ಹೈದರಾಬಾದ್: ಗ್ಲೋಬಲ್ ಟಿ-20 ಕೆನಡ್ ಟೂರ್ನಿಯಲ್ಲಿ ಪಾಕ್ನ ಬೂಮ್ ಬೂಮ್ ಅಫ್ರಿದಿ ಕೇವಲ 40 ಎಸೆತಗಳಲ್ಲಿ 81ರನ್ ಸಿಡಿಸಿ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿದರು. ಈ ವೇಳೆ ಇನ್ನಿಂಗ್ಸ್ವೊಂದರ ಕೊನೆ ಓವರ್ನ ಲಾಸ್ಟ್ ಎಸೆತದಲ್ಲಿ ಇನ್ನೊಂದು ರನ್ ತೆಗೆದುಕೊಳ್ಳೋಣ ಎಂದು ಕೇಳಿರುವ ಎದುರಾಳಿ ಬ್ಯಾಟ್ಸ್ಮನ್ಗೆ ಪಾಗಲ್ ಹೂ ಕ್ಯಾ ಎಂದ ಬೈಯ್ದಿದ್ದಾರೆ.
- — Liton Das (@BattingAtDubai) July 29, 2019 " class="align-text-top noRightClick twitterSection" data="
— Liton Das (@BattingAtDubai) July 29, 2019
">— Liton Das (@BattingAtDubai) July 29, 2019
ಬ್ರಂಪ್ಟನ್ ವೋಲ್ವ್ಸ್ ತಂಡದ ಪರ ಬ್ಯಾಟ್ ಬೀಸಿದ ಶಾಹಿದ್ ಅಫ್ರಿದಿ ನಿನ್ನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 11 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ 81ರನ್ಗಳಿಕೆ ಮಾಡಿದರು. ಇನ್ನು ಕೊನೆಯ ಓವರ್ನ ಲಾಸ್ಟ್ ಎಸೆತದಲ್ಲಿ ಅಫ್ರಿದಿ ಕೇವಲ ಒಂದು ರನ್ಗಳಿಸಲು ಮಾತ್ರ ಶಕ್ತವಾದರು. ಈ ವೇಳೆ ಇನ್ನೊಬ್ಬ ಬ್ಯಾಟ್ಸ್ಮನ್ ವಹಾಬ್ ರಿಯಾಜ್ ಇನ್ನೊಂದು ರನ್ ಪಡೆದುಕೊಳ್ಳಬಹುದೇ? ಎಂದು ಕೇಳಿದ್ದಾರೆ. ಅದಕ್ಕೆ ಆಕ್ರೋಶಗೊಂಡ ಅಫ್ರಿದಿ, ಪಾಗಲ್ ಕ್ಯಾ? ಬೌಲಿಂಗ್ ಕೌನ್ ಕರೇಗಾ? ಎಂದು ಪ್ರಶ್ನೆ ಮಾಡಿದ್ದಾರೆ.
ಬ್ರಂಪ್ಟನ್ ವೋಲ್ವ್ಸ್ ಪರ ಅಫ್ರಿದಿ 81ರನ್ಗಳ ನೆರವಿನಿಂದ 5ವಿಕೆಟ್ ನಷ್ಟಕ್ಕೆ 207ರನ್ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ್ದ ರಾಯಲ್ಸ್ ತಂಡ 9ವಿಕೆಟ್ನಷ್ಟಕ್ಕೆ 180ರನ್ ಮಾತ್ರಗಳಿಕೆ ಮಾಡಿ, 27ರನ್ಗಳ ಸೋಲು ಕಾಣುವಂತಾಯಿತು.
ಸದ್ಯ ಅಫ್ರಿದಿ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.