ETV Bharat / sports

'ಧೋನಿಯಿಂದ ಟೀಮ್​ ಇಂಡಿಯಾ ಸಕ್ಸಸ್​ ಕಂಡಿದೆ, ಆತ ಇನ್ನು ಒಂದೆರಡು ವರ್ಷ ಕ್ರಿಕೆಟ್​ ಆಡಬೇಕು'

ಭಾರತದ ಅತ್ಯುತ್ತಮ ಫಿನಿಶರ್​ ಎಂದು ಕರೆಯಲ್ಪಡುವ ಧೋನಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್​ ಪ್ರದರ್ಶಸಿ ಟೀಕೆಗೆ ಗುರಿಯಾಗಿದ್ದರು. ಆದರೆ ಮಲಿಂಗಾ ಮಾತ್ರ ಧೋನಿ ಪರ ನಿಂತಿದ್ದು ಧೋನಿಯನ್ನು ಯಾರಿಂದಲೂ ಸೋಲಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಧೋನಿ
author img

By

Published : Jul 5, 2019, 4:05 AM IST

ಲೀಡ್ಸ್: ಟೀಮ್​ ಇಂಡಿಯಾದ ಮಾಜಿ ನಾಯಕ ಧೋನಿ ಇನ್ನು ಒಂದೆರಡು ವರ್ಷ ಕ್ರಿಕೆಟ್ ಆಡಿಬೇಕು. ಅವರ ಅನುಭವ ಭವಿಷ್ಯದ ಯುವ ಆಟಗಾರರಿಗೆ ತುಂಬ ಅನುಕೂಲವಾಗಲಿದ ಎಂದು ಯಾರ್ಕರ್​ ಕಿಂಗ್​ ಮಲಿಂಗಾ ಅಭಿಪ್ರಾಯ ಪಟ್ಟಿದ್ದಾರೆ.

ಭಾರತದ ಅತ್ಯುತ್ತಮ ಫಿನಿಶರ್​ ಎಂದು ಕರೆಯಲ್ಪಡುವ ಧೋನಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್​ ಪ್ರದರ್ಶಸಿ ಟೀಕೆಗೆ ಗುರಿಯಾಗಿದ್ದರು. ಆದರೆ ಮಲಿಂಗಾ ಮಾತ್ರ ಧೋನಿ ಪರ ನಿಂತಿದ್ದು ಧೋನಿಯನ್ನು ಯಾರಿಂದಲೂ ಸೋಲಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.

Dhoni-malinga
ಶ್ರೀಲಂಕಾದ ವೇಗಿ ಲಸಿತ್​ ಮಲಿಂಗಾ

"ನನ್ನ ಪ್ರಕಾರ ಧೋನಿ ಇನ್ನೊಂದರೆಡು ವರ್ಷ ಕ್ರಿಕೆಟ್​ನಲ್ಲಿರಬೇಕು. ಅವರು ಕಳೆದ 10 ವರ್ಷಗಳಿಂದ ಅತ್ಯುತ್ತಮ ಫಿನಿಶರ್​ ಆಗಿದ್ದಾರೆ. ಭವಿಷ್ಯದಲ್ಲೂ ಧೋನಿಯನ್ನು ಹಿಂದಿಕ್ಕುವ ವಿಕೆಟ್​ ಕೀಪರ್​ ಬರಲಾರರು. ಧೋನಿಯ ಅನುಭವ ಯುವಕರಿಗೆ ಎಲ್ಲಾ ರೀತಿಯ ಸನ್ನಿವೇಶಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿಕೊಡಲಿದೆ. ಧೋನಿಯಿಂದ ಭಾರತ ತಂಡ ಎಲ್ಲಾ ಮಾದರಿಯಲ್ಲೂ ಯಶಸ್ವಿ ತಂಡವಾಗಿದೆ. ನನಗನಿಸಿದ ಮಟ್ಟಿಗೆ ಟೀಮ್​ ಇಂಡಿಯಾ ಯಾವ ತಂಡವನ್ನಾದರೂ ಮಣಿಸುವ ತಾಕತ್ತನ್ನು ಹೊಂದಿದೆ" ಎಂದು ಎಎನ್​ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತ ತಂಡದ ಹೊಂದಾಣಿಕೆ ಅದ್ಭುತವಾಗಿದೆ. ಚಾಣಾಕ್ಷ ಸ್ಪಿನ್ನರ್ಸ್​, ನಂಬರ್​ ಒನ್ ವೇಗಿ ಜಸ್ಪ್ರೀತ್​ ಬುಮ್ರಾ ಹಾಗೂ ಶಮಿ ಎಲ್ಲರು ತಂಡಕ್ಕೆ ಗೆಲುವು ತಂದುಕೊಡುವ ಬೌಲರ್​ಗಳೆಂದು ಮಲಿಂಗಾ ಭಾರತ ತಂಡವನ್ನು ಕೊಂಡಾಡಿದ್ದಾರೆ.

ಇನ್ನು ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆಯೂ ಮಾತನಾಡಿದ್ದು, ವಿಶ್ವಕಪ್​ ಮುಗಿದ ಮೇಲೆ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ಅಧಿಕಾರಿಗಳೊಂದಿಗೆ ಮಾತನಾಡಿ, ನನ್ನಿಂದ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ. ಒಂದು ತಿಂಗಳು ಅಥವಾ ಒಂದು ವರ್ಷವಾಗಲಿ ನನ್ನ ಸೇವೆ ಬೇಕೆಂದರೆ, ನಂತರ ನಾನು ನನ್ನ ನಿರ್ಧಾರವನ್ನು ತಿಳಿಸುವೆ ಎಂದಿದ್ದಾರೆ.

ಶ್ರೀಲಂಕಾ ತಂಡ ತನ್ನ ಕೊನೆಯ ಪಂದ್ಯವನ್ನು ಜುಲೈ 6 ರಂದು ಭಾರತ ತಂಡವನ್ನು ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.