ETV Bharat / sports

'ನಿಮ್ಮ ಆಟವನ್ನು ಎಂಜಾಯ್​ ಮಾಡಿ', ಶಫಾಲಿಗೆ ಕ್ರಿಕೆಟ್​ ದೇವರ ಸಲಹೆ - ಸಚಿನ್​ ತೆಂಡೂಲ್ಕರ್ ಸುದ್ದಿ

"ಶಫಾಲಿ, ನಿಮ್ಮ ಭೇಟಿ ಸಂತೋಷ ಕೊಟ್ಟಿದೆ. ನನ್ನ ಕೊನೆಯ ರಣಜಿ ಆಟವನ್ನು ನೋಡಲು ನೀವು ಲಹ್ಲಿಗೆ ಬಂದಿದ್ದೀರಿ. ಈಗ ನೀವು ಭಾರತಕ್ಕಾಗಿ ಆಡುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ. ನೀವು ನಿಮ್ಮ ಕನಸುಗಳನ್ನು ಬೆನ್ನತ್ತಿ. ಏಕೆಂದರೆ ಕನಸುಗಳು ನನಸಾಗುತ್ತವೆ"

ಶಫಾಲಿಗೆ ಕ್ರಿಕೆಟ್​ ದೇವರ ಸಲಹೆ
Sachin Tendulkar to Shafali Verma
author img

By

Published : Feb 13, 2020, 1:07 PM IST

ಮುಂಬೈ: ಆಟವನ್ನು ಎಂಜಾಯ್ ಮಾಡಿ ಹಾಗೂ ದೇಶಕ್ಕಾಗಿ ನಿಮ್ಮೆಲ್ಲಾ ಪ್ರಯತ್ನವನ್ನೂ ಹಾಕಿ ಎಂದು ವಿಶ್ವ ಕ್ರಿಕೆಟ್‌ನ​ ದಂತಕತೆ ಸಚಿನ್​ ತೆಂಡೂಲ್ಕರ್ ಭಾರತದ ಮಹಿಳಾ ಕ್ರಿಕೆಟರ್‌ ಶಫಾಲಿ ವರ್ಮಾ ಅವರನ್ನು ಹುರಿದುಂಬಿಸಿದ್ದಾರೆ.

ಮಹಿಳಾ ಕ್ರಿಕೆಟ್​ ವಿಶ್ವಕಪ್​ಗಾಗಿ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿರುವ ವರ್ಮಾರನ್ನು, ಇತ್ತೀಚೆಗೆ ಲಿಟ್ಲ್‌ ಮಾಸ್ಟರ್ ಭೇಟಿ ಮಾಡಿದ್ದರು.

Sachin Tendulkar to Shafali Verma
ಶಫಾಲಿ ವರ್ಮಾ

ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿರುವ ಸಚಿನ್, " ನಿಮ್ಮ ಭೇಟಿ ಸಂತೋಷ ಕೊಟ್ಟಿದೆ. ನನ್ನ ಕೊನೆಯ ರಣಜಿ ಆಟವನ್ನು ನೋಡಲು ನೀವು ಲಹ್ಲಿಗೆ ಬಂದಿದ್ದೀರಿ. ಈಗ ನೀವು ಭಾರತಕ್ಕಾಗಿ ಆಡುತ್ತಿರುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ. ನೀವು ನಿಮ್ಮ ಕನಸುಗಳನ್ನು ಬೆನ್ನತ್ತಿ. ಏಕೆಂದರೆ ಕನಸುಗಳು ನನಸಾಗುತ್ತವೆ'' ಎಂದು ಸ್ಫೂರ್ತಿ ತುಂಬಿದ್ದಾರೆ.

Sachin Tendulkar to Shafali Verma
ಶಫಾಲಿ ವರ್ಮಾ ಪೋಸ್ಟ್​

"ನಾನು ಈ ಆಟವನ್ನು ಕೈಗೆತ್ತಿಕೊಳ್ಳಲು ಕಾರಣ ಸಚಿನ್ ಸರ್. ನನ್ನ ಇಡೀ ಕುಟುಂಬವು ವಿಗ್ರಹಾರಾಧನೆ ಮಾಡಿಲ್ಲ. ಆದರೆ ಸಚಿನ್‌ ಅವರನ್ನು ಅಕ್ಷರಶಃ ಪೂಜಿಸಿದೆ. ಇಂದು ನನ್ನ ಬಾಲ್ಯದ ನಾಯಕನನ್ನು ಭೇಟಿ ಮಾಡಲು ಅವಕಾಶ ಸಿಕ್ಕ ವಿಶೇಷ ದಿನವಾಗಿದೆ. ನನ್ನ ಕನಸು ನನಸಾದ ದಿನ'' ಎಂದು ಬರೆದಿರುವ ಶಫಾಲಿ, ತೆಂಡೂಲ್ಕರ್ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.