ETV Bharat / sports

ಟೆಸ್ಟ್​​​ ಕ್ರಿಕೆಟ್​ನ ಒಂದೇ ಓವರ್​ನಲ್ಲಿ 4, 4, 4, 6, 6, 4 ರನ್​​​ ಬಿಟ್ಟುಕೊಟ್ಟ ಇಂಗ್ಲೆಂಡ್​ ಬೌಲರ್​​​​​​​​!

ದಕ್ಷಿಣ ಆಫ್ರಿಕಾದ ರಾಬಿನ್​ ಪೀಟರ್​ಸನ್ ಹಾಗೂ ಇಂಗ್ಲೆಂಡ್​ನ ಜೇಮ್ಸ್ ಆ್ಯಂಡರ್ಸನ್​ ಕೂಡ 28 ರನ್​ ಬಿಟ್ಟುಕೊಟ್ಟಿದ್ದರು. ​ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ರೂಟ್​ 28 ರನ್​ ಬಿಟ್ಟುಕೊಡುವ ಮೂಲಕ ಕಳಪೆ ದಾಖಲೆಗೆ ತುತ್ತಾಗಿದ್ದಾರೆ.

ಜೋ ರೂಟ್​
ಜೋ ರೂಟ್​
author img

By

Published : Jan 21, 2020, 2:24 PM IST

ಪೋರ್ಟ್​ ಎಲಿಜಬೆತ್​: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡದ ನಾಯಕನ ಜೋ ರೂಟ್​ ಒಂದೇ ಓವರ್​ನಲ್ಲಿ 28 ರನ್ ಬಿಟ್ಟುಕೊಡುವ ಮೂಲಕ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.

ಪೋರ್ಟ್​ ಎಲಿಜೆಬೆತ್​ನಲ್ಲಿ ಸೋಮವಾರ ಮುಕ್ತಾಯಗೊಂಡ ಟೆಸ್ಟ್​ ಸರಣಿಯ ಮೂರನೇ ಪಂದ್ಯದಲ್ಲಿ ಕೊನೆಯ ಇನ್ನಿಂಗ್ಸ್​ನ 82ನೇ ಓವರ್ ಎಸೆದ ರೂಟ್​ ಎದುರಾಳಿ ಬ್ಯಾಟ್ಸ್​ಮನ್​ ಕೇಶವ್​ ಮಹಾರಾಜ್​ರಿಂದ ಮೊದಲ 5 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಬಾರಿಸಿಕೊಂಡರು. ಕೊನೆಯ ಎಸೆತದಲ್ಲಿ ಲೆಗ್​ಬೈ ಮೂಲಕ 4 ರನ್​ ಕೊಡುವ ಮೂಲಕ ಟೆಸ್ಟ್​ ಕ್ರಿಕೆಟ್​ನ ಒಂದೇ ಓವರ್​ನಲ್ಲಿ 28 ರನ್​ ಬಿಟ್ಟುಕೊಟ್ಟ ಬೌಲರ್​ ಎಂಬ ಕಳೆಪೆ ದಾಖಲೆಗೆ ಪಾತ್ರರಾದರು.

ರೂಟ್​ಗಿಂತ ಮೊದಲು ದಕ್ಷಿಣ ಆಫ್ರಿಕಾದ ರಾಬಿನ್​ ಪೀಟರ್​ಸನ್ ಹಾಗೂ ಇಂಗ್ಲೆಂಡ್​ನ ಜೇಮ್ಸ್ ಆ್ಯಂಡರ್ಸನ್​ ಕೂಡ 28 ರನ್​ ಬಿಟ್ಟುಕೊಟ್ಟಿದ್ದರು. ​ಪೀಟರ್​ಸನ್​ಗೆ ಬ್ರಿಯಾನ್​ ಲಾರಾ, ಆ್ಯಂಡರ್ಸನ್​ಗೆ ಬೈಲಿ 28 ರನ್​ ಬಾರಿಸಿ ದಾಖಲೆ ಬರೆದಿದ್ದರು.

ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ 53 ರನ್​ಗಳಿಂದ ಸೋಲು ಕಂಡಿದೆ. ಆದರೆ ಬ್ಯಾಟ್ಸ್​ಮನ್​ಗಳೇ ಇಂಗ್ಲೆಂಡ್​ ಬೌಲರ್​ಗಳ ಮುಂದೆ ನಿಲ್ಲಲಾಗದೆ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರೂ ಬೌಲರ್​ ಆಗಿರುವ ಕೇಶವ ಮಹಾರಾಜ್ ಮಾತ್ರ ಭರ್ಜರಿ ಬ್ಯಾಟಿಂಗ್​ ನಡೆಸಿ ಸೋಲುವ ಪಂದ್ಯದಲ್ಲೂ ಮಿಂಚಿದರು.

ಬೌಲಿಂಗ್​ನಲ್ಲೂ 5 ವಿಕೆಟ್​ ಪಡೆದು ಮಿಂಚಿದ್ದ ಮಹಾರಾಜ್​ ಎರಡನೇ ಇನ್ನಿಂಗ್ಸ್​ ಬ್ಯಾಟಿಂಗ್​ ವೇಳೆ 106 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​ ಸೇರಿದಂತೆ 71 ರನ್​ ಸಿಡಿಸಿದರು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಪರ ಕೇಶವ್​ ಮಹಾರಾಜ್​ರದ್ದೇ ಗರಿಷ್ಠ ವೈಯಕ್ತಿಕ ರನ್​ ಆಯಿತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.