ETV Bharat / sports

ಡಿ. 3ರಿಂದ ಭಾರತ-ಆಸ್ಟ್ರೇಲಿಯಾ ಟೆಸ್ಟ್​ ಸರಣಿ ಆರಂಭ: ಇಂದು ಅಧಿಕೃತ ಪ್ರಕಟಣೆ ಸಾಧ್ಯತೆ - India tour of Australia

ಕಳೆದ ಮಾರ್ಚ್​ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಪಂದ್ಯವನ್ನಾಡಿವೆ. ಇದೀಗ ಡಿಸೆಂಬರ್​ನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಸಜ್ಜಾಗಿವೆ. ಇದರಲ್ಲಿ ಒಂದು ಡೇ ಅಂಡ್​ ನೈಟ್ ಟೆಸ್ಟ್ ಪಂದ್ಯ ಕೂಡ ಸೇರಿದೆ.

ಭಾರತ - ಆಸ್ಟ್ರೇಲಿಯಾ
ಭಾರತ - ಆಸ್ಟ್ರೇಲಿಯಾ
author img

By

Published : May 28, 2020, 1:10 PM IST

ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್​ ಸರಣಿಯ ವೇಳಾಪಟ್ಟಿ ಪ್ರಕಟಿಸಲು ಸಜ್ಜಾಗಿದ್ದು, ಸ್ಥಳೀಯ ಮಾಧ್ಯಮದವೊಂದರ ಪ್ರಕಾರ ಡಿಸೆಂಬರ್​ 3ರಿಂದ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ ಎನ್ನಲಾಗುತ್ತಿದೆ.

ಕಳೆದ ಮಾರ್ಚ್​ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಪಂದ್ಯವನ್ನಾಡಿವೆ. ಇದೀಗ ಡಿಸೆಂಬರ್​ನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲು ಸಜ್ಜಾಗಿವೆ. ಇದರಲ್ಲಿ ಒಂದು ಡೇ ಅಂಡ್​ ನೈಟ್ ಟೆಸ್ಟ್ ಪಂದ್ಯ ಕೂಡ ಸೇರಿದೆ.

ಸ್ಥಳೀಯ ಮಾಧ್ಯಮದ ವರದಿಯ ಪ್ರಕಾರ ಡಿಸೆಂಬರ್​ 3ರಿಂದ ಬ್ರಿಸ್ಬೇನ್‌ನಲ್ಲಿ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ದ್ವಿತೀಯ ಟೆಸ್ಟ್​ ಪಂದ್ಯ ಡಿಸೆಂಬರ್​ 11ರಿಂದ ಅಡಿಲೇಡ್​ನಲ್ಲಿ, ಮೂರನೇ ಟೆಸ್ಟ್​ ಪಂದ್ಯ ಡಿಸೆಂಬರ್​ 26ರಿಂದ ಮೆಲ್ಬೋರ್ನ್​ನಲ್ಲಿ ಹಾಗೂ ಕೊನೆಯ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ. ಈ ವೇಳಾಪಟ್ಟಿಯನ್ನು ಸಿಎ ಶುಕ್ರವಾಕ ಅಧಿಕೃತವಾಗಿ ಪ್ರಕಟ ಮಾಡಲಿದೆ.

ಅಡಿಲೇಡ್​ನಲ್ಲಿ ನಡೆಯುವ ಎರಡನೇ ಟೆಸ್ಟ್​ ಪಂದ್ಯ ಹಗಲು ರಾತ್ರಿ ಪಂದ್ಯವಾಗುವ ಸಾಧ್ಯತೆಯಿದೆ. ಇದರ ಬಗ್ಗೆ ಬಿಸಿಸಿಐ ಹಾಗೂ ಸಿಎ ನಡುವೆ ಮಾತುಕತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.