ETV Bharat / sports

ಧವನ್ ಮಾಡಿದ ತಪ್ಪಿಗೆ ಬೋಟ್​ಮ್ಯಾನ್​ಗೆ ಶಿಕ್ಷೆ.. ಹಾಗಾದರೆ, ಗಬ್ಬರ್ ಮಾಡಿದ ತಪ್ಪೇನು? - ವಾರಾಣಾಸಿಯಲ್ಲಿ ಶಿಖರ್ ಧವನ್​

ಕೆಲವು ಬೋಟ್​ಮ್ಯಾನ್​ಗಳು ಆಡಳಿತ ಮಂಡಳಿಯ ಸೂಚನೆಗಳನ್ನು ಪಾಲಿಸುತ್ತಿಲ್ಲ. ಅವರ ಧೋಣಿಗಳಲ್ಲಿ ಪ್ರಯಾಣಿಸುವ ಪ್ರವಾಸಿಗರು ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದ್ದರಿಂದ ಆ ಬೋಟ್​ಮ್ಯಾನ್​ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ..

ಶಿಖರ್ ಧವನ್​
ಶಿಖರ್ ಧವನ್​
author img

By

Published : Jan 24, 2021, 7:01 PM IST

ವಾರಾಣಾಸಿ : ಆಡಳಿತ ಮಂಡಳಿಗಳ ಮಾರ್ಗಸೂಚಿಯನ್ನು ಪಾಲಿಸದೆ ಹಕ್ಕಿಜ್ವರದ ಮಧ್ಯೆಯೂ ಪ್ರವಾಸಿಗರಿಂದ ಪಕ್ಷಿಗಳಿಗೆ ಆಹಾರ ನೀಡಲು ಅವಕಾಶ ಮಾಡಿದ್ದಕ್ಕಾಗಿ ಬೋಟ್​ಮ್ಯಾನ್​ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕೌಶಲ್​ ರಾಜ್ ಶರ್ಮಾ ಹೇಳಿದ್ದಾರೆ.

ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿರುವ ಹಿನ್ನೆಲೆ ವಾರಾಣಾಸಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡಬಾರದೆಂದು ಜಿಲ್ಲಾಡಳಿತ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಆದರೆ, ಕ್ರಿಕೆಟಿಗ ಧವನ್​ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಇದೀಗ ಅವರನ್ನು ಕರೆದುಕೊಂಡು ಹೋಗಿದ್ದ ಬೋಟ್​ಮ್ಯಾನ್​ ಸಮಸ್ಯೆಗೆ ಗುರಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ಶಿಖರ್​ ಧವನ್​ ಬೋಟ್​ ಮೇಲೆ ಕುಳಿತು ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ವೈರಲ್​ ಆಗಿದ್ದು, ವಾರಾಣಾಸಿಯಲ್ಲಿ ಹಕ್ಕಿಜ್ವರದ ಹಿನ್ನೆಲೆ ಪ್ರವಾಸಿಗರು ಪಕ್ಷಿಗಳಿಗೆ ಯಾವುದೇ ರೀತಿಯ ಆಹಾರ ನೀಡಬಾರದೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

ಅಲ್ಲಿನ ಆಡಳಿತಗಾರರು ಮತ್ತು ಪೊಲೀಸರು ಕೂಡ ಈ ಮಾಹಿತಿಯನ್ನು ಮೊದಲೇ ಬೋಟ್​ಮ್ಯಾನ್​ಗಳಿಗೆ ತಿಳಿಸಿದ್ದರೂ ಧವನ್​ಗೆ ಪಕ್ಷಿಗಳಿಗೆ ಆಹಾರ ನೀಡಲು ಅವಕಾಶ ನೀಡಿದ ಬೋಟ್​ಮ್ಯಾನ್​ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್​ ಕೌಶಲ್​ ರಾಜ್ ಶರ್ಮಾ ಭಾನುವಾರ ತಿಳಿಸಿದ್ದಾರೆ.

ಈ ತಪ್ಪಿಗೆ ಪ್ರವಾಸಿಗರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಕೇವಲ ನಿಯಮ ಗೊತ್ತಿದ್ದರು ಪ್ರವಾಸಿಗರಿಗೆ ಪಕ್ಷಿಗಳಿಗೆ ಆಹಾರ ನೀಡಲು ಅನುವು ಮಾಡಿಕೊಟ್ಟ ಬೋಟ್​ಮ್ಯಾನ್​ ವಿರುದ್ಧ ಮಾತ್ರ ಎಂದು ಶರ್ಮಾ ತಿಳಿಸಿದ್ದಾರೆ.

ಕೆಲವು ಬೋಟ್​ಮ್ಯಾನ್​ಗಳು ಆಡಳಿತ ಮಂಡಳಿಯ ಸೂಚನೆಗಳನ್ನು ಪಾಲಿಸುತ್ತಿಲ್ಲ. ಅವರ ಧೋಣಿಗಳಲ್ಲಿ ಪ್ರಯಾಣಿಸುವ ಪ್ರವಾಸಿಗರು ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದ್ದರಿಂದ ಆ ಬೋಟ್​ಮ್ಯಾನ್​ಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರವಾಸಿಗರಿಗೆ ಸಾಮಾನ್ಯವಾಗಿ ಈ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ ಎಂದು ಸುದ್ದಿಸಂಸ್ಥೆಗೆ ಶರ್ಮಾ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಕುಮಾರ್​ ಸಂಗಾಕ್ಕರರನ್ನು ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಿದ ರಾಯಲ್ಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.