ETV Bharat / sports

ಅಭ್ಯಾಸಕ್ಕಾಗಿ ಮೈದಾನಕ್ಕಿಳಿದ ಮಾಹಿ: ಧೋನಿ.. ಧೋನಿ ಎಂದು ಹುರಿದುಂಬಿಸಿದ ಕ್ರೀಡಾಭಿಮಾನಿಗಳು! - ಅಭ್ಯಾಸದಲ್ಲಿ ಧೋನಿ

ವಿಶ್ವಕಪ್​ ಸೆಮಿಫೈನಲ್​ನಲ್ಲಿ ಸೋಲು ಕಂಡ ಬಳಿಕ ಮೈದಾನದಲ್ಲಿ ಕಾಣಿಸಿಕೊಳ್ಳದ ಮಹೇಂದ್ರ ಸಿಂಗ್​ ಧೋನಿ ಇದೀಗ ಐಪಿಎಲ್​​ನಲ್ಲಿ ಅಬ್ಬರಿಸಲು ಕಣಕ್ಕಿಳಿಯಲಿದ್ದಾರೆ.

Dhoni
ಎಂಎಸ್​ ಧೋನಿ ಅಭ್ಯಾಸ
author img

By

Published : Mar 3, 2020, 8:40 AM IST

ಚೆನ್ನೈ: ಬರೋಬ್ಬರಿ ಏಳು ತಿಂಗಳ ಕಾಲ ಕ್ರಿಕೆಟ್​​ನಿಂದ ದೂರು ಉಳಿದಿದ್ದ ಮಹೇಂದ್ರ ಸಿಂಗ್​ ಧೋನಿ ಇದೀಗ ಮುಂಬರುವ ಇಂಡಿಯನ್​​ ಪ್ರೀಮಿಯರ್​ ಲೀಗ್​​ ಆಡಲು ಮೈದಾನಕ್ಕಿಳಿದಿದ್ದು, ಅಭ್ಯಾಸ ಶುರು ಮಾಡಿದ್ದಾರೆ.

ಮಾರ್ಚ್​​ 29ರಿಂದ ಐಪಿಎಲ್​ನ 13ನೇ ಆವೃತ್ತಿ ಶುರುವಾಗಲಿದ್ದು, ಚೆನ್ನೈ ಹಾಗೂ ಮುಂಬೈ ತಂಡಗಳ ನಡುವೆ ಮೊದಲ ಫೈಟ್​ ನಡೆಯಲಿದೆ. ಹೀಗಾಗಿ ಸಿಎಸ್​ಕೆ ತಂಡದ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಇದೀಗ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು, ನಿನ್ನೆ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇಲ್ಲಿನ ಪಿ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಮಾಹಿ ಆಗಮಿಸುತ್ತಿದ್ದಂತೆ ವೀಕ್ಷಣೆ ಮಾಡಲು ಬಂದಿದ್ದ ಸಾವಿರಾರು ಅಭಿಮಾನಿಗಳು ಅವರಿಗೆ ಹುರಿದುಂಬಿಸಿ, ಧೋನಿ... ಧೋನಿ ಎಂದು ಜಯಘೋಷ ಹಾಕಿದ್ದಾರೆ. ನೆಟ್ಸ್​​ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಹಲವು ಹೊಡೆತಗಳೊಂದಿಗೆ ಅವರು ಗಮನ ಸೆಳೆದರು. ಇವರ ಜತೆಗೆ ಅಂಬಾಟಿ ರಾಯುಡು, ಸುರೇಶ್​ ರೈನಾ,ಮುರುಳಿ ವಿಜಯ್​,ಪಿಯೂಷ್​ ಶರ್ಮಾ ಕೂಡ ಅಭ್ಯಾಸ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.