ಪುಣೆ : ಶಿಖರ್ ಧವನ್ರ 98 ಹಾಗೂ ವಿರಾಟ್ ಕೊಹ್ಲಿ, ರಾಹುಲ್ ಮತ್ತು ಕೃನಾಲ್ ಪಾಂಡ್ಯ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ತಂಡದ ಮೊದಲ ಏಕದಿನ ಪಂದ್ಯದಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ರೋಹಿತ್-ಧವನ್ ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ರೋಹಿತ್ ಕೇವಲ 28 ರನ್ಗಳಿಸಿ ಔಟಾದರು.
ನಂತರ ನಾಯಕ ಕೊಹ್ಲಿ ಜೊತೆಗೂಡಿದ ಧವನ್ 2ನೇ ವಿಕೆಟ್ಗೆ ಶತಕದ(105) ಜೊತೆಯಾಟ ನೀಡಿದರು. ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ 6 ಬೌಂಡರಿ ಸಹಿತ 56 ರನ್ಗಳಿಸಿ ಮಾರ್ಕ್ವುಡ್ ಬೌಲಿಂಗ್ನಲ್ಲಿ ಔಟಾದರು.
-
Century stand ✅
— BCCI (@BCCI) March 23, 2021 " class="align-text-top noRightClick twitterSection" data="
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
">Century stand ✅
— BCCI (@BCCI) March 23, 2021
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBzCentury stand ✅
— BCCI (@BCCI) March 23, 2021
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
ಇವರ ನಂತರ ಬಂದ ಶ್ರೇಯಸ್ ಅಯ್ಯರ್ ಕೇವಲ 6 ರನ್ಗಳಿಸಿ ಮಾರ್ಕ್ವುಡ್ಗೆ ವಿಕೆಟ್ ಒಪ್ಪಿಸಿದರೆ, ಹಾರ್ದಿಕ್ ಪಾಂಡ್ಯ(01) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಅವರು ಸ್ಟೋಕ್ಸ್ ಓವರ್ನಲ್ಲಿ ಬೈಸ್ಟೋವ್ಗೆ ಕ್ಯಾಚ್ ನೀಡಿ ಔಟಾದರು.
ರಾಹುಲ್-ಕೃನಾಲ್ ಶತಕದ ಜೊತೆಯಾಟ
205ಕ್ಕೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ರಾಹುಲ್(62) ಮತ್ತು ಕೃನಾಲ್(58) ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 57 ಎಸೆತಗಳಲ್ಲಿ 112 ರನ್ಗಳ ಜೊತೆಯಾಟ ನೀಡಿದರು.
ಕನ್ನಡಿಗ ರಾಹುಲ್ 43 ಎಸೆತಗಳಲ್ಲಿ ತಲಾ 4 ಸಿಕ್ಸರ್ ಮತ್ತು ಬೌಂಡರಿಗಳ ನೆರವಿನಿಂದ ಅಜೇಯ 62ರನ್ ಮತ್ತು ಇಂದೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೃನಾಲ್ ಪಾಂಡ್ಯ 31 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ ಅಜೇಯ 58 ರನ್ಗಳಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಇಂಗ್ಲೆಂಡ್ ಪರ ಮಾರ್ಕ್ವುಡ್ 75ಕ್ಕೆ 2, ಬೆನ್ ಸ್ಟೋಕ್ಸ್ 34ಕ್ಕೆ 3 ವಿಕೆಟ್ ಪಡೆದರು.