ETV Bharat / sports

ವಿಶ್ವಕಪ್​ನಲ್ಲಿ ವಾರ್ನರ್ ಅಬ್ಬರ... ನಿಜವಾಯ್ತು ಫಿಂಚ್​ ನುಡಿದಿದ್ದ ಭವಿಷ್ಯ - ಆಸೀಸ್​ ಕ್ಯಾಪ್ಟನ್​ ಫಿಂಚ್

7 ಪಂದ್ಯಗಳಲ್ಲಿ 3 ಅರ್ಧಶತಕ ಹಾಗೂ 2 ಶತಕ ಸಹಿತ 500 ರನ್​ಗಳಿಸುವ ಮೂಲಕ ವಾರ್ನರ್​ ವಿಶ್ವಕಪ್​ನಲ್ಲಿ ಗರಿಷ್ಠ ಸ್ಕೋರರ್​ ಎನಿಸಿದ್ದಾರೆ.

Devid warner
author img

By

Published : Jun 25, 2019, 6:08 PM IST

ಲಂಡನ್​: ಡೇವಿಡ್​ ವಾರ್ನರ್ ಶೀಘ್ರದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಮತ್ತೆ ಸಾಮ್ರಾಟ್​ ಆಗಲಿದ್ದಾರೆ ಎಂದು ವಿಶ್ವಕಪ್​ಗೂ ಮುನ್ನ ಆಸೀಸ್​ ಕ್ಯಾಪ್ಟನ್​ ಫಿಂಚ್​ ಹೇಳಿದ ಮಾತನ್ನ ವಾರ್ನರ್​ ಸತ್ಯ ಮಾಡಿ ತೋರಿಸಿದ್ದಾರೆ.

ತಿಳಿದೋ, ತಿಳಿಯದೆಯೋ ಬಾಲ್​ ಟ್ಯಾಂಪರಿಂಗ್​ ಘಟನೆಯಲ್ಲಿ ಭಾಗಿಯಾಗಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಡೇವಿಡ್​ ವಾರ್ನರ್, ಒಂದು ವರ್ಷ ಕ್ರಿಕೆಟ್​ ಇಲ್ಲದೇ ಕುಗ್ಗಿದ್ದರು. ರಸ್ತೆಗಳಲ್ಲಿ ನಡೆದಾಡುತ್ತಿದ್ದರು, ಕೈಯಲ್ಲಿ ಬ್ಯಾಟ್​ ಹಿಡಿದಂತೆ ಫೀಲ್​ ಮಾಡುತ್ತಿದ್ದ ವಾರ್ನರ್​ ಕೆಲವು ಚಿತ್ರಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಅಭಿಮಾನಿಗಳು ವಾರ್ನರ್​ ಪರ ನಿಂತಿದ್ದರು. ಮತ್ತೆ ಕ್ರಿಕೆಟ್​ನಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ಬೆಂಬಲ ನೀಡಿದ್ದರು. ಇದೀಗ ವಾರ್ನರ್​ ಎಲ್ಲರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ವಿಶ್ವಕಪ್​ ಆಯ್ಕೆಯೂ ಕಷ್ಟವೆನಿಸಿದ್ದ ಸಂದರ್ಭದಲ್ಲಿ ಐಪಿಎಲ್​ ವಾರ್ನರ್ರನ್ನು ಆಸ್ಟ್ರೇಲಿಯ ತಂಡ ಸೇರುವಂತೆ ಮಾಡಿತ್ತು. ಸನ್​ರೈಸರ್ಸ್​​ ಪರ ಬ್ಯಾಟ್​ ಬೀಸಿದ್ದ ವಾರ್ನರ್​ ಬರೋಬ್ಬರಿ 692 ರನ್​ ಸಿಡಿಸಿ ವಿಶ್ವಕಪ್​ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.

ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಫಿಂಚ್​ " ವಾರ್ನರ್​ ಒಬ್ಬ ಲೆಜೆಂಡ್​, ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬ್ಯಾಟ್ಸಮನ್​, ಆದರೆ, ದುರಾದೃಷ್ಟವಸಾತ್​ ಬಾಲ್​ ಟ್ಯಾಂಪರಿಂಗ್​ ಪ್ರಕರಣದಲ್ಲಿ ಸಿಲುಕಿ ನೋವನುಭವಿಸಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಮತ್ತೆ ತಮ್ಮ ಗತವೈಭವ ಮರಳಿ ಪಡೆಯಲಿದ್ದಾರೆ" ಎಂದು ವಾರ್ನರ್​ ಕುರಿತು ಹೇಳಿಕೆ ನೀಡಿದ್ದರು.

ಇದೀಗ ವಾರ್ನರ್​ ನಾಯಕನ ಮಾತನ್ನು ಉಳಿಸಿಕೊಂಡಿದ್ದು, 2019ರ ವಿಶ್ವಕಪ್​ನಲ್ಲಿ ಆಡಿರುವ 7 ಪಂದ್ಯಗಲ್ಲಿ 2 ಶತಕ ಹಾಗೂ 3 ಅರ್ಧಶತಕ ಸಹಿತ 500 ರನ್​ ಪೂರೈಸಿ ವಿಶ್ವಕಪ್​ನಲ್ಲಿ ಗರಿಷ್ಠ ಸ್ಕೋರರ್​ ಎನಿಸಿದ್ದಾರೆ.

ವಾರ್ನರ್​ ಅಫ್ಘಾನಿಸ್ತಾನದ ವಿರುದ್ಧ 89, ಭಾರತದ ವಿರುದ್ಧ 56, ಪಾಕಿಸ್ತಾನದ ವಿರುದ್ಧ 107, ಬಾಂಗ್ಲಾದೇಶದ ವಿರುದ್ಧ 166 ಹಾಗೂ ಇಂಗ್ಲೆಂಡ್​ ವಿರುದ್ಧ 53 ರನ್​ಗಳಿಸಿ ಮಿಂಚುತ್ತಿದ್ದಾರೆ.

Intro:Body:

g

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.