ETV Bharat / sports

ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್​ ಅಶ್ವಿನ್​

ನಾಲ್ಕನೇ ದಿನದಾಟದ ನಂತರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅಶ್ವಿನ್, "ಸಿಡ್ನಿಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೇವೆ. ಇದನ್ನೂ ಕಬ್ಬಿಣದ ಮುಷ್ಠಿಯಿಂದ ಎದುರಿಸಬೇಕಿದೆ" ಎಂದಿದ್ದಾರೆ.

racism in Sydney
ಜನಾಂಗೀಯ ನಿಂದನೆ ಬಗ್ಗೆ ಅಶ್ವಿನ್​
author img

By

Published : Jan 10, 2021, 3:14 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಗುರಿಯಾಗಿಸಿಕೊಂಡು ನಿಂದನೆ ಮಾಡಿದ್ದಕ್ಕಾಗಿ ಕೆಲವು ಪ್ರೇಕ್ಷಕರನ್ನು ಹೊರಹಾಕಿದ ನಂತರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನಾಂಗೀಯ ನಿಂದನೆ ನಮಗೇನು ಹೊಸದಲ್ಲ ಎಂದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ನಾಲ್ಕನೇ ದಿನದಾಟದ ನಂತರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅಶ್ವಿನ್, "ಸಿಡ್ನಿಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೇವೆ. ಇದನ್ನೂ ಕಬ್ಬಿಣದ ಮುಷ್ಠಿಯಿಂದ ಎದುರಿಸಬೇಕಿದೆ" ಎಂದಿದ್ದಾರೆ.

ಭಾರತೀಯರ ಆಟಗಾರರಿಗೆ ಜನಾಂಗೀಯ ನಿಂದನೆ
ಭಾರತೀಯರ ಆಟಗಾರರಿಗೆ ಜನಾಂಗೀಯ ನಿಂದನೆ

2011ರಲ್ಲಿ ವರ್ಣಭೇದ ನೀತಿ ಎಂದರೇನು ಮತ್ತು ಅದರಿಂದ ನಾವು ಹೇಗೆ ಸಣ್ಣವರಾಗುತ್ತೇವೆ ಎಂದು ನನಗೆ ತಿಳಿದಿರಲಿಲ್ಲ ಎಂದು ಅಶ್ವಿನ್ ಈ ಹಿಂದೆ ನಡೆದ ಘಟನೆ ಏಕೆ ಹೆಚ್ಚು ದೊಡ್ಡದಾಗಲಿಲ್ಲ ಎಂಬುವುದನ್ನ ವಿವರಿಸಿದ್ದಾರೆ.

ಇದನ್ನು ಓದಿ:ಆಸೀಸ್ ಅಭಿಮಾನಿಗಳ ದುರ್ನಡತೆ: ಪ್ರೇಕ್ಷಕರ ವಿರುದ್ಧ ಮಾಜಿ ಕ್ರಿಕೆಟಿಗರು ಕಿಡಿ

4ನೇ ದಿನ ಮೊಹಮ್ಮದ್ ಸಿರಾಜ್ ಫೀಲ್ಡಿಂಗ್ ಮಾಡುವ ವೇಳೆ ಕೆಲವು ಪುಂಡ ಪ್ರೇಕ್ಷಕರ ಗುಂಪು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ತಕ್ಷಣ ಸಿರಾಜ್​ ಈ ವಿಷಯವನ್ನು ಅಂಪೈರ್​ ಹಾಗೂ ನಾಯಕ ರಹಾನೆಗೆ ತಿಳಿಸಿದ್ದಾರೆ. ತಕ್ಷಣ ಪಂದ್ಯದ ಅಧಿಕಾರಿಗಳು ಮತ್ತು ಪೊಲೀಸರು ಮೈದಾನದಕ್ಕೆ ಧಾವಿಸಿ 6 ಮಂದಿಯನ್ನು ಮೈದಾನದಿಂದ ಹೊರ ಹಾಕಿದ್ದಾರೆ.

ಈ ಘಟನೆಯನ್ನು ಭಾರತ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಖಂಡಿಸಿದ್ದಾರೆ.

ಇದನ್ನು ಓದಿ:ಟೀಂ ಇಂಡಿಯಾ ಆಟಗಾರರ ಕ್ಷಮೆ ಕೋರಿದ ಕ್ರಿಕೆಟ್ ಆಸ್ಟ್ರೇಲಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.