ETV Bharat / sports

ಟಿ20ಯಲ್ಲಿ 1000 ರನ್​ ಜೊತೆಗೆ 100 ವಿಕೆಟ್​.. ಆಸೀಸ್ ಮಹಿಳಾ ಕ್ರಿಕೆಟರ್ ಎಲಿಸ್ಸಾ ಪೆರ್ರಿ ದಾಖಲೆ.. - ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಎಲಿಸ್ಸಾ ಪೆರ್ರಿ

ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲಿಸ್ಸಾ ಪೆರ್ರಿ ಟಿ20 ಕ್ರಿಕೆಟ್​ನಲ್ಲಿ 1005 ರನ್​ ಹಾಗೂ 103 ವಿಕೆಟ್​ ಪಡೆದು ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್​ ಎಂಬ ದಾಖಲೆ ನಿರ್ಮಿಸಿದ್ದಾರೆ.

Ellyse Perry
author img

By

Published : Jul 29, 2019, 12:34 PM IST

Updated : Jul 29, 2019, 1:11 PM IST

ಲಂಡನ್​: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರು ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಆಸೀಸ್​ ತಂಡದ ನಾಯಕಿ ಲ್ಯಾನಿಂಗ್​ 133 ರನ್​ಗಳಿಸಿ ಟಿ20 ಕ್ರಿಕೆಟ್​ನ ವೈಯಕ್ತಿಕ ಗರಿಷ್ಠ ಸ್ಕೋರರ್​ ಎನಿಸಿದ್ದರು. ಇದೀಗ ಆಲ್​ರೌಂಡರ್​ ಎಲಿಸ್ಸಾ ಪೆರ್ರಿ ಟಿ20 ಕ್ರಿಕೆಟ್​ನಲ್ಲೇ 1000 ರನ್​ ಹಾಗೂ 100 ವಿಕೆಟ್​ ಪಡೆದ ವಿಶ್ವದ ಮೊದಲ ಕ್ರಿಕೆಟರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಈ ದಾಖಲೆಯನ್ನು ಈವರೆಗೂ ಯಾವುದೇ ಪುರುಷ ಕ್ರಿಕೆಟರ್​ರಿಂದಲೂ ದಾಖಲಾಗಿಲ್ಲ.

Ellyse Perry
ದಾಖಲೆವೀರೆ ಎಲಿಸ್ಸಾ ಪೆರ್ರಿ

ಇಂಗ್ಲೆಂಡ್​ ವಿರುದ್ಧ 47 ರನ್​ಗಳಿಸಿದ ಪೆರ್ರಿ ಟಿ20 ಕ್ರಿಕೆಟ್​ನಲ್ಲಿ 1000 ರನ್​ ಪೂರ್ಣಗೊಳಿಸಿದರು. ಪೆರ್ರಿ 2018ರ ನವೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧವೇ ನೇಟ್​ ಸ್ಕೀವರ್​ ವಿಕೆಟ್​ ಪಡೆದು 100 ವಿಕೆಟ್​ ಮೈಲಿಗಲ್ಲು ತಲುಪಿದ್ದರು. ಇದೀಗ ಇಂಗ್ಲೆಂಡ್​ ವಿರುದ್ಧವೇ 1000 ರನ್​ ಪೂರೈಸಿ ಈ ಎರಡು ದಾಖಲೆ ಮಾಡಿದ ಮೊದಲ ಕ್ರಿಕೆಟರ್​ ಎನಿಸಿಕೊಂಡಿದ್ದಾರೆ.

ಎಲಿಸ್ಸಾ ಪೆರ್ರಿ ಹೊರೆತು ಪಡಿಸಿದರೆ ಪಾಕಿಸ್ತಾನದ ಆಫ್ರಿದಿ 1416 ರನ್​ ಹಾಗೂ 98 ವಿಕೆಟ್​ ಪಡೆದಿದ್ದಾರೆ. ಇನ್ನು ಬಾಂಗ್ಲಾದೇಶದ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ ಕೂಡ 1471 ರನ್​ ಹಾಗೂ 88 ವಿಕೆಟ್​ ಪಡೆದಿದ್ದಾರೆ.

Intro:Body:Conclusion:
Last Updated : Jul 29, 2019, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.