ಲಂಡನ್: ಭಾರತ ಕ್ರಿಕೆಟ್ ತಂಡವನ್ನು ವಿಶ್ವಕ್ರಿಕೆಟ್ನಲ್ಲಿ ಗುರುತಿಸುವಂತೆ ಮಾಡಿದವರಲ್ಲಿ ಪ್ರಮುಖರಲ್ಲಿ ಒಬ್ಬರಾದ ಎಂಎಸ್ ಧೋನಿಯ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ ಐಸಿಸಿ ಉಡುಗೊರೆಯಾಗಿ ಧೋನಿ ಸಾಧನೆಯನ್ನು ಬಿಂಬಿಸುವ ವಿಡಿಯೋವನ್ನು ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಭಾರತ ಕ್ರಿಕೆಟ್ ತಂಡಕ್ಕೆ 15 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮಹೇಂದ್ರ ಸಿಂಗ್ ಧೋನಿ ವಿಶ್ವಕ್ರಿಕೆಟ್ನಲ್ಲಿ ಯಶಸ್ವಿ ನಾಯಕ, ಚಾಣಾಕ್ಷ ವಿಕೆಟ್ ಕೀಪರ್ ಹಾಗೂ ಬೆಸ್ಟ್ ಫಿನಿಷರ್ ಎಂಬ ಖ್ಯಾತಿಗಳಿಸಿದ್ದಾರೆ. ನಾಳೆ ಧೋನಿ 38ನೇ ವಸಂತಕ್ಕೆ ಕಾಲಿಡಲಿದ್ದು ಧೋನಿ ಕುರಿತು 3 ನಿಮಿಷಗಳ ವಿಡಿಯೋ ಮಾಡಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಐಸಿಸಿ ಈ ವಿಡಿಯೋದಲ್ಲಿ ಧೋನಿ ಕುರಿತು ' ಆ ಹೆಸರು ಭಾರತ ಕ್ರಿಕೆಟ್ ಅನ್ನು ಚೇಂಜ್ ಮಾಡಿತು. ಆ ಹೆಸರು ಲಕ್ಷಾಂತರ ಯುವ ಕ್ರಿಕೆಟಿಗರಿಗೆ ಸ್ಪೂರ್ತಿ, ಆ ಹೆಸರು ಕ್ರಿಕೆಟ್ ಪರಂಪರೆಯಲ್ಲಿ ನಿರಾಕರಿಸಲಾಗದ್ದು ... ಎಂ ಎಸ್ ಧೋನಿ ಅಂದರೆ ಕೇವಲ ಅದೊಂದು ಹೆಸರಲ್ಲ ಎಂದು ತಲೆ ಬರಹ ನೀಡಿದೆ.
ಈ ವಿಡಿಯೋದಲ್ಲಿ ಇಂಗ್ಲೆಂಡ್ನ ಕೀಪರ್ ಬಟ್ಲರ್, ಬೆನ್ ಸ್ಟೋಕ್ಸ್, ಅಫ್ಘಾನಿಸ್ತಾನದ ಮೊಹಮ್ಮದ್ ಶಹ್ಜಾದ್ ಹಾಗೂ ಭಾರತ ತಂಡದ ನಾಯಕ ಕೊಹ್ಲಿ, ಬುಮ್ರಾ ಧೋನಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
-
🔹 A name that changed the face of Indian cricket
— ICC (@ICC) July 6, 2019 " class="align-text-top noRightClick twitterSection" data="
🔹 A name inspiring millions across the globe
🔹 A name with an undeniable legacy
MS Dhoni – not just a name! #CWC19 | #TeamIndia pic.twitter.com/cDbBk5ZHkN
">🔹 A name that changed the face of Indian cricket
— ICC (@ICC) July 6, 2019
🔹 A name inspiring millions across the globe
🔹 A name with an undeniable legacy
MS Dhoni – not just a name! #CWC19 | #TeamIndia pic.twitter.com/cDbBk5ZHkN🔹 A name that changed the face of Indian cricket
— ICC (@ICC) July 6, 2019
🔹 A name inspiring millions across the globe
🔹 A name with an undeniable legacy
MS Dhoni – not just a name! #CWC19 | #TeamIndia pic.twitter.com/cDbBk5ZHkN
ಭಾರತ ತಂಡದ ವೇಗಿ ಬುಮ್ರಾ, ನಾನು ಕ್ರಿಕೆಟ್ ಪದಾರ್ಪಣೆ ಮಾಡಿದಾಗ ಧೋನಿ ಟೀಮ್ ಇಂಡಿಯಾದ ನಾಯಕರಾಗಿದ್ದರು, ಅಂದು ನನಗೆ ಯಾವುದೇ ಸಂದರ್ಭದಲ್ಲಿ ಸಲಹೆ ಕೇಳಿದರೂ ಧೋನಿ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಆದ್ದರಿಂದ ನನಗೆ ಮತ್ತು ತಂಡಕ್ಕೆ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಇಂಗ್ಲೆಂಡ್ನ ವಿಕೆಟ್ ಕೀಪರ್ ಜೋಸ್ ಬಟ್ಲರ್, ತಾವೊಬ್ಬ ಧೋನಿಯ ದೊಡ್ಡ ಫ್ಯಾನ್ ಎಂದಿದ್ದು, ಅವರ ಎಂತಹ ಸನ್ನಿವೇಶದಲ್ಲಿಯೂ ತಾಳ್ಮೆಯಿಂದ ಆಡುವುದು ನನಗೆ ಸ್ಪೂರ್ತಿಯಾಗಿದೆ. ಅವರು ತಂಡಕ್ಕಾಗಿ ಏಕಾಂಗಿಯಾಗಿ ಹೋರಾಡುವ ಹಾಗೂ ಪಂದ್ಯವನ್ನು ಕೊನೆಯತನಕ ತೆಗೆದುಕೊಂಡು ಹೋಗುತ್ತಾರೆ ಎಂದು ಧೋನಿ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.