ETV Bharat / sports

ಇಂಗ್ಲೆಂಡ್ ಬ್ಯಾಟ್ಸ್​ಮನ್​ ಜೇಮ್ಸ್​ ವಿನ್ಸ್​ಗೆ ಕೋವಿಡ್ 19 ದೃಢ - ಜೋ ಡೆನ್ಲಿ

ಪ್ರಸ್ತುತ ವಿನ್ಸ್​ಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ತಕ್ಷಣ ಅವರು 2ನೇ ಟೆಸ್ಟ್​ಗೆ ಒಳಗಾಗಿದ್ದಾರೆ. ಆದರೂ ಮುಂದಿನ 10 ದಿನಗಳ ಕಾಲ ಅವರು ಸೆಲ್ಫ್ ಐಸೊಲೇಶನ್​​ಗೆ ಒಳಗಾಗುಲಿದ್ದಾರೆ ಎಂದು ವರದಿಯಾಗಿದೆ.

ಜೇಮ್ಸ್​ ವಿನ್ಸ್​ಗೆ ಕೋವಿಡ್ 19 ಪಾಸಿಟಿವ್​​
ಜೇಮ್ಸ್​ ವಿನ್ಸ್​ಗೆ ಕೋವಿಡ್ 19 ಪಾಸಿಟಿವ್​​
author img

By

Published : Nov 9, 2020, 8:28 PM IST

ಲಂಡನ್​: ಇಂಗ್ಲೆಂಡ್ ತಂಡದ ಬ್ಯಾಟ್ಸ್​ಮನ್​ ಜೇಮ್ಸ್​ ವಿನ್ಸ್​ಗೆ​ ಕೋವಿಡ್ 19 ದೃಢಪಟ್ಟಿದ್ದು, ಮುಂಬರುವ ಪಿಎಸ್​ಎಲ್​ ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ. ಪ್ರಸ್ತುತ ವಿನ್ಸ್​ಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ತಕ್ಷಣ ಅವರು 2ನೇ ಟೆಸ್ಟ್​ಗೆ ಒಳಗಾಗಿದ್ದಾರೆ. ಆದರೂ ಮುಂದಿನ 10 ದಿನಗಳ ಕಾಲ ಅವರು​ ಸೆಲ್ಫ್ ಐಸೊಲೇಶನ್​​ಗೆ ಒಳಗಾಗುಲಿದ್ದಾರೆ ಎಂದು ವರದಿಯಾಗಿದೆ.

ನವೆಂಬರ್​ 14 ರಿಂದ ಆರಂಭವಾಗಲಿರುವ ಪಿಎಸ್​ಎಲ್​ ಪ್ಲೇ ಆಫ್ಸ್​ ಪಂದ್ಯಗಲ್ಲಿ ವಿನ್ಸ್​ ಅವರು ಮುಲ್ತಾನ್​ ಸುಲ್ತಾನ್​ ತಂಡದ ಪರವಾಗಿ ವಿದೇಶಿ ಆಟಗಾರನಾಗಿ ಆಡಬೇಕಿತ್ತು. ವಿನ್ಸ್​ ಕೋವಿಡ್​ 19ನಿಂದ ಲೀಗ್​ ಸ್ತಗಿತಗೊಳ್ಳುವ ಮುನ್ನ 5 ಇನ್ನಿಂಗ್ಸ್​ಗಳಲ್ಲಿ 155 ರನ್​ಗಳಿಸಿದ್ದರು. ವರದಿಗಳ ಪ್ರಕಾರ ವಿನ್ಸ್​ ಬದಲಿಗೆ ಇಂಗ್ಲೆಂಡ್​ನ ಜೋ ಡೆನ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಭಾನುವಾರವಷ್ಟೇ ಪಿಎಸ್​ಎಲ್​ನಲ್ಲಿ ಆಡಬೇಕಿದ್ದ ಬಾಂಗ್ಲಾದೇಶದ ಆಲ್​ರೌಂಡರ್ ಮಹಮದುಲ್ಲಾ ಕೂಡ ಕೋವಿಡ್​ ಸೋಂಕು ತಗುಲಿದ ಹಿನ್ನಲೆ ಟೂರ್ನಿಯಿಂದ ಹೊರಬಿದ್ದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.