ETV Bharat / sports

ಗಂಗೂಲಿ ಮುಂದಿನ ಚಿಕಿತ್ಸಾ ಯೋಜನೆಯ ಬಗ್ಗೆ ಸೋಮವಾರ ಚರ್ಚೆ: ಆಸ್ಪತ್ರೆ ಹೇಳಿಕೆ

author img

By

Published : Jan 3, 2021, 4:30 PM IST

ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಿದ್ದಾರೆ. ಸಮಯಕ್ಕೆ ತಕ್ಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅವರಿಗೆ ಅಗತ್ಯವಿರುವ ಚಿಕಿತ್ಸಾ ಯೋಜನೆ ಕುರಿತು ಚರ್ಚಿಸಲು ವೈದ್ಯಕೀಯ ಮಂಡಳಿ ಸೋಮವಾರ ಸಭೆ ಸೇರಲಿದೆ ಎಂದು ವುಡ್​ಲ್ಯಾಂಡ್ಸ್​ ಆಸ್ಪತ್ರೆ ಹೆಲ್ತ್​ ಬುಲೆಟಿನ್​​ನಲ್ಲಿ ತಿಳಿಸಿದೆ.

"ಗಂಗೂಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸಿದ್ದಾರೆ. ಸಮಯಕ್ಕೆ ತಕ್ಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ಚಿಕಿತ್ಸಾ ಯೋಜನೆ ಕುರಿತು ಸೋಮವಾರ ಆಸ್ಪತ್ರೆಯ ವೈದ್ಯಕೀಯ ಮಂಡಳಿಯಲ್ಲಿ ತೀರ್ಮಾನ ಮಾಡುತ್ತೇವೆ " ಎಂದು ಹೇಳಿಕೆಯಲ್ಲಿ ಆಸ್ಪತ್ರೆ ತಿಳಿಸಿದೆ.

ಇದನ್ನು ಓದಿ:ಸೌರವ್‌ ಗಂಗೂಲಿ ಸ್ಥಿರ, ಮತ್ತೊಂದು ಆಂಜಿಯೋಪ್ಲಾಸ್ಟಿ ಕುರಿತು ಶೀಘ್ರ ನಿರ್ಧಾರ - ವೈದ್ಯರ ಮಾಹಿತಿ

ಶನಿವಾರ ಮಧ್ಯಾಹ್ನ ಗಂಗೂಲಿ ತಮ್ಮ ಮನೆಯಲ್ಲಿ ಟ್ರೆಡ್​ಮಿಲ್​ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆ ಸೇರಿದ್ದರು. ನಂತರ ಅವರ ಹೃದಯಲ್ಲಿ ಎರಡು ಬ್ಲಾಕೇಜಸ್​ ಉಂಟಾಗಿದ್ದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು.

ಇದನ್ನು ಓದಿ:ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ - ರಾಜೀವ್‌ ಶುಕ್ಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.