ಸಿಡ್ನಿ: ಕೊರೊನಾ ವೈರಸ್ ಭೀತಿಯಿಂದ ವಿಶ್ವದ ಪ್ರಮುಖ ಕ್ರೀಡಾಕೂಟಗಳು ಸ್ಥಗಿತಗೊಂಡಿರುವುದರಿಂದ ಕ್ರೀಡಾಪಟುಗಳು ಬಿಡುವಿನ ವೇಳೆಯಲ್ಲಿ ಸಾಮಾಜಿಕ ಜಾಲಾತಾಣಗಳ ಮೊರೆ ಹೋಗಿದ್ದು, ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ, ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಇಂದು ಇನ್ಸ್ಟಾಗ್ರಾಂ ಲೈವ್ ಸಂವಾದಲ್ಲಿ ಸನ್ರೈಸರ್ಸ್ ಹೈದರಾಬಾದ್ನ ನಾಯಕ ಡೇವಿಡ್ ವಾರ್ನರ್ ಹಾಗೂ ತಂಡದ ಸಹ ಆಟಗಾರ ಕೇನ್ ವಿಲಿಯಮ್ಸನ್ ಭಾಗಿಯಾಗಿದ್ದಾರೆ.
ಈ ವೇಳೆ, ಪ್ರಸ್ತುತ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆ ಇಬ್ಬರ ನಡುವೆ ಬಂದಿದ್ದು, ಮೊದಲು ಉತ್ತರಿಸಿದ ವಿಲಿಯಮ್ಸನ್, ಒಬ್ಬರ ಹೆಸರನ್ನು ಹೇಳುವುದು ಕಷ್ಟ, ಎಂದಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಹೆಸರನ್ನು ಆಯ್ಕೆ ಮಾಡಿದ್ದಾರೆ.
"ಒಬ್ಬರನ್ನು ಆಯ್ಕೆ ಮಾಡಿ ತೋರಿಸುವುದು ಕ್ಲಿಷ್ಠಕರವಾಗಿದೆ. ಎಬಿಡಿ ಸಧ್ಯಕ್ಕೆ ಪ್ರಾಂಚೈಸಿ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ ಎಂದು ನಾನು ತಿಳಿದಿದ್ದೇನೆ. ಆದರೂ ಆತ ಪ್ರತಿಭಾನ್ವಿತ ಆಟಗಾರರ ಪಟ್ಟಿಯಲ್ಲಿ ಇದ್ದೇ ಇರುತ್ತಾರೆ. ಅವರೂ ಉನ್ನತ ವ್ಯಕ್ತಿ ಕೂಡ. ಅದರಲ್ಲೂ ನಮ್ಮ ಕಾಲದ ವಿಶೇಷ ಆಟಗಾರರಲ್ಲಿ ಒಬ್ಬರು"
ಇನ್ನು ಭಾರತದ ಕೊಹ್ಲಿ ಎಲ್ಲ ಮಾದರಿಯಲ್ಲೂ ಬೆಸ್ಟ್ ಪ್ಲೇಯರ್. ಪ್ರಾಬಲ್ಯ ಸಾಧಿಸುವ ಹಸಿವನ್ನು ಹೊಂದಿದ್ದಾರೆ. ಅವರನ್ನು ನೋಡಲು, ಅವರ ವಿರುದ್ಧ ಆಡಲು ಮತ್ತು ಅವರಿಂದ ಕಲಿಯಲು ಕೂಡ ಸಾಧ್ಯವಾಗಿದೆ. ಅವರು ತುಂಬಾ ಎತ್ತರಕ್ಕೇರಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.
ವಾರ್ನರ್ ಮೂವರ ಹೆಸರನ್ನು ಆಯ್ಕೆ ಮಾಡಿದ್ದು, ಅವರೂ ಕೂಡ ಕೊಹ್ಲಿಯನ್ನು ಬಿಟ್ಟುಕೊಟ್ಟಿಲ್ಲ. ಇನ್ನುಳಿದಂತೆ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಹಾಗೂ ಕೇನ್ ವಿಲಿಯಮ್ಸನ್ರನ್ನು ಆಯ್ಕೆ ಮಾಡಿದ್ದಾರೆ.