ETV Bharat / sports

ಡೇಲ್​ ಸ್ಟೈನ್​ ನಾನೆದುರಿಸಿದ ಅತ್ಯುತ್ತಮ ಬೌಲರ್ ಎಂದ ಭಾರತದ ಕ್ರಿಕೆಟ್​ ದಂತಕತೆ

author img

By

Published : Aug 6, 2019, 7:41 PM IST

ದಕ್ಷಿಣ ಆಫ್ರಿಕಾದ ಡೇಲ್​ ಸ್ಟೈನ್​​ರನ್ನು ತಾವೆದುರಿಸಿದ ಉತ್ತಮ ಬೌಲರ್​ಗಳಲ್ಲಿ ಒಬ್ಬರು ಎಂದು ಸಚಿನ್​ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

Dale Steyn

ಮುಂಬೈ: ಕ್ರಿಕೆಟ್​ ದೇವರೆಂದೇ ಖ್ಯಾತರಾದ ಸಚಿನ್​ ತೆಂಡೂಲ್ಕರ್​ ಸೋಮವಾರ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಡೇಲ್​ ಸ್ಟೈನ್​​ರನ್ನು ತಾವೆದುರಿಸಿದ ಉತ್ತಮ ಬೌಲರ್​ಗಳಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.

ವಿಶ್ವದ ವೇಗದ ಬೌಲರ್​ಗಳಲ್ಲಿ ಒಬ್ಬರಾದ ಡೇಲ್​ ಸ್ಟೈನ್ ಟಿ-20 ಹಾಗೂ ಏಕದಿನ ಕ್ರಿಕೆಟ್​ನತ್ತ ಹೆಚ್ಚು ಗಮನ ನೀಡುವ ಸಲುವಾಗಿ ಟೆಸ್ಟ್​ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾದ ಪರ ಹೆಚ್ಚು ಟೆಸ್ಟ್​ ವಿಕೆಟ್​ ಪಡೆದಿರುವ ಸ್ಟೈನ್​ಗೆ ಭಾರತದ ಲೆಜೆಂಡ್​ ಸಚಿನ್​ ಶುಭ ಕೋರಿದ್ದು, ಅವರ ಬೌಲಿಂಗ್​ ಎದುರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

sachin-tendulkar
ಸಚಿನ್​ ತೆಂಡೂಲ್ಕರ್

ಜೇಮ್ಸ್​ ಆ್ಯಂಡರ್ಸನ್​ ನಂತರ ಉತ್ತಮವಾಗಿ ಸ್ವಿಂಗ್​ ಮಾಡಬಲ್ಲ ಬೌಲರ್​ ಸ್ಟೈನ್​ ಒಬ್ಬರೇ. 150 ಕಿಮೀ ವೇಗದಲ್ಲಿ ಬೌಲಿಂಗ್​ ಮಾಡಬಲ್ಲ ಸ್ಟೈನ್​ ಸ್ವಿಂಗ್​ ಮಾಡುವುದರಲ್ಲಿ ಹೆಚ್ಚು ಸ್ಥಿರತೆ ಹೊಂದಿದ್ದರು. ಅವರ ಬೌಲಿಂಗ್​ ಎದುರಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಆತ ವೇಗದ ಬೌಲಿಂಗ್​ನಲ್ಲಿ ಮಾಸ್ಟರ್​ ಆಗಿದ್ದರು ಎಂದು ಸಚಿನ್​ ತಿಳಿಸಿದ್ದಾರೆ.

  • Wishing you all the very best for the future @DaleSteyn62. You always challenged batsmen to bring their A-game to the ground.
    It’s been a joy to watch you bowl and play against you. pic.twitter.com/CndQbGsOU4

    — Sachin Tendulkar (@sachin_rt) August 6, 2019 " class="align-text-top noRightClick twitterSection" data=" ">

2011 ರಲ್ಲಿ ನಡೆದಿದ್ದ ಕೇಪ್​ಟೌನ್​ ಟೆಸ್ಟ್ ಪಂದ್ಯದಲ್ಲಿ ಸತತ ಒಂದು ಗಂಟೆ ಸ್ಟೈನ್​ ತಮಗೊಬ್ಬರಿಗೆ ಬೌಲಿಂಗ್​ ಮಾಡಿದ್ದು, ಅವರ 24 ವರ್ಷಗಳ ಕ್ರಿಕೆಟ್​ ಜೀವನದ ಅತ್ಯುತ್ತಮ ಸಮಯ ಎಂದು ಬಣ್ಣಿಸಿದ್ದಾರೆ. ಆ ಪಂದ್ಯದ ವೇಳೆ ಒಂದು ಗಂಟೆ ಸಮಯ ಸಚಿನ್​ ಸ್ಟೈನ್​ ಬೌಲಿಂಗ್​ ಎದುರಿಸಿದ್ದರೆ, ಜೊತೆಗಾರ ಗಂಭೀರ್​ ಮಾರ್ನ್​ ಮಾರ್ಕೆಲ್​ ಬೌಲಿಂಗ್​ಗೆ ಮಾತ್ರ ಆಡಿದ್ದರಂತೆ. ಇಬ್ಬರೂ ಒಂದು ಬಾರಿಯೂ ಸ್ಟ್ರೈಕ್​ ಬದಲಿಸಿಕೊಳ್ಳಲು ಸಾಧ್ಯವಾಗದಷ್ಟು ಕಠಿಣವಾಗಿ ಆ ಇಬ್ಬರು ಬೌಲಿಂಗ್​ ನಡೆಸಿದ್ದರೆಂದು ಸಚಿನ್​ ನೆನೆಪಿಸಿಕೊಂಡಿದ್ದಾರೆ.

ಸ್ಟೈನ್​ ಜೊತೆಗಿನ ಹೋರಾಟದ ಪ್ರತಿಕ್ಷಣವನ್ನು ನಾನು ಸಂಭ್ರಮಿಸಿದ್ದೇನೆ. ಅವರ ಮುಂದಿನ ವೃತ್ತಿ ಜೀವನ ಸುಖಮಯವಾಗಿರಲಿ ಎಂದು ಸಚಿನ್​ ಶುಭಕೋರಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.