ಲಂಡನ್: ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಗಾಗಿ ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಸರಣಿ ಪ್ರವಾಸ ಕೈಗೊಳ್ಳಲಿದೆ. ಈ ಎಲ್ಲಾ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ.
ಕೋವಿಡ್ ನಂತರ ಇದು ಇಂಗ್ಲೆಂಡ್ ತಂಡದ ಮೊದಲ ವಿದೇಶಿ ಪ್ರವಾಸವಾಗಲಿದೆ. ಕಳೆದ ಮಾರ್ಚ್ನಲ್ಲಿ ಕೋವಿಡ್ 19 ಕಾರಣ ಶ್ರೀಲಂಕಾ ವಿರುದ್ಧದ ಸರಣಿ ಮೊಟಕುಗೊಳಿಸಿ ತವರಿಗೆ ವಾಪಸ್ ಆಗಿತ್ತು. ಇಂಗ್ಲೆಂಡ್ ತಂಡ ನಂತರ ತವರಿನಲ್ಲಿ ವೆಸ್ಟ್ ಇಂಡೀಸ್, ಪಾಕಿಸ್ತಾನ್, ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್ ವಿರುದ್ಧ ಕೆಲವು ಸರಣಿಗಳನ್ನಾಡಿತ್ತು.
ನವೆಂಬರ್ 27ರಿಂದ ಟಿ20 ಸರಣಿ ಹಾಗೂ ಡಿಸೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ತಂಡವನ್ನು ಇಸಿಬಿ ನವೆಂಬರ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆಯಿದೆ.