ETV Bharat / sports

ಇಂಗ್ಲೆಂಡ್‌ ಕ್ರಿಕೆಟ್​ ದಂತಕಥೆ ಜೆಫ್ರಿ ಬಾಯ್‌ಕಾಟ್ ಮತ್ತು ಆಂಡ್ರ್ಯೂ ಸ್ಟ್ರಾಸ್​ಗೆ 'ನೈಟ್‌ಹುಡ್' ಗೌರವ - ಜೆಫ್ರಿ ಬಾಯ್‌ಕಾಟ್

ಇಂಗ್ಲೆಂಡ್‌ ಕ್ರಿಕೆಟ್​ ತಂಡದ ಮಾಜಿ ನಾಯಕರು, ಕ್ರಿಕೆಟ್​ ದಂತಕಥೆಗಳಾದ ಮಾಜಿ ನಾಯಕ ಜೆಫ್ರಿ ಬಾಯ್‌ಕಾಟ್ ಮತ್ತು ಆಂಡ್ರ್ಯೂ ಸ್ಟ್ರಾಸ್‌ಗೆ ಇಂಗ್ಲೆಂಡ್​ನ ಪ್ರತಿಷ್ಟಿತ 'ನೈಟ್‌ಹುಡ್' ಪುರಸ್ಕಾರ ಲಭಿಸಿದೆ. ಇವರಿಬ್ಬರನ್ನೂ ಯುಕೆ ಮಾಜಿ ಪ್ರಧಾನಿ ಥೆರೆಸಾ ಮೇ ಈ ಗೌರವಕ್ಕೆ ಆಯ್ಕೆ ಮಾಡಿದ್ದರು.

ಬಾಯ್‌ಕಾಟ್ ಮತ್ತು ಆಂಡ್ರ್ಯೂ ಸ್ಟ್ರಾಸ್
author img

By

Published : Sep 10, 2019, 3:34 PM IST

ಲಂಡನ್​(ಇಂಗ್ಲೆಂಡ್​): ಇಂಗ್ಲೆಂಡ್‌ ಕ್ರಿಕೆಟ್​ ತಂಡದ ದಂತಕಥೆಗಳಾದ ಮಾಜಿ ನಾಯಕ ಜೆಫ್ರಿ ಬಾಯ್‌ಕಾಟ್ ಮತ್ತು ಆಂಡ್ರ್ಯೂ ಸ್ಟ್ರಾಸ್‌ಗೆ ಇಂಗ್ಲೆಂಡ್​ನ ಪ್ರತಿಷ್ಟಿತ 'ನೈಟ್‌ಹುಡ್' ಪುರಸ್ಕಾರ ಲಭಿಸಿದೆ.

ಇವರಿಬ್ಬರನ್ನೂ ಯುಕೆ ಮಾಜಿ ಪ್ರಧಾನಿ ಥೆರೆಸಾ ಮೇ ಈ ಗೌರವಕ್ಕೆ ಆಯ್ಕೆ ಮಾಡಿದ್ದರು.

ಕ್ರಿಕೆಟ್​ ಇತಿಹಾಸದಲ್ಲೇ ಕೇವಲ ನಾಲ್ಕು ಜನ ಮಾತ್ರ 151ಕ್ಕೂ ಹೆಚ್ಚು ಪ್ರಥಮ ದರ್ಜೆ ಶತಕಗಳನ್ನು ಸಿಡಿಸಿದ್ದಾರೆ. ಅವರಲ್ಲಿ ಬಾಯ್‌ಕಾಟ್ ಕೂಡಾ ಒಬ್ಬರಾಗಿದ್ದು, ಹೆಚ್ಚು ಕಾಲ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದವರಾಗಿ ಉಳಿದುಕೊಂಡಿದ್ದಾರೆ. ಇಂಗ್ಲೆಂಡ್​ ಪರ 108 ಟೆಸ್ಟ್​ ಹಾಗೂ 36 ಏಕದಿನ ಪಂದ್ಯಗಳನ್ನಾಡಿರುವ ಬಾಯ್‌ಕಾಟ್, ಮಾಜಿ ಗೆಳತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 1998 ರಲ್ಲಿ ಫ್ರಾನ್ಸ್‌ನಲ್ಲಿ ಅವರಿಗೆ ದಂಡ ಮತ್ತು ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಅವರು ಪ್ರಕರಣದಲ್ಲಿ ತಮ್ಮ ಮುಗ್ಧತೆಯನ್ನು ಉಳಿಸಿಕೊಂಡಿದ್ದಾರೆ.

78 ವರ್ಷದ ಬಾಯ್‌ಕಾಟ್, ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಬಳಿಕ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಮತ್ತೊಂದೆಡೆ ಇಂಗ್ಲೆಂಡ್​ ಪರ 127 ಏಕದಿನ ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟ್ರಾಸ್, ಇಂಗ್ಲೆಂಡ್ ಟೆಸ್ಟ್ ತಂಡವನ್ನು ಪ್ರಥಮ ಶ್ರೇಯಾಂಕಕ್ಕೆ ಕರೆದೊಯ್ದರು. ಅಲ್ಲದೆ 2010-11ರಲ್ಲಿ ಆಸ್ಟ್ರೇಲಿಯಾದಲ್ಲಿ ಆ್ಯಶಸ್​ ಸರಣಿ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಿವೃತ್ತಿ ಬಳಿಕ ಇಂಗ್ಲೆಂಡ್​ ಪುರುಷರ ತಂಡದ ನಿರ್ದೇಶಕರಾದ ಸ್ಟ್ರಾಸ್, ತಂಡದ ಏಕದಿನ ಕ್ರಮಾಂಕದಲ್ಲಿ ಕೆಲ ಬದಲಾವಣೆಗಳನ್ನು ತರುವಲ್ಲೂ ಪ್ರಮುಖ ಪಾತ್ರ ವಹಿಸಿದರು. ಈ ವರ್ಷ ಇಂಗ್ಲೆಂಡ್​ ವಿಶ್ವಕಪ್​ಗೆ ಮುತ್ತಿಕ್ಕುವಲ್ಲೂ ಸ್ಟ್ರಾಸ್ ಪಾತ್ರ ಪ್ರಮುಖವಾಗಿತ್ತು.

ಸದ್ಯ ಇಂಗ್ಲೆಂಡ್​ನ ಕ್ರಿಕೆಟ್​ ದಂತಕಥೆಯಾದ ಈ ಇಬ್ಬರು ಆಟಗಾರರಿಗೆ ದೇಶದ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

Intro:Body:

Geoffrey Boycott and Andrew Strauss

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.