ಪಾಟ್ನಾ: ಬಿಹಾರ್ ಕ್ರಿಕೆಟ್ ಲೀಗ್ ಸಖತ್ ಆಗಿಯೇ ನಡೆಯುತ್ತಿದೆ. ನಿನ್ನೆ ನಡೆದ ಪಂದ್ಯ ರೋಚಕತೆಯಿಂದ ಕೂಡಿದ್ದು, ಕೇವಲ ಒಂದೇ ಒಂದು ರನ್ನಿಂದ ತಂಡವೊಂದು ಸೋಲಿಗೆ ಶರಣಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ದರ್ಭಾಂಗ್ ಡೈಮಂಡ್ಸ್ ವಿರುದ್ಧ ಪಾಟ್ನಾ ಪೈಲಟ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ದರ್ಭಾಂಗ್ ಡೈಮಂಡ್ಸ್ ನಿಗದಿತ 20 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 174 ರನ್ಗಳನ್ನು ಕಲೆ ಹಾಕಿತ್ತು.
ದರ್ಭಾಂಗ್ ಡೈಮಂಡ್ಸ್ ನೀಡಿದ ಮೊತ್ತವನ್ನು ಬೆನ್ನಟ್ಟಿದ ಪಾಟ್ನಾ ಪೈಲಟ್ಸ್ ಕೇವಲ ಒಂದು ರನ್ನಿಂದ ಸೋಲನ್ನಪ್ಪಿದೆ. ನಿಗದಿತ 20 ಓವರ್ಗಳಿಗೆ 9 ವಿಕೆಟ್ಗಳನ್ನು ಕಳೆದುಕೊಂಡು 173 ರನ್ಗಳನ್ನು ಕಲೆಹಾಕುವ ಮೂಲಕ ಒಂದು ರನ್ನಿಂದ ಸೋಲಿಗೆ ಶರಣಾಯಿತು. ಈ ಪಂದ್ಯ ಕೊನೆಯ ಹಂತದಲ್ಲಿ ರೋಚಕದಿಂದ ಕೂಡಿದ್ದು, ಈ ವೇಳೆ ಎಲ್ಲರ ಗಮನ ಸೆಳೆದಿತ್ತು.