ETV Bharat / sports

ಪಕ್ಕದ ಮನೆ ವ್ಯಕ್ತಿ, ಮಗನ ಮೇಲೆ ಹಲ್ಲೆ: ಮಾಜಿ ಕ್ರಿಕೆಟಿಗ ಪ್ರವೀಣ್​ ಕುಮಾರ್​ ಮೇಲೆ ಗಂಭೀರ ಆರೋಪ

author img

By

Published : Dec 15, 2019, 5:52 PM IST

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಪ್ರವೀಣ್​ ಕುಮಾರ್​ ಪಕ್ಕದ ಮನೆ ವ್ಯಕ್ತಿ ಹಾಗೂ ಆತನ ಮಗನ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.

Former India pacer Praveen Kumar
Former India pacer Praveen Kumar

ಮೀರತ್(ಉತ್ತರ ಪ್ರದೇಶ): ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್​ ಕುಮಾರ್ ವಿರುದ್ದ ಪಕ್ಕದ ಮನೆಯ ವ್ಯಕ್ತಿ ಹಾಗು ಅವರ 7 ವರ್ಷದ ಮಗನ ಮೇಲೆ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.

ದೀಪಕ್​ ಶರ್ಮಾ ಎಂಬುವರು ಕ್ರಿಕೆಟಿಗ ಪ್ರವೀಣ್​ ಕುಮಾರ್ ಮೇಲೆ ಹಲ್ಲೆ ಆರೋಪ ಮಾಡಿದ್ದು, ಮಧ್ಯಾಹ್ನ 3 ಗಂಟೆಯ ವೇಳೆ ತನ್ನ ಮಗನೊಂದಿಗೆ ಬಸ್​ ನಿಲ್ದಾಣದಲ್ಲಿ ನಿಂತಿದ್ದಾಗ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಪ್ರವೀಣ್ ಕುಮಾರ್, ನನಗೆ ಹಾಗೂ ನನ್ನ 7 ವರ್ಷದ ಮಗುವಿನ ಹಲ್ಲೆ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ.

ಪ್ರವೀಣ್​ ಕುಮಾರ್​ ಹಲ್ಲೆ ನಡೆಸಿ ನನ್ನ ಕೈ ಮುರಿದಿದ್ದಾರೆ. ನನ್ನ ಮಗನನ್ನೂ ತಳ್ಳಿದ್ದರಿಂದ ಆತನ ಬೆನ್ನಿಗೂ ಗಾಯವಾಗಿದೆ. ಈ ಘಟನೆ ನಡೆದ ನಂತರ ನನಗೆ ಜೀವ ಬೆದರಿಕೆ ಕರೆಗಳು ಬರ್ತಿವೆ ಎಂದು ಅವರು ದೂರಿದ್ದಾರೆ.

ಈ ಬಗ್ಗೆ ದೂರು ಕೊಡಲು ಹೋದರೆ ಪ್ರವೀಣ್​ ಕುಮಾರ್​ ಒಬ್ಬ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ. ಹಾಗಾಗಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ಸಂಧಾನ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ದೀಪಕ್ ಶರ್ಮಾ ಎಎನ್​ಐ ಸುದ್ದಿ ಸಂಸ್ಥೆಗೆ ಹೇಳಿಕೊಂಡಿದ್ದಾರೆ.

ಘಟನೆ ಕುರಿತು ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದು, ಅವರಿಬ್ಬರೂ ನೆರೆಹೊರೆಯವರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆಯ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಪ್ರವೀಣ್ ಕುಮಾರ್,​ ಭಾರತದ ಪರ 68 ಏಕದಿನ, 6 ಟೆಸ್ಟ್​ ಹಾಗೂ 10ಟಿ-20 ಪಂದ್ಯಗಳನ್ನು ಆಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.