ಮ್ಯಾಂಚೆಸ್ಟರ್: ಕ್ಯಾಪ್ಟನ್ ಇಯಾನ್ ಮಾರ್ಗನ್ ಆಕರ್ಷಕ ಶತಕ (148ರನ್) ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಫಲವಾಗಿ ಅಫ್ಘಾನಿಸ್ತಾನದ ವಿರುದ್ಧ ಇಂಗ್ಲೆಂಡ್ ಭರ್ಜರಿ 150 ರನ್ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್ ತಂಡ ಜಾನಿ ಬೈರ್‌ಸ್ಟೋವ್(90), ರೂಟ್(88) ಹಾಗೂ ಕ್ಯಾಪ್ಟನ್(148)ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 397 ರನ್ಗಳಿಕೆ ಮಾಡಿತು.
-
6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣#EoinMorgan blasted a world-record 17 sixes in a spectacular innings of 148 from just 71 balls! 💥 #CWC19 pic.twitter.com/SbUl0RsUSD
— ICC (@ICC) June 18, 2019 " class="align-text-top noRightClick twitterSection" data="
">6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣#EoinMorgan blasted a world-record 17 sixes in a spectacular innings of 148 from just 71 balls! 💥 #CWC19 pic.twitter.com/SbUl0RsUSD
— ICC (@ICC) June 18, 20196️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣6️⃣#EoinMorgan blasted a world-record 17 sixes in a spectacular innings of 148 from just 71 balls! 💥 #CWC19 pic.twitter.com/SbUl0RsUSD
— ICC (@ICC) June 18, 2019
ಬೃಹತ್ 398 ರನ್ಗಳ ಗುರಿ ಬೆನ್ನತ್ತಿದ್ದ ಅಫ್ಘಾನ್ ಆರಂಭದಲ್ಲೇ ನೂರ್ ಅಲಿ(0)ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಇದಾದ ಬಳಿಕ ಒಂದಾದ ಕ್ಯಾಪ್ಟನ್ ನಯೀಬ್ ಹಾಗೂ ರಹಮತ್ ಶಾ ತಂಡವನ್ನು ಮುನ್ನಡೆಸಿದರು. 37 ರನ್ಗಳಿಸಿದ ವೇಳೆ ಕ್ಯಾಪ್ಟನ್ ವಿಕೆಟ್ ಕಳೆದುಕೊಂಡಿತು. ತದನಂತರ ಶಾ ಕೂಡ 46 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರಿಂದ ತಂಡ 104 ರನ್ ಗಳಿಸುವಷ್ಟರಲ್ಲಿ 3ವಿಕೆಟ್ ಕಳೆದುಕೊಂಡಿತು.
ಇದಾದ ಬಳಿಕ ಹಸ್ಮತುಲ್ಲಾ ಶಾಹಿದಿ(76) ಅಸ್ಗರ್ ಅಫ್ಘನ್(44) ತಂಡವನ್ನು 200ರ ಗಡಿ ದಾಟುವಂತೆ ಮಾಡಿದರು.ಇವರ ವಿಕೆಟ್ ಬೀಳುತ್ತಿದ್ದಂತೆ ಅಫ್ಘಾನ್ ಬ್ಯಾಟ್ಸ್ಮನ್ಗಳು ಒಬ್ಬೊಬ್ಬರೇ ಪೆವಿಲಿಯನ್ ಸೇರಿಕೊಂಡರು.
ಕೊನೆಯದಾಗಿ ತಂಡ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 247 ರನ್ಗಳಿಸಿದ್ದರಿಂದ 150 ರನ್ಗಳ ಸೋಲು ಕಾಣುವಂತಾಯಿತು. ಇಂಗ್ಲೆಂಡ್ ಪರ ಆರ್ಚರ್ ಹಾಗೂ ರಶೀದ್ ತಲಾ 3 ವಿಕೆಟ್ ಪಡೆದುಕೊಂಡರೆ, ಮಾರ್ಕ್ ವುಡ್ 2 ವಿಕೆಟ್ ಕಿತ್ತರು.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.