ಹೈದರಾಬಾದ್: ಭಾನುವಾರ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಶತಕ ಸಾಧನೆ ಮಾಡುವ ಮೂಲಕ ಐಪಿಎಲ್ನಲ್ಲಿ ಸನ್ ರೈಸರ್ಸ್ನ ಮಾಜಿ ನಾಯಕ ಡೇವಿಡ್ ವಾರ್ನರ್ ಹಲವು ದಾಖಲೆಗಳನ್ನು ಮುರಿದ್ದಾರೆ.
ಒಂದು ವರ್ಷದ ನಿಷೇಧ ಶಿಕ್ಷೆಯಿಂದ ಕ್ರಿಕೆಟ್ನಿಂದ ದೂರವಿದ್ದ ವಾರ್ನರ್ ಪ್ರಸ್ತುತ ವರ್ಷದ ಐಪಿಎಲ್ ಪಂದ್ಯದಲ್ಲೂ ಅಬ್ಬರಿಸುತ್ತಿದ್ದಾರೆ. ಈಗಾಗಲೆ ಆಡಿರುವ ಮೂರು ಪಂದ್ಯಗಳಲ್ಲೂ ಎರಡು ಅರ್ಧಶತಕ, ಒಂದು ಶತದ ಸಹಿತ 254 ರನ್ ಸಿಡಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ವಾರ್ನರ್ 55 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ ಬರೋಬ್ಬರಿ 100 ರನ್ ಗಳಿಸಿ ಐಪಿಎಲ್ನಲ್ಲಿ ತಮ್ಮ 4ನೇ ಶತಕ ಪೂರ್ಣಗೊಳಿಸಿರು. ಈ ಮೂಲಕ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಾಟ್ಸನ್ ದಾಖಲೆ ಸರಿಗಟ್ಟಿದರು. ಕೊಹ್ಲಿ ಕೂಡ ಐಪಿಎಲ್ನಲ್ಲಿ 4 ಶತಕ ಸಿಡಿಸಿದ್ದಾರೆ. ಇನ್ನು ಕ್ರಿಸ್ ಗೇಲ್ 6 ಸತಕ ಸಿಡಿಸಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
CENTURY WARNER 😍
— IndianPremierLeague (@IPL) March 31, 2019 " class="align-text-top noRightClick twitterSection" data="
Oh what a player! Magnificent innings from @davidwarner31 as he brings up his 4th #VIVOIPL 💯 pic.twitter.com/sGiZ2Wez4R
">CENTURY WARNER 😍
— IndianPremierLeague (@IPL) March 31, 2019
Oh what a player! Magnificent innings from @davidwarner31 as he brings up his 4th #VIVOIPL 💯 pic.twitter.com/sGiZ2Wez4RCENTURY WARNER 😍
— IndianPremierLeague (@IPL) March 31, 2019
Oh what a player! Magnificent innings from @davidwarner31 as he brings up his 4th #VIVOIPL 💯 pic.twitter.com/sGiZ2Wez4R
ಹೆಚ್ಚು ರನ್ ದಾಖಲೆಯಲ್ಲಿ 4 ನೇ ಸ್ಥಾನಕ್ಕೇರಿದ ವಾರ್ನರ್:
ಡೇವಿಡ್ ವಾರ್ನರ್ ನಿನ್ನೆಯ ಪಂದ್ಯದಲ್ಲಿ 100 ರನ್ ಗಳಿಸುವ ಮೂಲಕ ರಾಬಿನ್ ಉತ್ತಪ್ಪ(4242 ) ದಾಖಲೆ ಮುರಿದು ಹೆಚ್ಚು ರನ್ ಗಳಿಸಿದ ಆಟಗಾರರ ಲಿಸ್ಟ್ನಲ್ಲಿ 4 ನೇಸ್ಥಾನಕ್ಕೇರಿದರು. ಇನ್ನು ವಾರ್ನರ್ 117 ಪಂದ್ಯಗಳಲ್ಲಿ 4268 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
ಡೇವಿಡ್ ವಾರ್ನರ್ ಅತಿ ಹೆಚ್ಚು ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಡೇವಿಡ್ 117 ಪಂದ್ಯಗಳಲ್ಲಿ 38 ಅರ್ಧಶತಕ ಸಿಡಿಸಿದ್ದಾರೆ.