ಆಕ್ಲೆಂಡ್: ಸೂಪರ್ ಓವರ್ನಿಂದಲೇ ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡಿದ್ದ ಕಿವೀಸ್ ಮತ್ತೆ ಇಂಗ್ಲೆಂಡ್ ವಿರುದ್ಧವೇ ಸೂಪರ್ ಓವರ್ನಲ್ಲಿ ಸೋಲು ಕಾಣುವ ಮೂಲಕ ಮತ್ತೆ ಸರಣಿ ಕಳೆದುಕೊಂಡು ನಿರಾಶೆ ಅನುಭವಿಸಿದೆ.
5 ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಎರಡೂ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದವು. ಇಂದು ನಡೆದ ಕೊನೆಯ ಪಂದ್ಯದಲ್ಲಿ ಮಳೆಯ ಕಾರಣ 11 ಓವರ್ಗಳಿಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲ್ಯಾಂಡ್ 146 ರನ್ಗಳ ಬೃಹತ್ ಮೊತ್ತ ಕಲೆಯಾಕಿತು.
-
WHAT A GAME!
— ICC (@ICC) November 10, 2019 " class="align-text-top noRightClick twitterSection" data="
Another Super Over. Another England win. But this time by a comfortable margin of nine runs.
The visitors take the series 3-2 after a rollicking evening in Auckland.#NZvENG SCORECARD👇https://t.co/GDmzXyby2C pic.twitter.com/Etvn8sFgqf
">WHAT A GAME!
— ICC (@ICC) November 10, 2019
Another Super Over. Another England win. But this time by a comfortable margin of nine runs.
The visitors take the series 3-2 after a rollicking evening in Auckland.#NZvENG SCORECARD👇https://t.co/GDmzXyby2C pic.twitter.com/Etvn8sFgqfWHAT A GAME!
— ICC (@ICC) November 10, 2019
Another Super Over. Another England win. But this time by a comfortable margin of nine runs.
The visitors take the series 3-2 after a rollicking evening in Auckland.#NZvENG SCORECARD👇https://t.co/GDmzXyby2C pic.twitter.com/Etvn8sFgqf
ಆರಂಭಿಕ ಮಾರ್ಟಿನ್ ಗುಪ್ಟಿಲ್ 20 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ನೆರವಿನಿಂದ ಸ್ಫೋಟಕ ಅರ್ಧಶತಕದ ಸಿಡಿಸಿದರೆ, ಮನ್ರೊ 21 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ಸಹಿತ 46 ರನ್ ಹಾಗೂ ಸೈಫರ್ಟ್ 16 ಎಸೆತಗಳಲ್ಲಿ 1ಬೌಂಡರಿ 5 ಸಿಕ್ಸರ್ ಸಹಿತ 39 ರನ್ ಗಳಿಸಿದರು.
ಇಂಗ್ಲೆಂಡ್ ಪರ ಅದಿಲ್ ರಶೀದ್ , ಸಕಿಬ್ ಮಹ್ಮೂದ್, ಸ್ಯಾಮ್ ಕರ್ರನ್ ಹಾಗೂ ಟಾಮ್ ಕರ್ರನ್ ತಲಾ ಒಂದು ವಿಕೆಟ್ ಪಡೆದರು.
147 ರನ್ಗಳ ಗುರಿ ಪಡೆದ ಇಂಗ್ಲೆಂಡ್ ಮೊದಲ ಓವರ್ನಲ್ಲಿ ಟಾಮ್ ಬ್ಯಾಂಟನ್(7), 2ನೇ ಓವರ್ನಲ್ಲಿ ಜೇಮ್ಸ್ ವಿನ್ಸ್(1) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಬ್ಯಾರಿಸ್ಟೋವ್ 18 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 47, ಮಾರ್ಗನ್ 7 ಎಸೆತಗಳಲ್ಲಿ 2 ಸಿಕ್ಸರ್ 1 ಬೌಂಡರಿ ಸಹಿತ 17, ಸ್ಯಾಮನ್ ಕರ್ರನ್ 11 ಎಸೆತಗಳಲ್ಲಿ 22 ರನ್, ಲೆವಿಸ್ ಗ್ರೆಗೊರಿ 6, ಟಾಮ್ ಕರ್ರನ್ 12, ಬಿಲ್ಲಿಂಗ್ಸ್ 11,ಜೋರ್ಡಾನ್ 12 ರನ್ಗಳಿಸಿ ಪಂದ್ಯ ಟೈ ಗೊಳಿಸಿದರು.
ಸೂಪರ್ ಓವರ್: ಸೂಪರ್ ಓವರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮಾರ್ಗನ್(9) ಬೈರ್ಸ್ಟೊವ್(8) ನೆರವಿನಿಂದ 17 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನೆತ್ತಿದ ಕಿವೀಸ್ 1 ವಿಕೆಟ್ ಕಳೆದುಕೊಂಡು ಕೇವಲ 8 ರನ್ ಗಳಿಸಿ ಸೋಲನುಭವಿಸಿ 9 ರನ್ಗಳ ಸೋಲನುಭವಿಸಿತು.