ತಿರುವನಂತಪುರಂ: ಎರಡು ದಿನಗಳ ಹಿಂದೆಯಷ್ಟೇ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ದೀಪಕ್ ಚಹಾರ್ ವಿದರ್ಭ ವಿರುದ್ಧ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮತ್ತೆ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಮಳೆ ಕಾರಣ 13 ಓವರ್ಗಳಿಗೆ ಸೀಮಿತಗೊಳಿಸಿದ್ದ ಪಂದ್ಯದಲ್ಲಿ ದೀಪಕ್ ಕೊನೆಯ ಓವರ್ನ ಕೊನೆಯ 3 ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಮೂರು ದಿನಗಳಲ್ಲಿ 2 ಎರಡು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
-
There's no stopping Deepak Chahar! 🔥
— ICC (@ICC) November 12, 2019 " class="align-text-top noRightClick twitterSection" data="
Sunday 👉 Takes a hat-trick for India against Bangladesh
Tuesday 👉 Takes a hat-trick for Rajasthan against Vidarbha pic.twitter.com/G3rfEGdprc
">There's no stopping Deepak Chahar! 🔥
— ICC (@ICC) November 12, 2019
Sunday 👉 Takes a hat-trick for India against Bangladesh
Tuesday 👉 Takes a hat-trick for Rajasthan against Vidarbha pic.twitter.com/G3rfEGdprcThere's no stopping Deepak Chahar! 🔥
— ICC (@ICC) November 12, 2019
Sunday 👉 Takes a hat-trick for India against Bangladesh
Tuesday 👉 Takes a hat-trick for Rajasthan against Vidarbha pic.twitter.com/G3rfEGdprc
ವಿದರ್ಭ ವಿರುದ್ಧ 12 ನೇ ಓವರ್ನ 4ನೇ ಎಸೆತದಲ್ಲಿ ದರ್ಶನ್ ನೀಲಕಂಡೆ, 5ನೇ ಎಸೆತದಲ್ಲಿ ಶ್ರೀಕಾಂತ್ ವಾಘ್, 6ನೇ ಎಸೆತದಲ್ಲಿ ಅಕ್ಷಯ್ ವಾಡ್ಕರ್ ವಿಕೆಟ್ ಪಡೆದರು. ಒಟ್ಟು 3 ಓವರ್ಗಳಲ್ಲಿ 1 ಮೇಡನ್ ಸಹಿತ 18 ರನ್ ನೀಡಿ 4 ವಿಕೆಟ್ ಪಡೆರಲ್ಲದೇ ವಿದರ್ಭ ತಂಡವನ್ನು 13 ಓವರ್ಗಳ ಪಂದ್ಯದಲ್ಲಿ 100ರೊಳಗೆ ಕಟ್ಟಿಹಾಕಲು ನೆರವಾದರು.
ಭಾನುವಾರ ಬಾಂಗ್ಲಾದೇಶದ ವಿರುದ್ಧ 7 ರನ್ ನೀಡಿ 6 ರವಿಕೆಟ್ ಪಡೆಯುವ ಮೂಲಕ ಟಿ-20 ಇತಿಹಾಸದಲ್ಲಿ ಕಡಿಮೆ ರನ್ ನೀಡಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.