ಹೈದರಾಬಾದ್: ಕರ್ನಾಟಕ ರಣಜಿ ತಂಡದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಜತೆ ಈಟಿವಿ ಭಾರತ ಎಕ್ಸ್ಕ್ಲೂಸಿವ್ ಸಂದರ್ಶನ ನಡೆಸಿದ್ದು, ಈ ವೇಳೆ ಅನೇಕ ವಿಷಯಗಳ ಕುರಿತು ಮಾತನಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈ ಹಿಂದೆ ರಾಜಸ್ಥಾನ ತಂಡದ ಪರ ಆಡಿದ್ದ ಇವರು ಇದೀಗ ಕಿಂಗ್ಸ್ ಇಲೆವೆನ್ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವುದು ಅಷ್ಟೊಂದು ಕಷ್ಟ ಆಗಲ್ಲ ಎಂದಿದ್ದಾರೆ.
ಸದ್ಯ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದು, ಫ್ಯಾಮಿಲಿ ಜತೆ ಇರಲು ಬಹಳಷ್ಟು ಸಮಯ ಸಿಕ್ಕಿದೆ ಎಂದಿದ್ದಾರೆ. ತಮ್ಮನ್ನು ಎಲ್ಲರೂ ಬಿಜ್ಜು ಎಂದು ಕರೆಯುತ್ತಾರೆ ಎಂಬ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಂತಾರಾಷ್ಟ್ರೀಯ ಪ್ಲೇಯರ್ಗಳ ಜತೆ ಆಡಲು ಅವಕಾಶ ಪಡೆದುಕೊಂಡಿದ್ದರಿಂದ ಹೆಚ್ಚು ಕಲಿಯಬಹುದಾಗಿದ್ದು, ಐಪಿಎಲ್ನಲ್ಲಿ ಆಡುವುದು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವಷ್ಟು ಖುಷಿ ನೀಡುತ್ತದೆ ಎಂದಿದ್ದಾರೆ.
ಸದ್ಯ ಐಪಿಎಲ್ನಲ್ಲಿ ಪಂಜಾಬ್ ತಂಡದ ಪರ ಆಡಲು ಉತ್ಸುಕನಾಗಿದ್ದು, ತಂಡದಲ್ಲಿ ಕರ್ನಾಟಕದವರಾದ ಮಯಾಂಕ್, ಕರುಣ್ ನಾಯರ್, ಕೆ.ಎಲ್.ರಾಹುಲ್ ಹಾಗೂ ಜಗದೀಶ್ ಸುಚ್ಚಿತ್ ಇರುವುದರಿಂದ ಇದು ಒಂದು ರೀತಿಯಲ್ಲಿ ಕರ್ನಾಟಕ ತಂಡವಾಗಿದೆ ಎಂದಿದ್ದಾರೆ.