ನವದೆಹಲಿ: ಕೋವಿಡ್ ಸೋಂಕು ಪೀಡಿತ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಬಹು-ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಗುರುಗ್ರಾಮ್‌ನ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ 12 ರಂದು ಕೋವಿಡ್ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ 73 ವರ್ಷದ ಚೌಹಾಣ್ ಅವರನ್ನು ಲಖನೌದ ಸಂಜಯ್ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ಗುರುಗ್ರಾಮ್‌ನ ಮೆಡಂತಾಗೆ ಸ್ಥಳಾಂತರಿಸಲಾಯಿತು.
ಇಂದು ಬೆಳಗ್ಗೆ ಚೇತನ್ ಅವರ ಮೂತ್ರಪಿಂಡ ವೈಫಲ್ಯವಾಗಿದ್ದು, ಬಹು-ಅಂಗಾಂಗ ವೈಫಲ್ಯವನ್ನು ಸಹ ಹೊಂದಿದ್ದಾರೆ. ಸದ್ಯ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿದೆ ಎಂದು ಡಿಡಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.