ದುಬೈ: ಸೆಪ್ಟಂಬರ್ 19ರಿಂದ ಅರಬ್ ದೇಶ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಎಲ್ಲ ಪ್ರಾಂಚೈಸಿಗಳು ಸಜ್ಜಾಗಿದ್ದು, 8 ತಂಡಗಳು ದುಬೈ ಸೇರಿಕೊಂಡಿವೆ.
- " class="align-text-top noRightClick twitterSection" data="
">
ಕೊರೊನಾ ಮಹಾಮಾರಿ ಸಂಬಂಧ ಆಟಗಾರರು ಆರು ದಿನ ಕ್ವಾರಂಟೈನ್ನಲ್ಲಿರಬೇಕೆಂಬ ನಿಬಂಧನೆ ಇದೆ. ಆದ್ರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಸುರೇಶ್ ರೈನಾ ರ‍್ಯಾಪ್ ಸಾಂಗ್ ಹಾಡಿದ್ದಾರೆ. ಈ ರ‍್ಯಾಪ್ ಸಾಂಗ್ನಲ್ಲಿ ಆಟದ ಜೊತೆ ಬುರ್ಜ್ ಖಲೀಫಾ ಕಟ್ಟಡದ ಬಗ್ಗೆ ಹಾಡಿ ಹೊಗಳಿದ್ದಾರೆ.
ಈ ರ‍್ಯಾಪ್ ಸಾಂಗ್ನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ‘ಕ್ವಾರಂಟೈನ್ ಸಮಯದಲ್ಲಿ ನಾನು ಇದೇ ಮಾಡಬೇಕಾಗುತ್ತೆ. ವಿಡಿಯೋ ರೆಕಾರ್ಡ್ ಮಾಡಿ ಎಲ್ಲರನ್ನು ಸಂತೋಷಪಡಿಸುವುದೇ ನನ್ನ ಕೆಲಸ. ಈ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಹೇಳಿ’ ಅಂತಾ ಸುರೇಶ್ ರೈನಾ ಕ್ಯಾಪ್ಷನ್ ಹಾಕಿದ್ದಾರೆ.
ಕ್ವಾರಂಟೈನ್ ಸಮಯದಲ್ಲಿ ಜಿಮ್ ಮಾಡುತ್ತಾ, ದಿನ ಪೂರ್ತಿ ನೆಟ್ಫ್ಲೆಕ್ಸ್ನಲ್ಲಿ ಕಳೆಯುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಸೂಪರ್ ಕಿಂಗ್ಸ್ ಆಟಗಾರ ಸುರೇಶ್ ರೈನಾ.
ಸುರೇಶ್ ರೈನಾ ಮೊದಲಿನಿಂದಲೂ ಸಂಗೀತದ ಮೇಲೆ ಆಸಕ್ತಿ ಹೊಂದಿರುವುದು ತಿಳಿದಿರುವ ಸಂಗತಿ.