ETV Bharat / sports

ದೇಶದಲ್ಲಿ ಸುರಕ್ಷಿತ ಪ್ರಯಾಣ ಸಾಧ್ಯವಾಗುವವರೆಗೂ ದೇಶಿ ಕ್ರಿಕೆಟ್​ ಟೂರ್ನಿಗೆ ಅವಕಾಶವಿಲ್ಲ: ಗಂಗೂಲಿ

ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶಿ ಟೂರ್ನಿಗಳಿಗೆ ತಂಡಗಳು ಅಂತರ್​ ರಾಜ್ಯ ಪ್ರಯಾಣ ಮಾಡಬೇಕಾಗಿರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಯಾಣ ಸುಖಕರವಾಗಿರುವುದಿಲ್ಲ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ
author img

By

Published : Jul 9, 2020, 5:44 PM IST

ಮುಂಬೈ: ರಣಜಿಯಂತಹ ಕ್ರಿಕೆಟ್​ ಟೂರ್ನಿಗಳಿಗೆ ಆಟಗಾರರು ಪ್ರಯಾಣಿಸಲು ಸುರಕ್ಷಿತ ಎನಿಸುವವರೆಗೂ ದೇಶಿ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಕೊರೊನಾದಿಂದ ಈಗಾಗಲೇ ಸಾಕಷ್ಟು ಕ್ರಿಕೆಟ್​ ಟೂರ್ನಿಗಳು ರದ್ದಾಗಿವೆ. ಐಪಿಎಲ್ ಕೂಡ ಮುಂದೂಡಲ್ಪಟ್ಟಿದ್ದು, ಮುಂದಿನ ಅಕ್ಟೋಬರ್​ನಲ್ಲಿ ನಡೆಯುವ ಸಾಧ್ಯತೆಯಿದೆ. ಹೀಗಿರುವಾಗ ಆಗಸ್ಟ್​​ನಿಂದ ಆರಂಭವಾಗಬೇಕಿರುವ ದೇಶಿ ಕ್ರಿಕೆಟ್​ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ, ವಿಜಯ್ ಹಜಾರೆ ಟೂರ್ನಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದು ಗಂಗೂಲಿ ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶಿ ಟೂರ್ನಿಗಳಿಗೆ ತಂಡಗಳು ಅಂತರ್​​ ರಾಜ್ಯ ಪ್ರಯಾಣ ಮಾಡಬೇಕಾಗಿರುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಯಾಣ ಸುಖಕರವಾಗಿರುವುದಿಲ್ಲ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ದೇಶಿ ಟೂರ್ನಿಗಳನ್ನು ಆಯೋಜಿಸುವುದು ಮಹತ್ವದ ವಿಷಯ. ಆದರೆ, ದೇಶದಲ್ಲಿ ಕೊರೊನಾ ವೈರಸ್‌ ಸಂಪೂರ್ಣ ಹತೋಟಿಗೆ ಬಂದು, ಎಲ್ಲರಿಗೂ ಸುರಕ್ಷಿತ ಎಂಬ ಭಾವನೆ ಬಂದಾಗ ಮಾತ್ರ ಎಂದು ಗಂಗೂಲಿ ಹೇಳಿದ್ದಾರೆ.

ಭಾರತ ದೇಶ ಬಹಳ ವಿಶಾಲವಾದ ದೇಶ. ದೇಶೀಯ ಟೂರ್ನಿಗಳಲ್ಲಿ ತಂಡ ಪಂದ್ಯಗಳಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯಗಳ ವಾತಾವರಣ ವಿಭಿನ್ನವಾಗಿಯೇ ಇರುತ್ತದೆ. ಈ ಸಮಯದಲ್ಲಿ ಯುವ ಆಟಗಾರರ ಸುರಕ್ಷತೆಗೆ ನಮ್ಮ ಆದ್ಯತೆ ಎಂದು ಬಿಸಿಸಿಐ ಬಾಸ್​ ಹೇಳಿದ್ದಾರೆ.

ಗುರುವಾರ ದೇಶದಲ್ಲಿ 24,879 ಹೊಸ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರದ ದೇಶದಲ್ಲಿ ಒಟ್ಟು 7,87296 ಕೊರೊನಾ ಪ್ರಕರಣಗಳು ದಾಖಲಾಗಿವೆ. 21,129 ಸಾವು ಸಂಭವಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.