ತೈಪೆ: ಕ್ರಿಕೆಟ್ ಸೇರಿದಂರೆ ಹಲವು ಕ್ರೀಡೆಗಳು ಕೊವಿಡ್ 19 ಭೀತಿಗೆ ಬಾಗಿಲು ಮುಚ್ಚಿದ್ದವು. ಇದೀಗೆ ಕೆಲವು ರಾಷ್ಟ್ರಗಳಲ್ಲಿ ಗಣನೀಯವಾಗಿ ಕೊವಿಡ್ 19 ಕಡಿಮೆಯಾಗಿರುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳು ಗರಿಗೆದರುತ್ತಿವೆ.
ಇಂದಿನಿಂದ ಆರಂಭವಾಗಲಿರುವ ತೈಪೆ ಟಿ10 ಲೀಗ್ ಕೇವಲ ಶನಿವಾರ ಮತ್ತು ಭಾನುವವಾರ ನಡೆಯಲಿದೆ. ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು ಮೇ 17ರಂದು ಫೈನಲ್ ಪಂದ್ಯ ನಡೆಯಲಿದೆ.
ಹ್ಸಿಂಚು ಟೈಟನ್ಸ್, ತೈವಾನ್ ಡೇರ್ಡೇವಿಲ್ಸ್, ಟಿಸಿಎ ಇಂಡಿಯನ್ಸ್, ಚೈಯಿ ಸ್ವಿಂಗರ್ಸ್, ಪಿಸಿಸಿಟಿ ಯುನೈಟೆಡ್, ಐಸಿಸಿಟಿ ಸ್ಮಾಶರ್ಸ್, ತೈವಾನ್ ಡ್ರಾಗನ್ಸ್ ಮತ್ತು ಎಫ್ಸಿಸಿ ಫೋರೋಮ್ಸಾನ್ಸ್ ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಕೋವಿಡ್ 19 ಭೀತಿಯಿಂದ ಇಂಡಿಯನ್ ಪ್ರೀಮಿಯರ್ ಲೀಗ್, ಟೋಕಿಯೋ ಒಲಿಂಪಿಕ್ಸ್ ಸೇರಿದಂತೆ ವಿಶ್ವದ ಬಹುತೇಕ ಕ್ರೀಡಾಕೂಟಗಳು ಈಗಾಗಲೆ ನಿಷೇಧಗೊಂಡಿದ್ದರೆ, ಇನ್ನು ಕೆಲವು ಮುಂದೂಡಲ್ಪಟ್ಟಿವೆ.