ಚೆನ್ನೈ(ತಮಿಳುನಾಡು): ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದ ಶ್ರೇಷ್ಠ ಫಿನಿಷರ್ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿ ಅಭಿಪ್ರಾಯ ಪಟ್ಟಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ನ ಐಪಿಎಲ್ ಚಾಂಪಿಯನ್ ತಂಡದಲ್ಲಿದ್ದ ಆಸ್ಟ್ರೇಲಿಯಾದ ಮೈಕ್ ಹಸ್ಸಿ ಸಿಎಸ್ಕೆ ತಂಡಕ್ಕೆ 3 ಬಾರಿ ಚಾಂಪಿಯನ್ ಪಟ್ಟ ತಂಡದುಕೊಟ್ಟಿರುವ ಎಂ ಎಸ್ ಧೋನಿಯನ್ನು ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಫಿನಿಷರ್ ಎಂದು ಗುಣಗಾನ ಮಾಡಿದ್ದಾರೆ.
38 ವರ್ಷದ ಎಂ ಎಸ್ ಧೋನಿ 2020ರ ಐಪಿಎಲ್ನಲ್ಲೂ ಸಿಎಸ್ಕೆ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಕೊರೊನಾ ದೇಶೆದೆಲ್ಲೆಡೆ ತನ್ನ ರೌದ್ರನರ್ತನ ತೋರುತ್ತಿರುವ ಹಿನ್ನಲೆ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಸಂಜಯ್ ಮಂಜ್ರೇಕರ್ ಅವರು ನಡೆಸಿಕೊಟ್ಟ ಸಂದರ್ಶನದಲ್ಲಿ ಮಾತನಾಡಿರುವ ಹಸ್ಸಿ, ಧೋನಿ ನಂಬಲು ಸಾಧ್ಯವಾಗದ ಒಂದು ಅದ್ಭುತ ಶಕ್ತಿ, ಧೋನಿಯ ಆತ್ಮವಿಶ್ವಾಸ, ಅವರ ತಾಳ್ಮೆ ಅವರನ್ನು ಸಾರ್ವಕಾಲಿಕ ಬೆಸ್ಟ್ ಫಿನಿಷರ್ ಆಗುವಂತೆ ಮಾಡಿದೆ ಎಂದು ಮೈಕಲ್ ಹಸ್ಸಿ ಹೇಳಿದ್ದಾರೆ.
ಅಗತ್ಯವಿದ್ದಾಗ ದೊಡ್ಡ ಹೊಡೆತಗಳನ್ನು ಪ್ರಯೋಗಿಸುವ ಅದ್ಭುತ ಶಕ್ತಿ ಧೋನಿ ಬಳಿಯಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸವೂ ಇದೆ. ನಿಜ ಹೇಳಬೇಕೆಂದರೆ ನನಗೂ ಕೂಡ ಆ ಪ್ರಮಾಣದ ಆತ್ಮವಿಶ್ವಾಸ ಇರಲಿಲ್ಲ ಎಂದು ಹಸ್ಸಿ ತಿಳಿಸಿದ್ದಾರೆ.
ಒಂದು ಓವರ್ಗೆ 12-13 ರನ್ಗಳು ಹೋಗದಂತೆ ನೋಡಿಕೊಳ್ಳುವುದನ್ನು ನಾನು ಧೋನಿಯಿಂದ ಕಲಿತಿದ್ದೇನೆ. ಪಂದ್ಯದ ಕೊನೆಯಲ್ಲಿ ಯಾರು ಒತ್ತಡ ಎದುರಿಸುತ್ತಾರೊ ಅವರಿಗೆ ಗೆಲುವು ಕಷ್ಟ ಎಂಬುದನ್ನು ಅರಿತಿರುವ ಧೋನಿ ಕೊನೆಯವರೆಗೂ ತಾಳ್ಮೆಯಿಂದಿರಲೂ ಬಯಸುತ್ತಾರೆ. ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಅವರು ಯಶಸ್ವಿಯಾಗುತ್ತಾರೆ ಎಂದು ಹಸ್ಸಿ ತಿಳಿಸಿದ್ದಾರೆ.