಧ ಸೋತ ಮೇಲೆ ಆಂಗ್ಲರ ತಂಡ ಈಗ ಮತ್ತಷ್ಟು ಒಕ್ಕಟ್ಟಾಗಿದೆ. ತುಂಬಾ ಸಂಪ್ರದಾಯ ಪಾಲನೆ ತಂಡಕ್ಕೆ ಮುಳುವಾಗಿದೆ. ಎಲ್ಲ ಅಡೆೆತಡೆ ಮೆಟ್ಟಿ ಆಸೀಸ್‌ಗೆ ಇಂಗ್ಲೆಂಡ್ ಪಂಚ್ ಕೊಡುತ್ತೆ' ಅಂತಾ ಹೇಳಿದ್ದಾರೆ ಸ್ವಾನ್.
ಜೋಶ್ ಬಟ್ಲರ್.. ಜೋರಾಗಿ ರನ್ ಮಳೆಯನ್ನೇ ಸುರಿಸಬಲ್ಲರು!
ಕಿವೀಸ್‌ಗೆ ಇನ್ನೂ ಬಿಸಿ ತಾಕಿಲ್ಲ, ಇಂಡಿಯಾ ವಿರುದ್ಧ ಮಿಸ್ಸಾಯ್ತು!
ಪಾಕ್ ಮತ್ತು ಶ್ರೀಲಂಕಾ ವಿರುದ್ಧ ಸೋತ ಮೇಲೆ ಇಂಗ್ಲೆಂಡ್ 8 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 3ರಲ್ಲಿ ಕನಿಷ್ಠ 2 ಪಂದ್ಯ ಗೆದ್ದರೂ ಸೆಮಿಫೈನಲ್ ಪ್ರವೇಶ ಪಕ್ಕಾ. ಆದರೆ, ಇಂಗ್ಲೆಂಡ್ ಮತ್ತು ಇಂಡಿಯಾ ಫೈನಲ್ ಪ್ರವೇಶಿಸುವ ಬಗ್ಗೆ ಕಾನ್ಫಿಡೆಂಟಾಗಿರುವ ಸ್ವಾನ್ ಆಸ್ಟ್ರೇಲಿಯಾ ಬಗ್ಗೆ ಹೆಚ್ಚಿನ ಹೋಪ್ ಇರಿಸಿಲ್ಲ. ಮೈಕೆಲ್ ಸ್ಟಾರ್ಕ್ ಲಂಕಾ ವಿರುದ್ಧ ಅಬ್ಬರಿಸಲೇ ಇಲ್ಲ. ಹಾಗೇ ಇಂಗ್ಲೆಂಡ್ ಮತ್ತು ಇಂಡಿಯಾ ಜತೆಗೂ ಸ್ಟಾರ್ಕ್ ಕ್ಲಿಕ್ ಆಗಲ್ವಂತೆ. ನ್ಯೂಜಿಲೆಂಡ್ ಈವರೆಗೂ ಕಠಿಣ ಸವಾಲಾಗಬಲ್ಲ ತಂಡಗಳ ಜತೆಗೆ ಆಡಿಲ್ಲ. ಕಿವೀಸ್ ಸಾಮರ್ಥ್ಯ ಇನ್ನೂ ಪರೀಕ್ಷೆಗೊಳಪಟ್ಟಿಲ್ಲ. ಆದರೆ, ಟೀಂ ಇಂಡಿಯಾ ವಿರುದ್ಧ ಪಂದ್ಯ ಮಳೆಗೆ ರದ್ದಾಯ್ತು. ಬ್ಲ್ಯಾಕ್ ಕ್ಯಾಪ್ ಬಾಯ್ಸ್ ಟಫ್ ಎನಿಸುವ ತಂಡದ ಎದುರು ಸೆಣೆಸಿಲ್ಲ. ಎಲ್ಲವನ್ನೂ ನೋಡಿದ್ರೇ ಇಂಡೋ-ಆಂಗ್ಲೋ ಕದನವೇ ಪಕ್ಕಾ ಅಂತಾ ಗ್ರ್ಯಾಮ್ ಸ್ವಾನ್.