ಬರ್ಮಿಂಗ್ ಹ್ಯಾಮ್: ವಿಶ್ವಕಪ್ನ 2 ನೇ ಸೆಮಿಫೈನಲ್ನಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ಬೌಲರ್ಗಳು ಸ್ವಿವ್ ಸ್ಮಿತ್ ಅರ್ಧಶತಕದ ಹೊರೆತಾಗಿಯೂ ಕೇವಲ 223 ರನ್ಗಳಿಗೆ ಕಟ್ಟಿ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಬೇಗನೆ ಮೂರು ವಿಕೆಟ್ ಕಳೆದುಕೊಂಡಯ ಆಘಾತ ಅನುಭವಿಸಿತು. ಆರಂಭಿಕರಾದ ವಾರ್ನರ್(9), ಫಿಂಚ್(0) ಹಾಗೂ ಇಂದೇ ಮೊದಲ ಪಂದ್ಯವಾಡಿದ ಪೀಟರ್ ಹ್ಯಾಂಡ್ಸ್ಕಂಬ್(4) ರನ್ಗಳಿಸಿ ಔಟಾದರು.
-
That's a wrap!
— Cricket World Cup (@cricketworldcup) July 11, 2019 " class="align-text-top noRightClick twitterSection" data="
A brilliant bowling display from England sees Australia all out for 223! Steve Smith battled hard for the Aussies with his 85 – could that be a match-winning knock?#AUSvENG | #CWC19 pic.twitter.com/REgouHphe5
">That's a wrap!
— Cricket World Cup (@cricketworldcup) July 11, 2019
A brilliant bowling display from England sees Australia all out for 223! Steve Smith battled hard for the Aussies with his 85 – could that be a match-winning knock?#AUSvENG | #CWC19 pic.twitter.com/REgouHphe5That's a wrap!
— Cricket World Cup (@cricketworldcup) July 11, 2019
A brilliant bowling display from England sees Australia all out for 223! Steve Smith battled hard for the Aussies with his 85 – could that be a match-winning knock?#AUSvENG | #CWC19 pic.twitter.com/REgouHphe5
ಆದರೆ 5ನೇ ವಿಕೆಟ್ ಜೊತೆಯಾಟದಲ್ಲಿ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸ್ಟಿವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ 103 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ 46 ರನ್ಗಳಿಸಿದ್ದ ಕ್ಯಾರಿ ಆದಿಲ್ ರಶೀದ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸ್ಟೋಯ್ನೀಸ್ ಕೂಡ ರಶೀದ್ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕ್ರೀಸ್ಗೆ ಬರುತ್ತಿದ್ದಂತೆ ಅಬ್ಬರದ ಆಟಕ್ಕೆ ಮುಂದಾದ ಮ್ಯಾಕ್ಸ್ವೆಲ್ 23 ಎಸೆತಗಳಲ್ಲಿ 22 ರನ್ಗಳಿಸಿದ ಆರ್ಚರ್ಗೆ ವಿಕೆಟ್ ಒಪ್ಪಿಸಿ ನಿರಾಸೆಯನುಭವಿಸಿದರು.
ಆದರೆ ಏಕಾಂಗಿಯಾಗಿ ಬಾಲಂಗೋಚಿಗಳ ಜೊತೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸ್ಮಿತ್ 119 ಎಸೆತಗಳಲ್ಲಿ 6 ಬೌಂಡರಿ ಸಹಿತ 85 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಸ್ಟಾರ್ಕ್ 29 ರನ್ಗಳಿಸಿದರೆ, ಕಮ್ಮಿನ್ಸ್6, ಜಾಸನ್ ಬೆಹ್ರೆನ್ಡ್ರಾಫ್ 1 ಹಾಗೂ ನಥನ್ ಲಿಯಾನ್ ಔಟಾಗದೆ 5 ರನ್ಗಳಿಸಿದರು.
ಉತ್ತಮ ಬೌಲಿಂಗ್ ನಡೆಸಿದ ಆರ್ಚರ್ 2 ,ವೋಕ್ಸ್ 3, ರಶೀದ್ 3, ಮಾರ್ಕ್ ವುಡ್ ಒಂದು ವಿಕೆಟ್ ಪಡೆದು ಆಸೀಸ್ ಅಬ್ಬರಕ್ಕೆ ಕಡಿವಾಣ ಹಾಕಿದರು.