ನೇಪಿಯರ್: ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್ ಎಲಿಸ್ ಪೆರ್ರಿಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಪಂದ್ಯಗಳನ್ನಾಡಿದ ದಾಖಲೆಗೆ ಪಾತ್ರರಾಗಿದ್ದಾರೆ. ಪೆರ್ರಿ 123 ಪಂದ್ಯಗಳನ್ನಾಡಿದ್ದು, ಪುರುಷ ಅಥವಾ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಗರಿಷ್ಟ ಪಂದ್ಯಗಳನ್ನಾಡಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇಂದು ನ್ಯೂಜಿಲ್ಯಾಂಡ್ ವಿರುದ್ಧ ಪೆರ್ರಿ ತಮ್ಮ 123ನೇ ಕ್ಯಾಪ್ ಧರಿಸಿದರು. ಈ ಮೂಲಕ 122 ಪಂದ್ಯಗಳನ್ನಾಡಿದ್ದ ನ್ಯೂಜಿಲ್ಯಾಂಡ್ನ ಸೂಜಿ ಬೇಟ್ಸ್ ದಾಖಲೆಯನ್ನು ಪೆರ್ರಿ ಹಿಂದಿಕ್ಕಿದ್ದರು. ಆದರೆ ಈ ಪಂದ್ಯ ಮಳೆಯ ಕಾರಣ ಕೇವಲ 2.5 ಓವರ್ಗಳಲ್ಲೆ ರದ್ದಾಯಿತು.
ಪುರುಷ ಮತ್ತು ಮಹಿಳೆಯರ ಕ್ರಿಕೆಟ್ನಲ್ಲಿ ಪೆರ್ರಿ ಗರಿಷ್ಠ ಪಂದ್ಯಗಳನ್ನಾಡಿದ್ದಾರೆ. ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಶೋಯಬ್ ಮಲಿಕ್ 116 ಪಂದ್ಯಗಳನ್ನಾಡಿದ್ದಾರೆ. ಇವರನ್ನು ಬಿಟ್ಟರೆ ರೋಹಿತ್ ಶರ್ಮಾ 111, ಇಯಾನ್ ಮಾರ್ಗನ್ ಮತ್ತು ರಾಸ್ ಟೇಲರ್ 102 ಪಂದ್ಯಗಳನ್ನಾಡಿದ್ದಾರೆ.
ಎಲಿಸ್ ಪೆರ್ರಿ 123 ಟಿ20 ಪಂದ್ಯಗಳಲ್ಲಿ 1243 ರನ್ ಮತ್ತು 115 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ (ಪುರುಷ ಮತ್ತು ಮಹಿಳ ಕ್ರಿಕೆಟರ್) 100 ವಿಕೆಟ್ ಮತ್ತು 1000ಕ್ಕೂ ಹೆಚ್ಚು ರನ್ ಗಳಿಸಿರುವ ಏಕೈಕ ಕ್ರಿಕೆಟರ್ ಎಂಬ ಶ್ರೇಯಕ್ಕೂ ಪೆರ್ರಿ ಪಾತ್ರರಾಗಿದ್ದಾರೆ.
ಇದನ್ನು ಓದಿ: ಐಸಿಸಿ ಏಕದಿನ ಶ್ರೇಯಾಂಕ: ಅಗ್ರ ಸ್ಥಾನ ಭದ್ರಪಡಿಸಿಕೊಂಡ ರನ್ ಮಷಿನ್