ಮುಂಬೈ: ರಾಷ್ಟ್ರಾದ್ಯಂತ ಲಾಕ್ಡೌನ್ ಸಾಂಕ್ರಾಮಿಕ ರೋಗ ಇರುವುದರಿಂದ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಮ್ಮ ತಲೆಕೂದಲನ್ನು ಕಟ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತೆಂಡೂಲ್ಕರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು ಅದರಲ್ಲಿ ಕನ್ನಡಿಯ ಮುಂದೆ ನಿಂತು ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳುತ್ತಿದ್ದಾರೆ. ಈ ಫೋಟೋ ಭಾರಿ ವೈರಲ್ ಆಗುತ್ತಿದೆ.
ಸ್ಕ್ವೇರ್ಕಟ್ಟ್ ಆಡುವುದರಿಂದ ಹಿಡಿದು ನನ್ನ ಸ್ವಂತ ಹೇರ್ಕಟ್ ಮಾಡುವವರೆಗೆ ಧಾವಿಸಿದ್ದೇನೆ, ಯಾವಾಗಲೂ ವಿಭಿನ್ನ ಕೆಲಸಗಳನ್ನು ಮಾಡುವಾಗ ಬಹಳ ಎಂಜಾಯ್ ಮಾಡುತ್ತೇನೆ. ಹೇಗಿದೆ ನನ್ನ ಹೊಸ ಕೇಶವಿನ್ಯಾಸ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹೇರ್ ಸ್ಪೆಶಲಿಸ್ಟ್ ಆಲಿಮ್ಹಾಕೀಮ್ ಹಾಗೂ ಆನಂದ್ ವಿ ನಾಯಕ್ ಅವರನ್ನು ಟ್ಯಾಗ್ ಮಾಡಿಕೊಂಡಿದ್ದಾರೆ.
- " class="align-text-top noRightClick twitterSection" data="
">
ದೇಶೇದೆಲ್ಲೆಡೆ ಈಗಾಗಲೆ ಕೊರೊನದಿಂದ ಸಂಕಷ್ಟದಲ್ಲಿರುವ ಒಂದು ತಿಂಗಳವರೆಗೆ 5000 ಮಂದಿಗೆ ಆಹಾರ ಒದಗಿದಿಸಿದ್ದಾರೆ. 46 ವರ್ಷದ ಸಚಿನ್ ಮಾರ್ಚ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪರಿಹಾರ ನಿಧಿಗೆ 25 ಲಕ್ಷ ಹಾಗೂ ,ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಗಳನ್ನು ದೇಣಿಗೆ ನೀಡಿದ್ದರು.
ಇನ್ನು ಏಪ್ರಿಲ್ 3 ರಂದು ಪ್ರಧಾನಮಂತ್ರಿ ಜೊತೆ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ 40 ಕ್ರೀಡಾಪಟುಗಳಲ್ಲಿ ಸಚಿನ್ ಕೂಡ ಒಬ್ಬರಾಗಿದ್ದರು.
ಬಿಸಿಸಿಐ ಇದರ ಜೊತೆಗೆ ಕೊರೊನಾ ವಿರುದ್ಧ ಹೋರಾಡಲು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ಗಳನ್ನು ಧರಿಸಬೇಕು ಎಂಬುದನ್ನು ತಿಳಿಸಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.
-
#TeamIndia is now #TeamMaskForce!
— BCCI (@BCCI) April 18, 2020 " class="align-text-top noRightClick twitterSection" data="
Join #IndiaFightsCorona and download @mygovindia's @SetuAarogya mobile application 📱@PMOIndia @narendramodi 🇮🇳 pic.twitter.com/M06okJhegt
">#TeamIndia is now #TeamMaskForce!
— BCCI (@BCCI) April 18, 2020
Join #IndiaFightsCorona and download @mygovindia's @SetuAarogya mobile application 📱@PMOIndia @narendramodi 🇮🇳 pic.twitter.com/M06okJhegt#TeamIndia is now #TeamMaskForce!
— BCCI (@BCCI) April 18, 2020
Join #IndiaFightsCorona and download @mygovindia's @SetuAarogya mobile application 📱@PMOIndia @narendramodi 🇮🇳 pic.twitter.com/M06okJhegt
ಶನಿವಾರವಾರವಷ್ಟೆ ಕೊಹ್ಲಿ, ಸಚಿನ್, ದಾದಾ, ರೋಹಿತ್ ಶರ್ಮಾ, ಮಿಥಾಲಿ ರಾಜ್ , ಹರ್ಮನ್ ಪ್ರೀತ್ ಕೌರ್ ಹಾಗೂ ರಾಹುಲ್ ದ್ರಾವಿಡ್ ತಾವೇ ತಯಾರಿಸಿದ ಮಾಸ್ಕ್ಗಳನ್ನು ಧರಿಸುವ ಮೂಲಕ ಮಾಸ್ಕ್ನ ಮಹತ್ವಗಳನ್ನು ಸಾರಿದೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿತ್ತು. ನಂತರ ಈ ವಿಡಿಯೋವನ್ನು ಸ್ವತಃ ನರೇಂದ್ರ ಮೋದಿ ರೀಟ್ವೀಟ್ ಮಾಡಿ ಬಿಸಿಸಿಐ ನಡೆಯನ್ನು ಮೆಚ್ಚಿಕೊಂಡಿದ್ದರು.