ಅಹ್ಮದಾಬಾದ್: ಸಿಕ್ಸರ್ ಹೊಡೆದಾಗ ಚೆಂಡು ಕಾಣೆಯಾದರೆ ಅದಕ್ಕೊಂದು ಅರ್ಥವಿರುತ್ತದೆ. ಆದರೆ ವಿಕೆಟ್ ಮೇಲಿಡುವ ಬೇಲ್ಸ್ಗಳೇ ಮಾಯವಾದರೆ ನಂಬುವುದು ಹೇಗೆ?. ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಅಂಪೈರ್ ಸಹಿತ ಆಟಗಾರರೆಲ್ಲರೂ ಬೇಲ್ಸ್ಗಾಗಿ ಹುಡುಕಾಡಿದ ತಮಾಷೆಯ ಪ್ರಸಂಗ ನಡೆಯಿತು.
ವಾಷಿಂಗ್ಟನ್ ಸುಂದರ್ ಎಸೆದ 43 ನೇ ಓವರ್ನ ಕೊನೆಯ ಎಸೆತವನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ ಓಲಿ ಪೋಪ್ ಮಿಡ್ ವಿಕೆಟ್ನತ್ತ ಹೊಡೆದರು. ಕೊಹ್ಲಿ ಅದ್ಭುತವಾಗಿ ಫೀಲ್ಡಿಂಗ್ ಮಾಡಿ ಚೆಂಡನ್ನು ವಿಕೆಟ್ ಕೀಪರ್ ರತ್ತ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಚೆಂಡು ನೇರವಾಗಿ ಸ್ಟಂಪ್ಗೆ ಬಡಿದು ಬೇಲ್ಸ್ಗಳು ಹಾರಿದವು.
-
Play stopped some time for due to bails missing ....😀😀😀😀😀 pic.twitter.com/MqXeb1jPjp
— Rajesh M B (@rajeshmagnur) March 4, 2021 " class="align-text-top noRightClick twitterSection" data="
">Play stopped some time for due to bails missing ....😀😀😀😀😀 pic.twitter.com/MqXeb1jPjp
— Rajesh M B (@rajeshmagnur) March 4, 2021Play stopped some time for due to bails missing ....😀😀😀😀😀 pic.twitter.com/MqXeb1jPjp
— Rajesh M B (@rajeshmagnur) March 4, 2021
ಡೈರೆಕ್ಟ್ ಹಿಟ್ ಆದ ನಂತರ ಸ್ಟಂಪ್ನತ್ತ ಬಂದ ಅಂಪೈರ್ ಬೇಲ್ಸ್ ಹುಡುಕಾಡಿದ್ದಾರೆ. ಸಿಗದಿದ್ದಾಗ, ಕೊಹ್ಲಿ, ರೋಹಿತ್, ರಹಾನೆ ಸೇರಿದಂತೆ ಎಲ್ಲಾ ಫೀಲ್ಡರ್ಗಳು ಸ್ಟಂಪ್ ಬಳಿ ಬಂದು ಬೇಲ್ಸ್ಗಾಗಿ ಹುಡುಕಾಡಿದ್ದಾರೆ. ಕೊಹ್ಲಿ ವಿಕೆಟ್ ಕೀಪರ್ ಪಂತ್ ಅವರ ಪ್ಯಾಡ್ನಲ್ಲೆಲ್ಲಾ ಹುಡುಕಾಡಿದರು. ಎಲ್ಲೂ ಸಿಗದಿದ್ದಾರೆ ಎಲ್ಲರೂ ಆಶ್ಚರ್ಯಚಕಿತರಾಗಿ ನಿಂತಿದ್ದರು. ಆದರೆ ಸ್ವಲ್ಪ ಸಮಯ ಬಳಿಕ ಬೇಲ್ಸ್ ತಮ್ಮ ಗ್ಲೌಸ್ನಲ್ಲಿರುವುದು ಪಂತ್ ಅರಿವಿಗೆ ಬಂದಿದೆ.
ರಿಷಬ್ ಪಂತ್ ಪಕ್ಕಕ್ಕೆ ನಗುತ್ತ ಬಂದು ರೋಹಿತ್ ಶರ್ಮಾರ ಮೂಲಕ ಅಂಪೈರ್ಗೆ ಬೇಲ್ಸ್ ಕೊಡಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ವರಸೆ ಬದಲಿಸಿದ ವಾನ್: ಪಿಚ್ ಬದಲು ಇಂಗ್ಲಿಷ್ ಬ್ಯಾಟ್ಸ್ಮನ್ಗಳ ವಿರುದ್ಧ ಟೀಕೆ