ಸಿಡ್ನಿ(ಆಸ್ಟ್ರೇಲಿಯಾ): ಕಳೆದ ಬಾರಿಯ ರನ್ನರ್ ಅಪ್ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು 46 ರನ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡರೂ ನಂತರದ ಮೂರು ಪಂದ್ಯಗಳಲ್ಲೂ ಗೆಲ್ಲುವ ಮೂಲಕ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.
ಸಿಡ್ನಿಯಲ್ಲಿ ನಡೆದ ವಿಶ್ವಕಪ್ನ 16ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ನಡಾಲಿ ಸಿವರ್(57) ಅವರ ಅರ್ಧಶತಕ, ಡೇನಿಯಲ್ ವೇಟ್ 29, ಆ್ಯಮಿ ಜಾನ್ಸ್ ಅವರ 23 ರನ್ಗಳ ನೆರವಿನಿಂದ 143 ರನ್ ಗಳಿಸಿತು.
ವೆಸ್ಟ್ ಇಂಡೀಸ್ ಪರ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ ಶಕಿರಾ ಸೆಲ್ಮನ್, ಆಫಿ ಫ್ಲೆಚರ್, ಅನಿಸಾ ಮೊಹಮ್ಮದ್ ಹಾಗೂ ಸ್ಟೆಫನಿ ಟೇಲರ್ ತಲಾ ಒಂದು ವಿಕೆಟ್ ಪಡೆದರು.
-
England make it to the semi-finals 🙌
— T20 World Cup (@T20WorldCup) March 1, 2020 " class="align-text-top noRightClick twitterSection" data="
A clinical performance from the 2009 champions, who have won three out of their four group games.#ENGvWI | #T20WorldCup
SCORE 📝 https://t.co/RUP0abBY4A pic.twitter.com/kOQXKbNhkF
">England make it to the semi-finals 🙌
— T20 World Cup (@T20WorldCup) March 1, 2020
A clinical performance from the 2009 champions, who have won three out of their four group games.#ENGvWI | #T20WorldCup
SCORE 📝 https://t.co/RUP0abBY4A pic.twitter.com/kOQXKbNhkFEngland make it to the semi-finals 🙌
— T20 World Cup (@T20WorldCup) March 1, 2020
A clinical performance from the 2009 champions, who have won three out of their four group games.#ENGvWI | #T20WorldCup
SCORE 📝 https://t.co/RUP0abBY4A pic.twitter.com/kOQXKbNhkF
ಇಂಗ್ಲೆಂಡ್ ನೀಡಿದ 144 ರನ್ಗಳಿಗೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ 97 ರನ್ಗಳಿಗೆ ಆಲೌಟ್ ಆಗುವ ಮೂಲಕ 46 ರನ್ಗಳ ಸೋಲು ಕಂಡು ವಿಶ್ವಕಪ್ನಿಂದ ಹೊರಬಿದ್ದಿದೆ. ಲೀಯಾನ್ ಕಿರ್ಬಿ 20 ರನ್ ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು.
ಇಂಗ್ಲೆಂಡ್ ಸ್ಟಾರ್ ಸ್ಪಿನ್ನರ್ ಸೋಫಿಯಾ ಎಕ್ಲೆಸ್ಟೋನ್ 3.1 ಓವರ್ಗಳಲ್ಲಿ ಕೇವಲ 7 ರನ್ಗಳಿಗೆ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಸಾರಾ ಗ್ಲೆನ್ 2 ವಿಕೆಟ್ ಪಡೆದು ಸೋಫಿಯಾಗೆ ಸಾಥ್ ನೀಡಿದ್ರು.
ಇಂಗ್ಲೆಂಡ್ ತಂಡ ಈ ಗೆಲುವಿನೊಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಂತರ ಸೆಮಿಫೈನಲ್ ಪ್ರವೇಶಿಸಿದ ಮೂರನೇ ತಂಡ ಎನಿಸಿಕೊಂಡಿದೆ.
ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲು ಇನ್ನೊಂದು ತಂಡಕ್ಕೆ ಅವಕಾಶವಿದ್ದು, ಈ ಸ್ಥಾನಕ್ಕೆ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಈ ಎರಡೂ ತಂಡಗಳು ಸೆಣಸಾಡಲಿವೆ.