ಮುಂಬೈ: 2021ರ ಐಪಿಎಲ್ನ 2ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರಬಾಡ, ಎನ್ರಿಚ್ ನೋಕಿಯಾ ಇನ್ನೂ ಕ್ವಾರಂಟೈನ್ ಮುಗಿಸಿಲ್ಲದ ಕಾರಣ ಡೆಲ್ಲಿ ಪರ ಹೆಟ್ಮೈರ್, ಸ್ಟೋಯ್ನಿಸ್, ಕ್ರಿಸ್ ವೋಕ್ಸ್ ಮತ್ತು ಟಾಮ್ ಕರ್ರನ್ ವಿದೇಶಿ ಆಟಗಾರರ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಸಿಎಸ್ಕೆ ಪರ ಫಾಫ್ ಡು ಪ್ಲೆಸಿಸ್ , ಮೊಯೀನ್ ಅಲಿ, ಸ್ಯಾಮ್ ಕರ್ರನ್ ಮತ್ತು ಡ್ವೇನ್ ಬ್ರಾವೋ ಅವಕಾಶ ಪಡೆದಿದ್ದಾರೆ. ಕನ್ನಡಿಗರಾದ ರಾಬಿನ್ ಉತ್ತಪ್ಪ ಮತ್ತು ಕೃಷ್ಣಪ್ಪ ಗೌತಮ್ಗೆ ಆಡುವ 11ರ ಬಳಗದಲ್ಲಿ ಅವಕಾಶ ದೊರೆತಿಲ್ಲ.
ಆಶ್ಚರ್ಯವೆಂದರೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ರನ್ನು ಡೆಲ್ಲಿ ತಂಡ ಕಡೆಗಣಿಸಿದೆ. ವೇಗಿಗಳ ವಿಭಾಗದಲ್ಲಿ ಅನುಭವಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಯಾದವ್ ಬದಲು ಯುವ ವೇಗಿ ಆವೇಶ್ ಖಾನ್ಗೆ ಮಣೆ ಹಾಕಿದೆ.
-
.@DelhiCapitals Skipper @RishabhPant17 wins the toss and elects to bowl first against @ChennaiIPL.
— IndianPremierLeague (@IPL) April 10, 2021 " class="align-text-top noRightClick twitterSection" data="
Live - https://t.co/jtX8TWxySo #VIVOIPL #CSKvDC pic.twitter.com/sKGjc5y12U
">.@DelhiCapitals Skipper @RishabhPant17 wins the toss and elects to bowl first against @ChennaiIPL.
— IndianPremierLeague (@IPL) April 10, 2021
Live - https://t.co/jtX8TWxySo #VIVOIPL #CSKvDC pic.twitter.com/sKGjc5y12U.@DelhiCapitals Skipper @RishabhPant17 wins the toss and elects to bowl first against @ChennaiIPL.
— IndianPremierLeague (@IPL) April 10, 2021
Live - https://t.co/jtX8TWxySo #VIVOIPL #CSKvDC pic.twitter.com/sKGjc5y12U
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಸ್ಫೋಟಕ ದಾಂಡಿಗ ರಾಬಿನ್ ಉತ್ತಪ್ಪಗೆ ಅವಕಾಶ ನೀಡದೇ, ಕಳೆದ ಐಪಿಎಲ್ನ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ರುತುರಾಜ್ ಗಾಯಕ್ವಾಡ್ ಮತ್ತು ಅನುಭವಿ ರಾಯುಡುಗೆ ಅವಕಾಶ ನೀಡಿದೆ. ಬೌಲಿಂಗ್ ವಿಭಾಗದಲ್ಲಿ ಇಮ್ರಾನ್ ತಾಹೀರ್ ಬದಲು ಆಲ್ರೌಂಡರ್ ಮೊಯೀನ್ ಅಲಿ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಗಾಯಾಳು ರವೀಂದ್ರ ಜಡೇಜಾ ಮೂರು ತಿಂಗಳ ನಂತರ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದರೆ, ಕಳೆದ ಐಪಿಎಲ್ನಲ್ಲಿ ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದ ರೈನಾ ಮತ್ತೆ ಸಿಎಸ್ಕೆ ಬಳಗ ಸೇರಿಕೊಂಡಿದ್ದಾರೆ.
ವಾಂಖೆಡೆ ಸ್ಟೇಡಿಯಂ ಚೇಸಿಂಗ್ಗೆ ಹೇಳಿ ಮಾಡಿಸಿದಂತ ಮೈದಾನವಾಗಿದ್ದು, ಯುವ ಆಟಗಾರರನ್ನು ಹೊಂದಿರುವ ರಿಷಭ್ ಬಳಗ ಚೊಚ್ಚಲ ಗೆಲುವಿನ ವಿಶ್ವಾಸದಲ್ಲಿದೆ.
ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಎಂ.ಎಸ್. ಧೋನಿ (ನಾಯಕ/ವಿಕೀ), ಮೊಯೀನ್ ಅಲಿ, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್
ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ನಾಯಕ/ ವಿ.ಕೀ), ಮಾರ್ಕಸ್ ಸ್ಟೊಯ್ನಿಸ್, ಶಿಮ್ರಾನ್ ಹೆಟ್ಮೆಯರ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಟಾಮ್ ಕರ್ರನ್, ಅಮಿತ್ ಮಿಶ್ರಾ, ಅವೇಶ್ ಖಾನ್