ಸಿಡ್ನಿ: ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರು 11 ವರ್ಷಗಳಲ್ಲಿ ಏಷ್ಯಾದ ಹೊರಗೆ 20 ಓವರ್‌ಗಳ ಕಾಲ ಬ್ಯಾಟ್ ಬೀಸಿದ ಭಾರತದ ಮೊದಲ ಆರಂಭಿಕ ಜೋಡಿ ಎಂಬ ದಾಖಲೆ ಬರೆದಿದ್ದಾರೆ.
ಗಿಲ್ ಮತ್ತು ರೋಹಿತ್ ಶುಕ್ರವಾರ 27 ಓವರ್ಗಳಲ್ಲಿ 70 ರನ್ ಸೇರಿಸಿದರು. ನಂತರ 27 ನೇ ಓವರ್‌ನ ಕೊನೆಯ ಎಸೆತದಲ್ಲಿ 26 ರನ್ ಗಳಿಸಿದ್ದ ರೋಹಿತ್ ಶರ್ಮಾ ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು.
ಓಪನರ್ ಅಥವಾ ಇನ್ನೊಬ್ಬರ ವೈಫಲ್ಯದಿಂದ ತೊಂದರೆಗೀಡಾದ ಭಾರತ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಆರು ಟೆಸ್ಟ್ ಪಂದ್ಯಗಳಲ್ಲಿ ಆರು ವಿಭಿನ್ನ ಜೋಡಿಗಳನ್ನು ಇನ್ನಿಂಗ್ಸ್ ಆರಂಭಿಸಲು ಬಳಸಿದೆ.
ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪೃಥ್ವಿ ಶಾ ಮತ್ತು ಮಾಯಾಂಕ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದರೆ ಎರಡನೇ ಟೆಸ್ಟ್‌ನಲ್ಲಿ ಗಿಲ್ ಮತ್ತು ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿದ್ರು. ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಮತ್ತು ಗಿಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಆಸ್ಟ್ರೇಲಿಯಾದ ಕೊನೆಯ ಪ್ರವಾಸದಲ್ಲೂ, ಟೀಂ ಇಂಡಿಯಾ ಆರಂಭಿಕರು ಹೆಣಗಾಡಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಹನುಮ ವಿಹಾರಿ ಮತ್ತು ಮಾಯಾಂಕ್ ಅಗರ್ವಾಲ್ ಗರಿಷ್ಠ 18.5 ಓವರ್‌ಗಳ ವರೆಗೆ ಬ್ಯಾಟ್ ಬೀಸಿದ್ದು ಈ ಹಿಂದಿನ ಉತ್ತಮ ದಾಖಲೆಯಾಗಿತ್ತು.