ETV Bharat / sports

'ಗೆಟ್ ವೆಲ್​ ಸೂನ್​ ಮಾಸ್ಟರ್‌ ಬ್ಲಾಸ್ಟರ್': ಸಚಿನ್​ಗೆ​ ವಿವಿಯನ್ ರಿಚರ್ಡ್ಸ್ ಹಾರೈಕೆ - ಕೋವಿಡ್‌-19

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್​ಗೆ ಕೋವಿಡ್‌-19 ಸೋಂಕು ತಗುಲಿದೆ. ಈ ಬಗ್ಗೆ ಅವರು ​ಶನಿವಾರ ಟ್ವೀಟ್​ ಮಾಡಿ ತಿಳಿಸಿದ್ದರು.

Vivian Richards wishes Tendulkar speedy recovery from COVID-19
ಸಚಿನ್​ಗೆ​ ವಿವಿಯನ್ ರಿಚರ್ಡ್ಸ್ ಸಂದೇಶ
author img

By

Published : Mar 28, 2021, 12:37 PM IST

ನವದೆಹಲಿ: ವಿಶ್ವ ಕ್ರಿಕೆಟ್‌ ದಂತಕಥೆ‌ ಸಚಿನ್‌ ತೆಂಡೂಲ್ಕರ್​ಗೆ ಕೋವಿಡ್‌-19 ಸೋಂಕು ತಗುಲಿದ್ದು, ಮಾಜಿ ವಿಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, 'ಸಚಿನ್ ಬೇಗ ಗುಣಮುಖರಾಗಲೆಂದು ಶುಭ ಹಾರೈಸುತ್ತೇನೆ. ಅವರು ಆದಷ್ಟು ಶೀಘ್ರವಾಗಿ ಚೇತರಿಸಿಕೊಳ್ಳಲಿ. ನಿಮಗೆ ವಿಶ್ವಾದ್ಯಂತ ಶತಕೋಟಿ ಅಭಿಮಾನಿಗಳ ಪ್ರಾರ್ಥನೆ ಇದೆ' ಎಂದು ಬರೆದಿದ್ದಾರೆ.

  • Wishing well and a very speedy recovery to my man @sachin_rt. Get well soon little master. You have prayers of billions around the world.

    — Sir Vivian Richards (@ivivianrichards) March 27, 2021 " class="align-text-top noRightClick twitterSection" data=" ">

ಇದನ್ನೂ ಓದಿ : ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ಗೆ ಕೊರೊನಾ ಸೋಂಕು ದೃಢ

ನನಗೆ ಕೋವಿಡ್​ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್​ ಮಾಡಿಸಿದೆ. ಟೆಸ್ಟ್​ ರಿಪೋರ್ಟ್​ನಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಹೋಂ ಕ್ವಾರಂಟೈನ್​ ಆಗಿದ್ದೇನೆ. ವೈದ್ಯರು ಸೂಚಿಸಿದ ಎಲ್ಲ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ. ಕೊರೋನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯ ಸಮುದಾಯಕ್ಕೂ, ದೇಶದ ನನ್ನೆಲ್ಲಾ ಅಭಿಮಾನಿಗಳಿಗೂ ಕೃತಜ್ಞನಾಗಿದ್ದೇನೆ ಎಂದು ತೆಂಡೂಲ್ಕರ್ ನಿನ್ನೆ​ ಟ್ವೀಟ್ ಮಾಡಿದ್ದರು.

ಉಳಿದಂತೆ ಮನೆಯ ಸದಸ್ಯರು ಕೂಡ ಕೋವಿಡ್​ ಪರೀಕ್ಷೆಗೆ ಒಳಗಾಗಿದ್ದು, ಅವರೆಲ್ಲರ ವರದಿ ನೆಗೆಟಿವ್​ ಇದೆ ಎಂದು ಅವರು​ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.