ಅಹ್ಮದಾಬಾದ್: ಅಕ್ಸರ್ ಪಟೇಲ್ ಮತ್ತು ಅಶ್ವಿನ್ ಸ್ಪಿನ್ ದಾಳಿಗೆ ಉತ್ತರಿಸುವಲ್ಲಿ ವಿಫಲವಾದ ಇಂಗ್ಲೆಂಡ್ ತಂಡ 2ನೇ ಇನ್ನಿಂಗ್ಸ್ನಲ್ಲಿ ಕೇವಲ 81 ರನ್ಗಳಿಗೆ ಆಲೌಟ್ ಆಗಿ, ಭಾರತಕ್ಕೆ 49 ರನ್ಗಳ ಟಾರ್ಗೆಟ್ ನೀಡಿದೆ.
33ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಅಕ್ಸರ್ ಪಟೇಲ್ ಎಸೆದ ಮೊದಲ ಓವರ್ನಲ್ಲೇ ಆರಂಭಿಕ ಕ್ರಾಲೆ ಮತ್ತು ಜಾನಿ ಬೈರ್ಸ್ಟೋವ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.
-
Axar Patel and R Ashwin run through England’s line-up to set India a target of 49 to win ✨#INDvENG ➡️ https://t.co/0unCGUOHmI pic.twitter.com/43pxZ9rz9C
— ICC (@ICC) February 25, 2021 " class="align-text-top noRightClick twitterSection" data="
">Axar Patel and R Ashwin run through England’s line-up to set India a target of 49 to win ✨#INDvENG ➡️ https://t.co/0unCGUOHmI pic.twitter.com/43pxZ9rz9C
— ICC (@ICC) February 25, 2021Axar Patel and R Ashwin run through England’s line-up to set India a target of 49 to win ✨#INDvENG ➡️ https://t.co/0unCGUOHmI pic.twitter.com/43pxZ9rz9C
— ICC (@ICC) February 25, 2021
ಡೊಮೆನಿಕ್ ಸಿಬ್ಲೀ 7 ರನ್ ಅಕ್ಸರ್ ಪಟೇಲ್ಗೆ 3ನೇ ಬಲಿಯಾದರು. ಈ ಹಂತದಲ್ಲಿ ಒಂದಾದ ನಾಯಕ ರೂಟ್(19) ಮತ್ತು ಸ್ಟೋಕ್ಸ್(25) 4ನೇ ವಿಕೆಟ್ಗೆ 31 ರನ್ ಸೇರಿಸಿದರು. 34 ಎಸೆತಗಳಲ್ಲಿ 25 ರನ್ಗಳಿಸಿದ್ದ ಸ್ಟೋಕ್ಸ್ ತಮ್ಮ ಬದ್ದ ಎದುರಾಳಿಗೆ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು.
-
Milestones ✅
— BCCI (@BCCI) February 25, 2021 " class="align-text-top noRightClick twitterSection" data="
Fifers ✅
Wickets galore ✅
We've witnessed it all on Day 2️⃣ here in Ahmedabad 👌🏻#TeamIndia need 4️⃣9️⃣ runs to win #INDvENG #PinkBallTest @Paytm
Follow the match 👉 https://t.co/9HjQB6TZyX pic.twitter.com/T4Rr039HW3
">Milestones ✅
— BCCI (@BCCI) February 25, 2021
Fifers ✅
Wickets galore ✅
We've witnessed it all on Day 2️⃣ here in Ahmedabad 👌🏻#TeamIndia need 4️⃣9️⃣ runs to win #INDvENG #PinkBallTest @Paytm
Follow the match 👉 https://t.co/9HjQB6TZyX pic.twitter.com/T4Rr039HW3Milestones ✅
— BCCI (@BCCI) February 25, 2021
Fifers ✅
Wickets galore ✅
We've witnessed it all on Day 2️⃣ here in Ahmedabad 👌🏻#TeamIndia need 4️⃣9️⃣ runs to win #INDvENG #PinkBallTest @Paytm
Follow the match 👉 https://t.co/9HjQB6TZyX pic.twitter.com/T4Rr039HW3
ನಂತರ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ತಂಡ ಕೇವಲ 81 ರನ್ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನಾಯಕ ಜೋ ರೂಟ್ 19, ಒಲಿ ಪೋಪ್ 12, ಬೆನ್ ಫೋಕ್ಸ್ 8, ಜ್ಯಾಕ್ ಲೀಚ್ 9, ಜೇಮ್ಸ್ ಆ್ಯಂಡರ್ಸನ್ ಮತ್ತು ಜೋಫ್ರಾ ಆರ್ಚರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ತಂಡ 30.4 ಓವರ್ಗಳಲ್ಲಿ 81 ಕ್ಕೆ ಸರ್ವಫತನಗೊಂಡು ಭಾರತಕ್ಕೆ ಕೇವಲ 49 ರನ್ಗಳ ಅಲ್ಪ ಮೊತ್ತದ ಟಾರ್ಗೆಟ್ ನೀಡಿದೆ.
ಅಕ್ಸರ್ ಪಟೇಲ್ 31 ರನ್ ನೀಡಿ 5 ವಿಕೆಟ್ ಪಡೆದರೆ, ಅಶ್ವಿನ್ 38 ರನ್ ನೀಡಿ 4 ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ 1 ರನ್ ನೀಡಿ 1 ವಿಕೆಟ್ ಪಡೆದರು.