ETV Bharat / sports

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ರೋಹಿತ್ ಜತೆಗಾರ ಯಾರೆಂದು ಖಚಿತಪಡಿಸಿದ ಕೊಹ್ಲಿ!

author img

By

Published : Mar 22, 2021, 5:02 PM IST

35 ವರ್ಷ ಧವನ್​ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ರನ್​ಗಳಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಮೊದಲ ಪಂದ್ಯದ ನಂತರ ಅವಕಾಶ ಪಡೆದಿರಲಿಲ್ಲ. ಇದೀಗ ಏಕದಿನ ಸರಣಿಯಲ್ಲಿ ಕಮ್​ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಬ್ಯಾಕ್ ಅಪ್​ ಆರಂಭಿಕನಾಗಿ ಶುಭಮನ್ ಗಿಲ್ ಅವಕಾಶ ಪಡೆದಿದ್ದಾರೆ..

ಭಾರತ vs ಇಂಗ್ಲೆಂಡ್ ಏಕದಿನ ಸರಣಿ
ಭಾರತ vsಭಾರತ vs ಇಂಗ್ಲೆಂಡ್ ಏಕದಿನ ಸರಣಿ ಇಂಗ್ಲೆಂಡ್ ಏಕದಿನ ಸರಣಿ

ಪುಣೆ : ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಹಲವು ಬಾರಿ ಆರಂಭಿಕರನ್ನು ಬದಲಾವಣೆ ಮಾಡಿತ್ತು. ಆದರೆ, ಮುಂಬರುವ ಏಕದಿನ ಸರಣಿಯಲ್ಲಿ ರೋಹಿತ್​ ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ಕೊಹ್ಲಿ ಖಚಿತ ಪಡಿಸಿದ್ದಾರೆ. ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ರಾಹುಲ್​ ಜೊತೆಗೆ ಧವನ್, ಇಶಾನ್ ಕಿಶನ್, 3 ಮತ್ತು 4ನೇ ಪಂದ್ಯಕ್ಕೆ ರೋಹಿತ್​ ಜೊತೆಗಾರರಾಗಿದ್ದರು. ಆದರೆ, ಕೊನೆಯ ಪಂದ್ಯದಲ್ಲಿ ರಾಹುಲ್​ಗೆ ವಿಶ್ರಾಂತಿ ನೀಡಿ ಸ್ವತಃ ಕೊಹ್ಲಿಯೇ ರೋಹಿತ್ ಜೊತೆಗೂಡಿ ಆಡಿದ್ದರು.

ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಖಂಡಿತವಾಗಿಯೂ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಆಡುತ್ತಾರೆ. ಇದರಲ್ಲಿ ಅನುಮಾನವೇ ಬೇಡ. ಅವರಿಬ್ಬರು ಕೆಲವು ವರ್ಷಗಳಿಂದ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

35 ವರ್ಷ ಧವನ್​ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ರನ್​ಗಳಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಮೊದಲ ಪಂದ್ಯದ ನಂತರ ಅವಕಾಶ ಪಡೆದಿರಲಿಲ್ಲ. ಇದೀಗ ಏಕದಿನ ಸರಣಿಯಲ್ಲಿ ಕಮ್​ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಬ್ಯಾಕ್ ಅಪ್​ ಆರಂಭಿಕನಾಗಿ ಶುಭಮನ್ ಗಿಲ್ ಅವಕಾಶ ಪಡೆದಿದ್ದಾರೆ.

ರೋಹಿತ್-ಧವನ್ ಜೋಡಿ ಭಾರತದ ಪರ 107 ಏಕದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದು, 44.87ರ ಸರಾಸರಿಯಲ್ಲಿ 16 ಶತಕಗಳ ಸಹಿತ 4802 ರನ್​ಗಳಿಸಿದ್ದಾರೆ. ಇವರು 6609ರನ್​ಗಳಿಸಿರುವ ಸಚಿನ್​-ಗಂಗೂಲಿ ನಂತರ ಹೆಚ್ಚುರನ್ ಸಿಡಿಸಿದ 2ನೇ ಆರಂಭಿಕ ಜೋಡಿಯಾಗಿದೆ.

ಇದನ್ನು ಓದಿ:ಒಂದೇ ಸರಣಿಯಲ್ಲಿ ಎರಡು ಬಾರಿ ದಂಡ ಕಟ್ಟಿದ ಟೀಂ​ ಇಂಡಿಯಾ.. ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.