ETV Bharat / sports

ಕೊರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ದೇಣಿಗೆ ನೀಡಿದ ಇಂಗ್ಲೆಂಡ್​ ಕ್ರಿಕೆಟಿಗರು - ಕೊರೊನಾ ವಿರುದ್ಧದ ಹೊರಾಟಕ್ಕಾಗಿ ತಮ್ಮ ವೇತನ ನೀಡಿದ ಇಂಗ್ಲೆಂಡ್​ ಕ್ರಿಕೆಟಿಗರು

ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವಿರುದ್ಧದ ಹೊರಾಟಕ್ಕಾಗಿ ತಮ್ಮ ವೇತನ ಮೊತ್ತವನ್ನು ಸ್ವ ಇಚ್ಛೆಯಿಂದ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

England cricketers d\donate salary
ಇಂಗ್ಲೆಂಡ್​ ಕ್ರಿಕೆಟಿಗರ ದೇಣಿಗೆ
author img

By

Published : Apr 4, 2020, 12:19 PM IST

ಲಂಡನ್​: ಕೋವಿಡ್-19 ಹೋರಾಟಕ್ಕಾಗಿ ಇಂಗ್ಲೆಂಡ್​ ಕ್ರಿಕೆಟಿಗರು ತಮ್ಮ ವೇತನವನ್ನು ತಾವಾಗಿಯೇ ಕಡಿತಗೊಳಿಸಿಕೊಂಡು, 5,00,000 ಪೌಂಡ್ಸ್(4.68ಕೋಟಿ ರೂ.)​ ಮೊತ್ತವನ್ನು ದೇಣಿಗೆ ನೀಡುವ ಮೂಲಕ ವಿಶ್ವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ.

ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವಿರುದ್ಧದ ಹೊರಾಟಕ್ಕಾಗಿ ತಮ್ಮ ವೇತನ ಮೊತ್ತವನ್ನು ಸ್ವ ಇಚ್ಛೆಯಿಂದ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಇಂಗ್ಲೆಂಡ್​ ಮತ್ತು ವೇ;ಲ್ಸ್​ ಕ್ರಿಕೆಟ್​ ಮಂಡಳಿಯು ಆಟಗಾರರ ಸಂಬಳದಲ್ಲಿ 20 ರಷ್ಟು ಕಡಿತ ಮಾಡಲು ಪ್ರಸ್ತಾಪಿಸಿತ್ತು. ಅಲ್ಲದೇ ಕ್ರಿಕೆಟಿಗರ ಸಂಘದ ಪ್ರತಿನಿಧಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿತ್ತು.

ಇದೀಗ ಪುರುಷರ ಕ್ರಿಕೆಟಿಗರ ಶೇ 20 ರಷ್ಟು ಅಂದರೆ 5ಲಕ್ಷ ಪೌಂಡ್​ ಮೊತ್ತವನ್ನು ಹಾಗೂ ಮಹಿಳಾ ಕ್ರಿಕೆಟಿಗರ ಏಪ್ರಿಲ್​, ಮೇ ಮತ್ತು ಜೂನ್​ ವೇತನವನ್ನು ಸ್ವಯಂಪ್ರೇರಿತರಾಗಿ ನೀಡಿದ್ದಾರೆ.

ಇಂಗ್ಲೆಂಡ್​ ಕ್ರಿಕೆಟ್ ಮಂಡಳಿ ಜೊತೆ ನಡೆದ ಸಭೆಯಲ್ಲಿ ಎಲ್ಲ ಆಟಗಾರರು 0.5 ಮಿಲಿಯನ್​ ಪೌಂಡ್ಸ್​ ಮೊತ್ತವನ್ನು ನೀಡಲು ಒಪ್ಪಿಕೊಂಡಿದ್ದಾರೆ.

ಈಗಾಗಲೆ ಕೆಲವು ಇಂಗ್ಲೆಂಡ್​ ಕ್ರಿಕೆಟಿಗರು ವೈಯಕ್ತಿಕವಾಗಿ ಕೊರೊನಾ ವೈರಸ್​ ತಡೆಗಾಗಿ ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ. ವಿಕೆಟ್​ ಕೀಪರ್​ ಜೋಸ್​ ಬಟ್ಲರ್​ 2019ರ ವಿಶ್ವಕಪ್​ ಫೈನಲ್​ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಹರಾಜಿಗಿಟ್ಟು ಬಂದ ಹಣವನ್ನು ನೀಡಿದ್ದರೆ, ಮಹಿಳಾ ತಂಡದ ನಾಯಕಿ ಹೀದರ್​ ನೈಟ್​ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.