ETV Bharat / sports

ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್​​: ವರ್ಷಾಂತ್ಯಕ್ಕೆ ಇಂಡೋ-ಆಸೀಸ್​​​ ಸರಣಿ - ಭಾರತೀಯ ಕ್ರಿಕೆಟ್​ ಮಂಡಳಿ

ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಟೆಸ್ಟ್ ಸರಣಿ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್​ ರಾಬರ್ಟ್​ ತಿಳಿಸಿದ್ದಾರೆ.

Cricket Australia planning of going ahead with Ind-Aus series behind closed doors
ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ ನ್ಯೂಸ್​​: ವರ್ಷಾಂತ್ಯಕ್ಕೆ ಇಂಡೋ-ಆಸಿಸ್​​ ಸರಣಿ
author img

By

Published : Apr 21, 2020, 8:00 PM IST

ಮೆಲ್ಬರ್ನ್​​​: ಕೊರೊನಾ ಭೀತಿಯಿಂದಾಗಿ ವಿಶ್ವದ ಕ್ರೀಡಾ ಕ್ಷೇತ್ರ ಸಂಪೂರ್ಣ ಸ್ತಬ್ಧವಾಗಿದೆ. ವಿಶ್ವದ ಪ್ರತಿಷ್ಠಿತ ಟೂರ್ನಿಗಳು ರದ್ದಾಗಿದ್ದು, ಕೊರೊನಾ ಭೀತಿ ಅಂತ್ಯವಾಗುವವರೆಗೂ ಕ್ರೀಡೆಗೆ ಬ್ರೇಕ್​ ನೀಡಲಾಗಿದೆ.

ಈ ನಡುವೆ ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಟೆಸ್ಟ್ ಸರಣಿ ಈ ವರ್ಷದ ಅಂತ್ಯದಲ್ಲಿ ನಡೆಯಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್​ ರಾಬರ್ಟ್​ ತಿಳಿಸಿದ್ದಾರೆ.

ಈ ವರ್ಷಾಂತ್ಯಕ್ಕೆ ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ನಿಗದಿಯಾಗಿರುವ ಟೆಸ್ಟ್ ಸರಣಿ ನಡೆಸಲು ತೀರ್ಮಾನಿಸಿವೆ ಎಂದಿದ್ದಾರೆ. ಇದು 5 ಪಂದ್ಯಗಳ ಸರಣಿಯಾಗಿರುವ ಸಾಧ್ಯತೆ ಇದೆ. ಆದರೆ ಪ್ರೇಕ್ಷಕರಿಗೆ ಈ ಪಂದ್ಯಾವಳಿ ನೇರವಾಗಿ ನೋಡುವ ಅವಕಾಶವಿರುವುದಿಲ್ಲ ಎಂದಿದ್ದಾರೆ.

ಮೈದಾನದೊಳಗೆ ಪ್ರೇಕ್ಷಕರು ಇರಲಿ ಬಿಡಲಿ, ನಾವು ಬಿಸಿಸಿಐ, ಭಾರತೀಯ ಆಟಗಾರರು ಹಾಗೂ ಅವರ ಸಿಬ್ಬಂದಿಯ ಜೊತೆಗೆ ಕ್ರಿಕೆಟ್​ ಜಗತ್ತನ್ನೇ ಪ್ರೇರೇಪಿಸುವಂತಹ ಸರಣಿ ಹಮ್ಮಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಸರಣಿ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಮುಂದಿನ ವರ್ಷದಲ್ಲಿ ಈ ಸರಣಿ ಅವಿಸ್ಮರಣೀಯವಾಗಿ ಉಳಿಯಲಿದೆ. ಇದಕ್ಕಾಗಿ ನಾವು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಸರಣಿಯನ್ನು ಅತ್ಯಂತ ಸೃಜನಶೀಲ ರೀತಿಯಲ್ಲಿ ಕ್ರಿಕೆಟ್​​ ಜಗತ್ತಿಗೆ ಪ್ರೇರಣೆಯಾಗಿ ನೀಡಲಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.