ETV Bharat / sports

ವೆಸ್ಟ್​ ಇಂಡೀಸ್​ ತಂಡದಿಂದಲೂ ಹೊರಬಿದ್ದ ಡ್ವೇನ್ ಬ್ರಾವೋ - ಡ್ವೇನ್ ಬ್ರಾವೋ ಬದಲಿ ಆಟಗಾರ

ವೆಸ್ಟ್ ಇಂಡೀಸ್ ತಂಡ ಮುಂದಿನ ತಿಂಗಳು ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಳ್ಳಲಿದೆ. ಗಾಯಾಳುವಾಗಿರುವ ಬ್ರಾವೋ 2-3 ವಾರಗಳ ವಿಶ್ರಾಂತಿ ಪಡೆಯಬೇಕಿರುವುದರಿಂದ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಬ್ರಾವೋ ಬದಲು ಮಧ್ಯಮ ವೇಗಿ ರೊಮಾರಿಯೋ ಶೆಫರ್ಡ್​​​ಗೆ ಅವಕಾಶ ನೀಡಿದೆ.

ಡ್ವೇನ್ ಬ್ರಾವೋ
ಡ್ವೇನ್ ಬ್ರಾವೋ
author img

By

Published : Oct 22, 2020, 5:59 PM IST

ದುಬೈ: ಗಾಯಗೊಂಡು ಐಪಿಎಲ್​ನಿಂದ ಹೊರ ಬಿದ್ದಿರುವ ಸಿಎಸ್​ಕೆ ಆಲ್​ರೌಂಡರ್​ ಡ್ವೇನ್ ಬ್ರಾವೋ ಇದೀಗ ವೆಸ್ಟ್​ ಇಂಡೀಸ್ ತಂಡದಿಂದಲೂ ಹೊರಬಿದ್ದಿದ್ದಾರೆ.

ವೆಸ್ಟ್ ಇಂಡೀಸ್ ತಂಡ ಮುಂದಿನ ತಿಂಗಳು ನ್ಯೂಜಿಲ್ಯಾಂಡ್​​​ ಪ್ರವಾಸ ಕೈಗೊಳ್ಳಲಿದೆ. ಗಾಯಾಳುವಾಗಿರುವ ಬ್ರಾವೋ 2-3 ವಾರಗಳ ವಿಶ್ರಾಂತಿ ಪಡೆಯಬೇಕಿರುವುದರಿಂದ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಬ್ರಾವೋ ಬದಲು ಮಧ್ಯಮ ವೇಗಿ ರೊಮಾರಿಯೋ ಶೆಫರ್ಡ್​​​​ಗೆ ಅವಕಾಶ ನೀಡಿದೆ.

ತೊಡೆಸಂದು ಗಾಯಕ್ಕೀಡಾಗಿರುವ ಡ್ವೇನ್ ಬ್ರಾವೋ ಐಪಿಎಲ್​ನಿಂದ ಹೊರ ಬಿದ್ದಿದ್ದರು. ಬ್ರಾವೋ ಅವರ ಗಾಯ ಶೀಘ್ರದಲ್ಲಿ ಗುಣಮುಖ ಆಗುವ ಸಾಧ್ಯತೆ ಕಡಿಮೆ ಇರುವುದರಿಂದ ನ್ಯೂಜಿಲ್ಯಾಂಡ್​ ಟಿ-20 ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

" ನ್ಯೂಜಿಲ್ಯಾಂಡ್​ ಪ್ರವಾಸವನ್ನು ಎದುರು ನೋಡುತ್ತಿದ್ದೆ. ಏಕೆಂದರೆ ನಾನು ಕೊನೆಯ ಬಾರಿ ವಿಂಡೀಸ್ ಜರ್ಸಿ ತೊಟ್ಟಿದ್ದು, ಕಳೆದ ಮಾರ್ಚ್​ನಲ್ಲಿ. ಆದರೆ, ಗಾಯದ ಸಮಸ್ಯೆಯಿಂದ ನಾನು ಐಪಿಎಲ್‌ನಿಂದ ಹೊರ ಬಿದ್ದಿದ್ದೇನೆ. ವಿಂಡೀಸ್ ತಂಡದಲ್ಲಿ ಅವಕಾಶ ಪಡೆದಿರುವ ಶೆಫಿಗೆ ಅಭಿನಂದನೆಗಳು " ಎಂದು ಬ್ರಾವೋ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.